ಬೆಂಗಳೂರಿಗೆ ಬಂತು ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್: ಪಾರ್ಸಲ್ ಸ್ವೀಕರಿಸುವಾಗಲೇ ಲಾಕ್​​

ಬೆಂಗಳೂರಿನಲ್ಲಿ ಹೊಸ ರೀತಿಯ ಜೆಲ್ಲಿ ಗಾಂಜಾ ಪತ್ತೆಯಾಗಿದ್ದು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಿ ಮಾರಾಟ ಮಾಡಲಾಗುತ್ತಿದೆ. ಸದ್ಯ ವಿಷಯ ತಿಳಿಯುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಮೂರು ಲಕ್ಷ ಮೌಲ್ಯದ 1440 ಗ್ರಾಂ ಜೆಲ್ಲಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿಗೆ ಬಂತು ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್: ಪಾರ್ಸಲ್ ಸ್ವೀಕರಿಸುವಾಗಲೇ ಲಾಕ್​​
ಬಂಧಿತರು

Updated on: Jun 26, 2025 | 8:49 AM

ಬೆಂಗಳೂರು, ಜೂನ್​ 26: ನಗರಕ್ಕೆ ಹೊಸ ಮಾದರಿಯ ಜೆಲ್ಲಿ ಗಾಂಜಾ (ganja) ಎಂಟ್ರಿ ಕೊಟ್ಟಿದೆ. ಜೆಲ್ಲಿ ಚಾಕೊಲೇಟ್​​ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್​​ ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಇದೀಗ ಜೆಲ್ಲಿ ಗಾಂಜಾ ಗ್ಯಾಂಗ್​​ ಅನ್ನು ಬಂಧಿಸಿದ್ದಾರೆ (Arrested). ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮೂರು ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ

ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು, ಒಟ್ಟು ಮೂರು ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ತಬಿಖೆ ವೇಳೆ ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿರುವುದು ಪತ್ತೆ ಆಗಿದೆ.

ಇದನ್ನೂ ಓದಿ: ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಇದನ್ನೂ ಓದಿ
ಬೈಕ್ ಟ್ಯಾಕ್ಸಿ ನಿಷೇಧದಿಂದ ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್​ಗಳಿಗೂ ಕಷ್ಟ!
ಕೊಡಗಿಗೆ ರೆಡ್ ಅಲರ್ಟ್​, ಕರ್ನಾಟಕದ ಕರಾವಳಿ, ಮಲೆನಾಡಿನಲ್ಲೂ ಮಳೆ ಜೋರು
ಗ್ರಾಹಕರಿಗೆ ಮತ್ತೊಂದು ಶಾಕ್: ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ಮೆಟ್ರೋ ಟಿಕೆಟ್!

ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಆರೋಪಿಗಳು ವಾಸವಿದ್ದರು. ಮಂಗಳೂರು ಮೂಲದ ಸ್ನೇಹಿತನ ಮೂಲಕ ದಂಧೆ ನಡೆಸುತ್ತಿದ್ದರು. ಸದ್ಯ ಆರೋಪಿಗಳು ಈ ಜೆಲ್ಲಿ ಗಾಂಜಾವನ್ನು ಎಲ್ಲಿ ತಯಾರು ಮಾಡುತ್ತಿದ್ದರು ಎಂಬುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಒಂದು ಪ್ಯಾಕ್​ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ

ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಈ ಜೆಲ್ಲಿ ಚಾಕೊಲೇಟ್‌ಗಳ ಜೊತೆ ಬೆರೆಸುತ್ತಾರೆ. ಒಂದು ಪ್ಯಾಕ್​ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಜೆಲ್ಲಿ ಬಾಯಿಗೆ ಇಟ್ಟ ಬಳಿಕ ಕರಗುತ್ತೆ. ಆಮೇಲೆ ಅಗೆದಷ್ಟು ಮತ್ತಲ್ಲಿ ತಲೆತಿರುಗುತ್ತೆ.

ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್​​ಗಿಂತ ಈ ಜೆಲ್ಲಿ ಗಾಂಜಾ ಕಿಕ್ಕು ಹೆಚ್ಚು ಎನ್ನಲಾಗುತ್ತಿದೆ. ಪಾಕೆಟ್​​ನಲ್ಲಿಟ್ಟುಕೊಂಡರೂ ಯಾರಿಗೂ ಡೌಟ್ ಬರಲ್ಲ. ಒಂದು ವೇಳೆ ಪೊಲೀಸರೇ ತಡಕಾಡಿದರೂ ಪೆಡ್ಲರ್ ಯಾರು, ಗ್ರಾಹಕ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲವಂತೆ.

ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಬಂಧನ

ಇನ್ನು ಇತ್ತೀಚೆಗೆ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬುವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ 200 ರೂ. ದಾಟಿದ ಕೊಬ್ಬರಿ ಎಣ್ಣೆ ದರ: ಕೊಬ್ಬರಿಗೆ ಬೇಡಿಕೆ ಗಣನೀಯ ಹೆಚ್ಚಳ

ನೈಜೀರಿಯಾ ಮೂಲದ ಆರೋಪಿ ಬ್ಯುಸಿನೆಸ್ ವೀಸಾದಡಿ ಬೆಂಗಳೂರಿಗೆ ಬಂದು, ತನ್ನ ದೇಶದಿಂದಲೇ ಕೆಜಿಗಟ್ಟಲೇ ಡ್ರಗ್ ತಂದು ಡೀಲರ್​ಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಡ್ರಗ್ ಡೀಲ್ ಮಾಡಲು ಸೆಕೆಂಡ್ ಹ್ಯಾಂಡ್ ಬೈಕ್ ಸಹ ಬಳಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಆರೋಪಿ ಬಂಧಿಸಿ ಜೈಲಿಗಟ್ಟಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟೆ,  ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 am, Thu, 26 June 25