ಕೊರೊನಾ ಟೆನ್ಷನ್: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢ

ಪಕ್ಕದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶದಲ್ಲಿ ಕೊವಿಡ್ ಪ್ರಕರಣ ಏರಿಕೆ ಹಿನ್ನಲೆ ರಾಜಧಾನಿ ಬೆಂಗಳೂರಿಗೂ ಟೆನ್ಷನ್ ಶುರುವಾಗಿದೆ. ಬೆಂಗಳೂರು ನಗರದಲ್ಲಿಯೇ 32 ಸಕ್ರಿಯ ಪ್ರಕರಣಗಳಿದ್ದು, ಸದ್ಯ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೊವಿಡ್ ಪಾಸಿಟಿವ್​ ಬಂದಿದ್ದು, ಹೋಮ್​ ಐಸೋಲೇಷನ್​ನಲ್ಲಿದ್ದಾರೆ.

ಕೊರೊನಾ ಟೆನ್ಷನ್: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
Edited By:

Updated on: May 25, 2025 | 10:16 AM

ಬೆಂಗಳೂರು, ಮೇ 25: ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂತಾ ಹೆಮ್ಮಾರಿ ಕೊವಿಡ್ (Covid) ಮತ್ತೆ ಕರ್ನಾಟಕಕ್ಕೆ ಒಕ್ಕರಿಸಿದೆ. ಇಡೀ ಜಗತ್ತನ್ನೇ ಬಿಟ್ಟೂ ಬಿಡದೆ ಕಾದಿದ್ದ ಮಹಾಮಾರಿ ಕೊರೊನಾ ಮತ್ತೆ ತನ್ನ ಆರ್ಭಟ ಮುಂದುವರೆಸುವ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲೇ (bangaluru) 32 ಕೇಸ್​ಗಳು ದೃಢಪಟ್ಟಿದ್ದು, ಇದೀಗ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ.

ಕಳೆದ ಮೂರು ವರ್ಷದ ಹಿಂದೆ ಜಗತ್ತನೆ ಇನ್ನಿಲ್ಲದ್ದಂತೆ ಕಾಡಿದ್ದ ಕೊರೊನಾ ಈಗ ಮತ್ತೆ ಏಷ್ಯಾದ ಕೆಲ ದೇಶಗಳಲ್ಲಿ ಮತ್ತೆ ಕೊವಿಡ್ ಪ್ರಕರಣಗಳಿಂದ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸದ್ಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆಯಾದರೆ, ಈ ಪೈಕಿ ಬಹುತೇಕ ಸೋಂಕಿತರು ಬೆಂಗಳೂರು ನಗರದಲ್ಲಿ 32 ಕೇಸ್ ಕಂಡು ಬಂದಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಓರ್ವ ಬಲಿ, ಆ್ಯಕ್ಟಿವ್​ ಕೇಸ್​​ 38ಕ್ಕೆ ಏರಿಕೆ

ಇದನ್ನೂ ಓದಿ
ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ
ಮೆಟ್ರೋ ಸಿಬ್ಬಂದಿ​ ಕೃಪೆ: 2 ಲಕ್ಷದ ಆಭರಣವಿದ್ದ ಬ್ಯಾಗ್ ಅರ್ಧತಾಸಲ್ಲೇ ವಾಪಸ್
ನಾದಿನಿ ಪರ ವಕಾಲತು ವಹಿಸಲು ಬಂದ ಬಾವನಿಗೆ ಡೆಲಿವರಿ ಬಾಯ್​​ನಿಂದ ಪಂಚ್
ಮೇ 29 ರಿಂದ ಮದ್ಯದಂಗಡಿ ಬಂದ್: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್

ಇದೀಗ ನಗರದ ಮಲ್ಲೇಶ್ವರಂನಲ್ಲಿ 45 ವರ್ಷದ ಮತ್ತು ರಾಜಾಜಿನಗರದಲ್ಲಿ 38 ವರ್ಷದ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೊವಿಡ್ ಪಾಸಿಟಿವ್​ ಬಂದಿದ್ದು, ಸದ್ಯ ಕೊವಿಡ್ ಸೋಂಕಿತರು ಹೋಮ್​ ಐಸೋಲೇಷನ್​ನಲ್ಲಿದ್ದಾರೆ.

ಪಕ್ಕದ ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಕೊವಿಡ್ ಪ್ರಕರಣ ಏರಿಕೆ ಹಿನ್ನಲೆ ರಾಜಧಾನಿ ಬೆಂಗಳೂರಿಗೂ ಟೆನ್ಷನ್ ಶುರುವಾಗಿದೆ. ಸದ್ಯ ರಾಜ್ಯದಲ್ಲಿ 35 ಕೊವಿಡ್ ಸಕ್ರಿಯ ಪ್ರಕರಣಗಳಿವೆ ಬೆಂಗಳೂರು ನಗರದಲ್ಲಿಯೇ 32 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿಯೇ ಕೊವಿಡ್ ಹೆಚ್ಚಳ ಹಿನ್ನಲೆ ಆತಂಕ ಹೆಚ್ಚಾಗಿದ್ದು, ಹೀಗಾಗಿ ಮುನ್ನೇಚ್ಚರಿಕೆಗೆ ಮುಂದಾಗಿರುವ ಆರೋಗ್ಯ ಇಲಾಖೆ, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

ಇಂದಿನಿಂದ ಕೊವಿಡ್ ಟೆಸ್ಟ್​ಗೆ ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ರಾಜಧಾನಿಯಲ್ಲಿ ಕೊವಿಡ್ ಟೆಸ್ಟ್ ಆರಂಭ ಡೌಟ್​ ಎನ್ನಲಾಗುತ್ತಿದೆ. ಏಕೆಂದರೆ ಬಿಬಿಎಂಪಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್ ಟೆಸ್ಟಿಂಗ್ ಕಿಟ್ ಇಲ್ಲ. ಹಾಗಾಗಿ ಕಿಟ್ ಬಂದ ಬಳಿಕ ಟೆಸ್ಟಿಂಗ್ ಆರಂಭ ಸಾಧ್ಯತೆ ಇದೆ. ಸದ್ಯ ಇಂದು ಬೆಂಗಳೂರಿನಲ್ಲಿ ಕೊವಿಡ್ ಟೆಸ್ಟ್ ಇಲ್ಲ ಅಂತಾ ಅಧಿಕೃತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:29 am, Sun, 25 May 25