ಬೆಂಗಳೂರು: ಸ್ಕೂಟಿಗೆ ಕುದುರೆ ಕಟ್ಟಿ ಎಳೆದ ವ್ಯಕ್ತಿ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್​ ಸವಾರನೊಬ್ಬ ಕುದುರೆಯನ್ನು ತನ್ನ ಸ್ಕೂಟರ್​ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಅಮಾನವೀಯ ವೀಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುದುರೆ ಭಯಭೀತವಾಗಿರುವಂತೆ ಕಂಡುಬಂದಿದ್ದು, ಸವಾರನ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಾಣಿ ಹಿಂಸೆಯ ಈ ಘಟನೆ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಬೆಂಗಳೂರು: ಸ್ಕೂಟಿಗೆ ಕುದುರೆ ಕಟ್ಟಿ ಎಳೆದ ವ್ಯಕ್ತಿ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ರಸ್ತೆಯಲ್ಲಿ ಬೈಕ್​ಗೆ ಕುದುರೆ ಕಟ್ಟಿ ಎಳೆದ ವ್ಯಕ್ತಿ

Updated on: Nov 03, 2025 | 2:43 PM

ಬೆಂಗಳೂರು, ನವೆಂಬರ್ 3: ಬೆಂಗಳೂರಿನ (Bengaluru) ರಸ್ತೆಯೊಂದರಲ್ಲಿ ಸ್ಕೂಟರ್​ ಸವಾರನೊಬ್ಬ ತನ್ನ ಗಾಡಿಗೆ ಕುದುರೆಯೊಂದನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಈ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ.

ಸ್ಕೂಟರ್​ಗೆ ಸವಾರನ ಅನಾಗರಿಕತೆ

ಸವಾರನೊಬ್ಬ ತನ್ನ ಸ್ಕೂಟರ್​ಗೆ ಅಸಹಾಯಕ ಕುದುರೆಯನ್ನು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ತನ್ನ ಸುತ್ತ ಮುತ್ತಲೂ ಓಡಾಡುತ್ತಿರುವ ವಾಹನಗಳನ್ನು ನೋಡಿ ಕುದುರೆ ಭಯಭೀತವಾದಂತೆ ಈ ವೀಡಿಯೋದಲ್ಲಿ ಕಂಡುಬಂದಿದೆ. ಸ್ಕೂಟರ್​ಗೆ ಓಡಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸದೆ ಕೈಯಲ್ಲಿ ಫೋನ್ ಹಿಡಿದು ಪುಂಡಾಟ ಮೆರೆದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈತನ ಬೇಜವಾಬ್ದಾರಿತನ ಮತ್ತು ಅನಾಗರಿಕತೆಗೆ ಅಸಹನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

ವೈರಲ್ ವೀಡಿಯೋ ಹೊಂದಿರುವ ಎಕ್ಸ್ ಪೋಸ್ಟ್ ಇಲ್ಲಿದೆ

ಈ ಕುರಿತು ಕರ್ನಾಟಕ ಪೋರ್ಟ್​ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಾಣಿಗಳು ಮನರಂಜನಾ ಸಾಧನಗಳಲ್ಲ; ಅವು ನಮ್ಮಂತೆಯೇ ನೋವು, ಭಯ ಮತ್ತು ಆಯಾಸವನ್ನು ಅನುಭವಿಸುತ್ತವೆ. ಅಧಿಕಾರಿಗಳು ಈ  ಕ್ರೌರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವನಂತಹ ಜನರು ಕಠಿಣ ಶಿಕ್ಷೆಯನ್ನು ಎದುರಿಸುವಂತೆ ನೋಡಿಕೊಳ್ಳಬೇಕು ಎಂದು ಬರೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Published On - 2:36 pm, Mon, 3 November 25