ಇನ್ಮುಂದೆ ಐದು ಖಾಸಗಿ ಆ್ಯಪ್ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್!
ಪ್ರತಿದಿನ ನಮ್ಮ ಮೆಟ್ರೋದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಾರೆ. ಆದರೆ ಟೋಕನ್ಗಾಗಿ ಸರದಿಯಲ್ಲಿ ನಿಂತು ಪರದಾಡುವವರೇ ಹೆಚ್ಚು. ಇನ್ಮುಂದೆ ಇದಕ್ಕೆ ಬ್ರೇಕ್ ಬೀಳಲಿದ್ದು, ನಮ್ಮ ಮೆಟ್ರೋ Open Network for Digital Commerce ಗೆ ಎಂಟ್ರಿ ಕೊಟ್ಟಿದೆ. ಹೀಗಾಗಿ, ಎಲ್ಲಿ ಇದ್ದೀರೋ ಅಲ್ಲಿಂದಲೇ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು.

ಬೆಂಗಳೂರು, ಜೂನ್ 26: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಶುಭ ಸುದ್ದಿ ನೀಡಿದ್ದು, ಇನ್ನು ಮೆಟ್ರೋ ಪ್ರಯಾಣಿಕರು ಐದು ಖಾಸಗಿ ಆ್ಯಪ್ಗಳ ಮೂಲಕ ಟಿಕೆಟ್ ಖರೀದಿ ಮಾಡಿ ಸಂಚಾರ ಮಾಡಬಹುದು. ಎಂಟು ಲಕ್ಷ ಮೆಟ್ರೋ ಪ್ರಯಾಣಿಕರು, ಐದು ಆ್ಯಪ್ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಇದರಿಂದ, ಟಿಕೆಟ್ಗಾಗಿ ಇನ್ನು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಮೆಟ್ರೋ ಈಗ ಒಎನ್ಡಿಸಿ (open network for digital commerce) ಫ್ಲಾಟ್ ಫಾರಂಗೆ ಬಂದಿರುವುದರಿಂದ ಇದು ಸಾಧ್ಯವಾಗಿದೆ.
ಯಾವೆಲ್ಲ ಆ್ಯಪ್ಗಳಲ್ಲಿ ಸಿಗಲಿದೆ ಮೆಟ್ರೋ ಟಿಕೆಟ್?
ಪ್ರಯಾಣಿಕರು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿದಂತೆ ಒಟ್ಟು 5 ಆ್ಯಪ್ಗಳ ಮೂಲಕ ಖರೀದಿಸಲು ಅವಕಾಶ ನೀಡಲಾಗಿದೆ. ಈ ಆ್ಯಪ್ಗಳು ಇದೀಗ ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ಡಿಸ್ಕೌಂಟ್ ಆಫರ್ ಕೂಡ ನೀಡುತ್ತಿವೆ.
ಪ್ರಸ್ತುತ ವಾಟ್ಸ್ಆ್ಯಪ್ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರ್ಯಾಪಿಡೋ ಹಾಗೂ ನಮ್ಮ ಯಾತ್ರಿ ಆ್ಯಪ್ಗಳಲ್ಲಿ ಮೆಟ್ರೋ ಟಿಕೆಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟಿಕೆಟ್ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್ಸಿಎಲ್ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆ, ಆಫೀಸ್, ಅಂಗಡಿಯ ವಿದ್ಯುತ್ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ಕೆಜೆ ಜಾರ್ಜ್
ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆಯಲು ಸರದಿಯಲ್ಲಿ ನಿಂತು ಸಂಕಷ್ಟ ಎದುರಿಸುತಿದ್ದಾರೆ. ಇಂಥ ಪ್ರಯಾಣಿಕರಿಗೆ ಒಎನ್ಡಿಸಿಯಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುವುದರಲ್ಲಿ ಅನುಮಾನವಿಲ್ಲ.