AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಕರ್ನಾಟಕ ಆರೋಗ್ಯ ಇಲಾಖೆಯು 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೈಸೂರು ಮೂಲದ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ ಹಲವು ಉತ್ಪನ್ನಗಳು ಈ ಪಟ್ಟಿಯಲ್ಲಿವೆ. ಈ ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ
ಸಾಂದರ್ಭಿಕ ಚಿತ್ರ
Vinay Kashappanavar
| Updated By: ವಿವೇಕ ಬಿರಾದಾರ|

Updated on:Jun 25, 2025 | 5:34 PM

Share

ಬೆಂಗಳೂರು, ಜೂನ್​ 25: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು (Karnataka Health Department) ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ (Medicine) ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿದೆ. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ. ಅಸುರಕ್ಷಿತ ಔಷಧಿ ಮತ್ತು ಕಾಂತಿವರ್ಧಕಗಳ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಯಾವೆಲ್ಲ ಔಷಧಿಗಳು ಅಸುರಕ್ಷಿತ

  1. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್​ ಪ್ರೈ. ಲಿಮಿಟೆಡ್​.
  2. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ – ಮೇ. ಟಾಮ್​ ಬ್ರಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  3. ಪೋಮೋಲ್​-650 (ಪ್ಯಾರಾಸಿಟಮೋಲ್​ ಟ್ಯಾಬ್ಲೆಟಸ್​ ಐ.ಪಿ 650 ಎಂಜಿ)- ಮೇ. ಅಬಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್.
  4. ಮಿಟು ಕ್ಯೂ7 ಸಿರಪ್​ – ಮೆ. ಬಯೋನ್​ ಥೆರಾಪ್ಯಾಟಿಕ್ಸ್​ ಇಂಡಿಯಾ ಪ್ರೈ. ಲಿಮಿಟೆಡ್​
  5. ಸ್ಟೈರಲ್​ ಡಿಲ್ಯೈಯಂಟ್​ ಪಾರ್ ರೆಕಾನೋಸ್ಟಿಟಿಶ್ಯೂನ್​ ಆಪ್​ ಎನ್​ಡಿ, ಐಬಿ, ಐಬಿಡಿ ಆ್ಯಂಡ್​ ಕಾಂಬಿನೇಷನ್​ ವ್ಯಾಕ್ಸಿನ್ಸ್​ ಫಾರ್​ ಪೌಲ್ಟ್ರೀ (ವೆಟರ್​ನರಿ) ಮಲ್ಟಿ ಡೋಸ್​ ವಿಲಾ 200 ಎಂಲ್​ – ಮೇ. ಸೇಫ್​ ಪೇರೆಂಟರಲ್ಸ್​ ಪ್ರೈ. ಲಿಮಿಟೆಡ್.
  6. ಸ್ಪಾನ್​ಪ್ಲಾಕ್ಸ್​-ಓಡ್​ ಟ್ಯಾಬ್ಲೆಟ್ಸ್​ (ಓಪ್ಲಾಕ್ಸಸಿನ್​ & ಓರ್ನಿಡಜೋಲ್ ಟ್ಯಾಬ್ಲೆಟ್ಸ್​ ಐಪಿ) – ಮೆ. ಇಂಡೋರಾಮ ಹೇಲ್ತ್​ ಕೇಸ್​ ಪ್ರೈ ಲಿಮಿಟಿಡ್​.
  7. ಪ್ಯಾಂಟೋಕೋಟ್​-ಡಿಎಸ್​ಆರ್​ (ಪ್ಯಾಂಟೋಫ್ರಜೋಲ್​ ಗ್ಯಾಸ್ಟ್ರೋ-ರಿಜಿಸ್ಟೆಂಟ್​ & ಡೋಮ್​ಫೆರಿಡನ್​ ಪ್ರೋಕಾಂಗಡ್​ ರಿಲಿಸ್​​ ಕ್ಯಾಪ್ಸೂಲ್ಸ್​ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  8. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​
  9. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​.
  10. ಅಲ್ಪಾ ಲಿಪೋಯಿಕ್​ ಆಸಿಡ್​, ಪೋಲಿಕ್​ ಆಸಿಡ್​, ಮಿಥೈಲ್​ ಕೋಬಾಲಮಿನ್, ವಿಟಮಿನ್​ ಬಿ6 & ವಿಟಮಿನ್​ ಡಿ3ಟ್ಯಾಬ್ಲೆಟ್ಸ್​ – ಮೇ. ಇಸ್ಟ್​ ಆಪ್ರಿಕನ್​ (ಇಂಡಿಯಾ) ಓವರ್​ಸಿಸ್​.
  11. ಓ ಶಾಂತಿ ಗೋಲ್ಡ್ ಕ್ಲಾಸ್​ ಕುಂಕುಮ್​ – ಮೇ. ಎನ್​. ರಂಗರಾವ್​ & ಸನ್ಸ್​ ಪ್ರೈ ಲಿಮಿಟೆಡ್​.
  12. ಪಿರಾಸಿಡ್​-ಓ ಸಸ್​ಪೆನ್​ಶನ್​ (ಸಲ್ಕ್ರಾಲ್ಫೇಟ್​ & ಆಕ್ಸೆಟಾಕೈನ್​ ಸಸ್​ಪೆನ್​ಶನ್​) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್​ ಪ್ರೈ ಲಿಮಿಟೆಡ್​.
  13. ಗ್ಲಿಮಿಜ್​-2 (ಗ್ಲಿಮಿಫೆರೈಡ್​ ಟ್ಯಾಬ್ಲೆಟ್ಸ್​ ಐಪಿ 2ಎಂಜಿ) – ಮೆ. ಕೆಎನ್​ಎಂ ಫಾರ್ಮಾ ಪ್ರೈ. ಲಿಮಿಟೆಡ್​.
  14. ಐರನ್​ ಸುಕ್ರೋಸ್​ ಇನ್​ಜೆಕ್ಷನ್​ ಯುಎಸ್​ಪಿ 100ಎಂಜಿ (ಐರೋಗೈನ್​) – ಮೆ. ರೀಗೈನ್​ ಲ್ಯಾಬೋರೇಟರಿಸ್​
  15. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್​ ಪಾರ್​ ಇನ್​ಜೆಕ್ಷನ್​ ಆರ್​ಎಲ್​ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್​ ಇಂಡಿಯಾ

ಈ ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಂನವರು ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ

ಪ್ರತಿ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ: ಸಚಿವ

ಪ್ರತಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಮತ್ತು ಒಂದು ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಬೇಕೆಂಬ ಸಂಕಲ್ಪ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್​​ ಹೇಳಿದರು. ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಿರ್ಮಾಣಗೊಂಡ ಜಯದೇವ ಆಸ್ಪತ್ರೆ ಮುಂದಿನ ವರ್ಷ ಲೋಕಾರ್ಪಣೆ ಆಗುತ್ತೆ ಎಂದು ಹೇಳಿದರು.

ಇದನ್ನೂ ಓದಿ
Image
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ
Image
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
Image
ಹಾಸನ: ಹೃದಯಾಘಾತದಿಂದ ಮತ್ತಿಬ್ಬರು ಸಾವು, ಒಂದೇ ತಿಂಗಳಲ್ಲಿ 12 ಜನ ಬಲಿ
Image
ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿ

ಇದನ್ನೂ ಓದಿ: ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಶೇ 100 ರಷ್ಟು ಪಾರದರ್ಶಕತೆ ಇದೆ. ಯಾವುದೇ ಸೀಟ್ ಬ್ಲಾಕಿಂಗ್ ನಮ್ಮಲ್ಲಿ ಇಲ್ಲ. ಮೆರಿಟ್ ಆಧಾರದಲ್ಲಿ ಕೆಇಎಯಿಂದಲೇ ಮೆಡಿಕಲ್ ಸೀಟು ಹಂಚಿಕೆಯಾಗುತ್ತದೆ. 800 ಮೆಡಿಕಲ್ ಸೀಟು ಹೆಚ್ಚಳಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Wed, 25 June 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ