Bengaluru News: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

|

Updated on: Jun 01, 2023 | 7:10 AM

ಬೆಂಗಳೂರಿನ ಬನಶಂಕರಿಯ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆ(Elephant) ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ರಾಮನಗರ ಮೂಲದ ರವಿಕುಮಾರ್, ಸೋಮಶೇಖರ ಅಲಿಯಾಸ್ ಶಿವಣ್ಣ ಬಂಧಿತರು.

Bengaluru News: ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ
ಆನೆ ದಂತ ಮಾರಾಟ
Follow us on

ಬೆಂಗಳೂರು: ನಗರದ ಬನಶಂಕರಿಯ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆ(Elephant) ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ರಾಮನಗರ ಮೂಲದ ರವಿಕುಮಾರ್, ಸೋಮಶೇಖರ ಅಲಿಯಾಸ್ ಶಿವಣ್ಣ ಬಂಧಿತರು. ಇವರು 25.5 ಕೆಜಿ ತೂಕದ ಆನೆ ದಂತವನ್ನ ಮಾರಾಟ ಮಾಡುತ್ತಿರುವುದಾಗಿ ಜೆ.ಪಿ.ನಗರ ಠಾಣೆ ಪಿಎಸ್​ಐ(PSI) ಮನೋಜ್ ಕುಮಾರ್​ ಮಾಹಿತಿ ಮೇರೆಗೆ ಸೆರೆ ಹಿಡಿಯಲಾಗಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 ದಿನಗಳಿಂದ ಚಾರ್ಮಾಡಿ ಘಾಟ್​ನಲ್ಲಿ ಕಾಡಾನೆ ಹಾವಳಿ; ಅನಾಹುತವಾಗುವ ಮೊದಲೇ ಆನೆ ಸ್ಥಳಾಂತರಕ್ಕೆ ಜನರ ಮನವಿ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಕಳೆದ 15 ದಿನಗಳಿಂದ ಕಾಡಾನೆ ಹಾವಾಳಿ ಮೀತಿಮೀರಿದೆ. 22 ಕಿ.ಮೀ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಒಂದೇ ಆನೆ ಇದೆಯೋ ಅಥವಾ ಅದಕ್ಕಿಂತ ಹೆಚ್ಚು ಇದ್ದಾವೋ ಗೊತ್ತಿಲ್ಲ. ಈ ಮಾರ್ಗದಲ್ಲಿ ಓಡಾಡುವ ಜನ ನಿತ್ಯ ಒಂದೊಂದು ಜಾಗದಲ್ಲಿ ಆನೆ ಕಂಡು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಎರಡ್ಮೂರು ದಿನದ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬೈಕ್-ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು. ಗಾಡಿ ರಿವರ್ಸ್ ತೆಗೆದು ಹೋಗೋದಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಹಾವು ಬಳುಕಿನ ಮೈಕಟ್ಟಿನ ತರಹ ರಸ್ತೆಯಿರುವ ಕಾರಣ, ಹಾಗಾಗಿ, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ನಾಳೆ ಮತ್ತೊಂದು ಅನಾಹುತವಾದ ಬಳಿಕ ಪರಿಹಾರವೆಂದು ಎಚ್ಚೆತ್ತುಕೊಳ್ಳುವ ಬದಲು ಆನೆಯನ್ನೇ ಸ್ಥಳಾಂತರ ಮಾಡೋದು ಒಳ್ಳೆಯದು ಎಂದು ಜನರು ಆಗ್ರಹಿಸಿದ್ದರು.

ಇದನ್ನೂ ಓದಿ:ಕೊಡಗಿನಲ್ಲಿ ಹೆಚ್ಚಾಗಿರುವ ಆನೆ ಹಾವಳಿ ತಡೆಗೆ ರೈಲ್ವೆ ಕಂಬಿಗಳ ಬಳಕೆ

ಚಾರ್ಮಾಡಿ ಘಾಟಿಯ ಈ ರಸ್ತೆ ಕೇವಲ ರಸ್ತೆಯಾಗಿಲ್ಲ. ಜೀವ ಉಳಿಸುವ ಸಂಜೀವಿನಿ ಕೂಡ. ರಾಜ್ಯದ ಮೂಲೆ-ಮೂಲೆಗಳಿಂದ ನಿತ್ಯ ನೂರಾರು ರೋಗಿಗಳು ಇದೇ ಮಾರ್ಗದಲ್ಲಿ ಮಂಗಳೂರು ಮಣಿಪಾಲ್ ಆಸ್ಪತ್ರೆಗಳಿಗೆ ಹೋಗುತ್ತಾರೆ. ಶಾಲಾ ಕಾಲೇಜಿಗೆ ಓಡಾಡುವ ಮಕ್ಕಳು, ಮಂಗಳೂರಿಗೆ ಹಣ್ಣು ತರಕಾರಿ ಕೊಂಡೊಯ್ಯುವ ನೂರಾರು ವಾಹನಗಳು, ದಿನಕ್ಕೆ ಸುಮಾರು 2000 ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಬದುಕಿನ ಅನಿವಾರ್ಯತೆಗೆ ಮಧ್ಯರಾತ್ರಿಯೂ ಇಲ್ಲಿ ಹಲವು ವಾಹನಗಳು ಓಡಾಡುತ್ತವೆ. ಕಿರಿದಾದ ದಾರಿಯ ಜೊತೆಗೆ ಘಾಟ್​ ಸೆಕ್ಷನ್. ಟರ್ನ್ ಮಾಡಿಕೊಂಡು ವಾಪಸ್ ಬರೋದು ಕಷ್ಟಸಾಧ್ಯ. ಆನೆ ದಾಳಿಗೆ ಮುಂದಾದರೆ ತಪ್ಪಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಅದೃಷ್ಟವಶಾತ್ ಈವರೆಗೂ ಅಂತಹ ಯಾವುದೇ ಅಹಾಹುತ ಸಂಭವಿಸಿಲ್ಲ. ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆಯ ಸ್ಥಳಾಂತರಕ್ಕೆ ಸ್ಥಳಿಯರು ಆಗ್ರಹಿಸಿದ್ದಾರೆ.

ಒಟ್ಟಾರೆ, ಆನೆಯನ್ನ ಕಣ್ಣಾರೆ ಕಂಡರೂ ಜನಸಾಮಾನ್ಯರು ಅಗತ್ಯ ಹಾಗೂ ಅನಿವಾರ್ಯತೆಯಿಂದ ಇಂದಿಗೂ ಇದೇ ಮಾರ್ಗವನ್ನ ಅವಲಂಭಿಸಿದ್ದಾರೆ. ಅದೇ ಮೂಡಿಗೆರೆಯಲ್ಲಿ ಆರೇ ತಿಂಗಳಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿರೋ ಬ್ಲಾಕ್ ಮಾರ್ಕ್ ಕೂಡ ಮೂಡಿಗೆರೆಗೆ ಇದೆ. ನಾಳೆ ಇನ್ನೊಂದು ಅನಾಹುತವಾದ ಬಳಿಕ ಸರ್ಕಾರ ಪರಿಹಾರ ನೀಡೋದು, ಅಧಿಕಾರಿಗಳು ಕ್ರಮ ಕೈಗೊಳ್ತಿವಿ ಅನ್ನೋ ಬದಲು ಸಂಬಂಧಪಟ್ಟವರು ಈಗಲೇ ಸೂಕ್ತ ಕ್ರಮ ಕೈಗೊಂಡರೆ ಮುಂದಾಗುವ ಅನಾಹುತವನ್ನ ತಪ್ಪಿಸಿದಂತಾಗುತ್ತೆ. ಇನ್ನು ಈ ಕುರಿತು ಅಧಿಕಾರಿಗಳು ಏನ್ ಮಾಡ್ತಾರೋ ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ