ವೋಟರ್​ ಐಡಿ ಅಕ್ರಮ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕರ್ನಾಟಕ ಕಾಂಗ್ರೆಸ್

ವೋಟರ್ ಐಡಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್ , ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವೋಟರ್​ ಐಡಿ ಅಕ್ರಮ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕರ್ನಾಟಕ ಕಾಂಗ್ರೆಸ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 19, 2022 | 3:24 PM

ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ (Voters Data Scam, Voters ID Revision) ತೀರ್ವ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈಗ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್ (KPCC)​, ರಾಜ್ಯ ಚುನಾವಣಾ ಆಯೋಗಕ್ಕೆ (Karnataka Election Commission) ದೂರು ನೀಡಿದೆ. ಹಾಗೇ ಮುಖ್ಯ ಚುನಾವಣಾ ಆಯುಕ್ತರ ಜೊತೆಗೆ ‘ಕೈ’ ನಾಯಕರು ಕಳೆದೊಂದು ಗಂಟೆಯಿಂದ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​ ನಾಯಕರು ವೋಟರ್‌ ಐಡಿ ಗೋಲ್ಮಾಲ್‌ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್,​ ಚುನಾವಣಾ ಆಯೋಗಕ್ಕೆ ಪ್ರತಿ ಕ್ಷೇತ್ರದಲ್ಲಿ ಡಿಲೀಟ್ ಆಗಿರುವ ಡಾಟಾ ಬಗ್ಗೆ ಪ್ರಶ್ನೆ ಮಾಡಿದೆ. ಹೇಗೆ ಮತದಾರರ ಖಾಸಗಿ ಮಾಹಿತಿ ದುರ್ಬಳಕೆ ಆಗಿದೆ ಎಂಬುದರ ಸಂಪೂರ್ಣ ವಿವರ ನೀಡಿ ಎಂದು ಪ್ರಶ್ನೆ ಮಾಡಿದೆ.

27 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ

ವೋಟರ್ ಐಡಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. 27 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಮತದಾರರ ಪರಿಷ್ಕರಣೆ ಖಾಸಗಿಯವರಿಗೆ ನೀಡುವಂತಿಲ್ಲ. ಚುನಾವಣೆ ಅಧಿಕಾರಿಗಳೇ ಮತಪಟ್ಟಿ ಪರಿಷ್ಕರಣೆ ಮಾಡಬೇಕೆಂದು ಚುನಾವಣೆ ಮುಖ್ಯ ಅಧಿಕಾರಿಯವರೇ ಈ ಬಗ್ಗೆ ವಿವರಿಸಿದ್ದಾರೆ. ಡಿಲೀಟ್ ಆದ 27 ಲಕ್ಷ ಮತದಾರರ ಪಟ್ಟಿ ಪುನರ್​ ಪರಿಶೀಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಗ್ರಹಿಸಿದ್ದಾರೆ.

ಪ್ರಕರಣವು ಹೈಕೋರ್ಟ್ ಸಿಜೆ ಮಾರ್ಗದರ್ಶನದಲ್ಲಿ ತನಿಖೆ ಆಗಬೇಕು. ವೋಟರ್​ ಐಡಿ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಬೇಕು. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಎಫ್​ಐಆರ್ ದಾಖಲಿಸಬೇಕು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವ ಉಳಿಸಲು ಮಾಧ್ಯಮ ತೆಗೆದುಕೊಂಡ ಆಸಕ್ತಿ ಗಮನಿಸಿದ್ದೇವೆ. ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋಲುತ್ತೇವೆ ಅಂತ ಗೊತ್ತಾಗಿ ದೊಡ್ಡ ಕುತಂತ್ರ ಷಡ್ಯಂತ್ರ ಮಾಡುತ್ತಿದೆ. ಎಲ್ಲೆಲ್ಲಿ ಸೋಲ್ತೋವಿ ಅಂತ ಹೇಳುತ್ತಾರೆ. ಸಂಸ್ಥೆಗಳನ್ನು ಬಳಸಿಕೊಂಡು ಇಲೆಕ್ಷನ್ ಕಮಿಷನ್ ಡಾಟಾ ಪಾಸ್ ವರ್ಡ್ ವನ್ನು ಕಾರ್ಯಕರ್ತರು ಮಂತ್ರಿಗಳ ಕೈಲಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು.

ಮೂರು ಮಂತ್ರಿಗಳು ಇಬ್ಬರು ಶಾಸಕರು ಚಿಲುಮೆ ಜೊತೆಗೆ ಲಿಂಕ್ ಇಟ್ಕೊಂಡಿದ್ದಾರೆ

ಬಿಎಲ್ಓ ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಯಾವುದೇ ಹಕ್ಕಿಲ್ಲ. ಸರ್ಕಾರವೇ ಅದಕ್ಕೆ ನೇರ ಹೊಣೆ ಅಂತ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಮೂರು ಮಂತ್ರಿಗಳು ಇಬ್ಬರು ಶಾಸಕರು ಚಿಲುಮೆ ಜೊತೆಗೆ ಲಿಂಕ್ ಇಟ್ಕೊಂಡಿದ್ದಾರೆ. ಚೀಫ್ ಇಲೆಕ್ಷನ್ ಆಫಿಸರ್ ಕೂಡ ಬೇರೆಯವರಿಗೆ ತನಿಖೆ ಮಾಡಲು ಕೊಟ್ಟಿದ್ದೀನಿ ಅಂತ ಹೇಳುತ್ತಿದ್ದಾರೆ. ನಮಗೆ ನ್ಯಾಯ ಕಾಣಿಸುತ್ತೀಲ್ಲ. ಎ ಆರ್ ಓ ಗಳ ಮೇಲೆ ಮೊದಲು ಕ್ರಿಮಿನಲ್ ಕೇಸ್ ಆಗಬೇಕು. ಬಿಎಲ್ಓ ಗಳ ಮೇಲೆ ಎಫ್ಐಆರ್ ಆಗಬೇಕು ಎಂದರು.

ಡಿಲೀಟ್ ಆದ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕು. ಎಲ್ಲ ರಾಜಕೀಯ ಪಕ್ಷಗಳಿಗೆ ಒಂದು ಕಾಪಿ ಕೊಡಬೇಕು. ಬಿಎಲ್ಎಗಳನ್ನು ಜೊತೆಗೆ ಕರೆದುಕೊಂಡು ಹೋಗಿ ಪರಿಷ್ಕರಣೆ ಮಾಡಬೇಕು. ಚೀಫ್ ಜಸ್ಟಿಸ್ ಆಫ್ ಕರ್ನಾಟಕ ನೇತೃತ್ವದಲ್ಲಿ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕಂದಾಯ ಭವನದಲ್ಲಿ ಇವಿಎಂ ಕೂಎ ಮ್ಯಾನೇಜ್ ಮಾಡುವ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ ಅವರೇ ಧಮ್, ತಾಕತ್ ಇದ್ದರೇ ತನಿಖೆ ಮಾಡಿಸಿ

ನಾನು ಮರ್ಡರ್ ಮಾಡಿದೆ ಅಂತ ನೀವೂ ಮರ್ಡರ್ ಮಾಡಬೇಕಾ? ಯಾರು ವಹಿವಾಟು ನಡೆಸಿದ್ದಾರೆ ಅವರ ಎಲ್ಲರ ಮೇಲೆ ತನಿಖೆ ಕ್ರಮ ಜರಿಗುಸಬೇಕು. ನಮಗೆ ನಂಬಿಕೆ ಇಲ್ಲ ಇವರ ಮೇಲೆ. ಅಶ್ವತ್ಥ ನಾರಾಯಣ ಲೆಡರ್ ಹೆಡ್ ಯಾಕೆ ಅಲ್ಲಿಗೆ ಬಂತು? ಹಿಂದೆ ನಕಲಿ‌ ಮಾರ್ಕ್ಸ್ ಕಾರ್ಡ್ ಮಾಡಿದ ಮಷಿನ್ ಈಗ ಮಾಡಿದ್ದಾರೆ. ಅಶ್ವತ್ಥ ನಾರಾಯಣ ಚೆಕ್ ಬುಕ್ ಯಾಕೆ ಅಲ್ಲಿಗೆ ಹೋಯ್ತು? ಅಶ್ವತ್ಥ ನಾರಾಯಣ ಫೋನ್ ಚೆಕ್ ಮಾಡಿದರೆ ಗೊತ್ತಾಗತ್ತೆ ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ಸಚಿವರಲ್ವಾ ? ಧಮ್, ತಾಕತ್ ಬಗ್ಗೆ ಮಾತಾಡ್ತಿರಲ್ವಾ ಸಿಎಂ ಅವರೇ ನಿಮಗೆ ಧಮ್, ತಾಕತ್ ಇದ್ದರೇ ತನಿಖೆ ಮಾಡಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Sat, 19 November 22