Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪವರ್ ಕಟ್
Bangalore News: ಬೆಂಗಳೂರು ನಗರದ ಈ ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಪವರ್ ಕಟ್ ಇರಲಿದೆ.
ಬೆಂಗಳೂರು: ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕೈಗೊಂಡಿರುವ ನಿರ್ವಹಣಾ ಕಾರ್ಯದಿಂದಾಗಿ ಬೆಂಗಳೂರು (Bangalore) ನಗರದ ಕೆಲವು ಭಾಗಗಳಲ್ಲಿ ಇಂದು (ಭಾನುವಾರ) ವಿದ್ಯುತ್ ಕಡಿತಗೊಳಿಸುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಘೋಷಿಸಿದೆ. ಹೀಗಾಗಿ, ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಈ ಏರಿಯಾಗಳಲ್ಲಿ ಪವರ್ ಕಟ್ (Power Cut) ಇರಲಿದೆ.
KTPCL ದುರಸ್ತಿ, ವಾಹಕಗಳ ಬದಲಿ, ಹೊಸ ಮಾರ್ಗಗಳ ನಿರ್ಮಾಣ, ರಚನೆ ಕೆಲಸ ಮತ್ತು ಪರೀಕ್ಷೆಗಳಂತಹ ಇತರ ಯೋಜನೆಗಳನ್ನು ನಿರ್ವಹಿಸುತ್ತಿದೆ. ಬೆಸ್ಕಾಂ ಪ್ರತಿ ತಿಂಗಳು ವಿದ್ಯುತ್ ಕಡಿತವನ್ನು ನಿಗದಿಪಡಿಸುತ್ತದೆ. ನಿರಂತರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಬೆಸ್ಕಾಂನಿಂದ ಮಾಡಬೇಕಾಗಿದ್ದ ಕಾಮಗಾರಿ ಕೆಲಸಗಳು ವಿಳಂಬವಾಗಿದೆ.
ಇದನ್ನೂ ಓದಿ: Bangalore Power Cut: ಬೆಂಗಳೂರಿನ ಚಾಮರಾಜಪೇಟೆ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ವಿದ್ಯುತ್ ಕಡಿತವು ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಇರುತ್ತದೆ. ಇಂದು ಬೆಂಗಳೂರಿನ ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್, ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಬೈರನಾಯಕನಹಳ್ಳಿ, ಬೊಲ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಹುರಶೆಟ್ಟಿ ಹಳ್ಳಿ, ಗೋಪಾಲಪುರ, ತ್ಲಭೇಶ್ವರನಹಳ್ಳಿ, ಠಾಣಾ ಗ್ರಾ.ಪಂ. ಬೇತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.