ಬೆಂಗಳೂರು ವಿವಿ ಕ್ಯಾಂಪಸ್​ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ ಪ್ರಕರಣ: ಅಡುಗೆ ಪಾಲಕ ಸಸ್ಪೆಂಡ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2024 | 9:29 PM

ಬೆಂಗಳೂರು ವಿವಿ ಕ್ಯಾಂಪಸ್​ನ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ನಿಲಯದ​ ಮಂಜುನಾಥ್​ನನ್ನು ಅಮಾನತು ಮಾಡಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ. ಯೂನಿರ್ವಸಿಟಿ ಕ್ಯಾಂಪಸ್​ ಮಾತ್ರವಲ್ಲ, ಬನಶಂಕರಿಯ ಬಿಸಿಎಂ ಹಾಸ್ಟಲ್​​ ಊಟದಲ್ಲಿಯೂ ಜಿರಳೆ ಪತ್ತೆಯಾಗಿದೆ. ಇದ್ರಿಂದಾಗಿ ಅಡುಗೆ ಮನೆ ಬಂದ್ ಮಾಡಿ ಸ್ಟುಡೆಂಟ್ಸ್ ಆಕ್ರೋಶ ಹೊರ ಹಾಕಿದ್ದರು. 

ಬೆಂಗಳೂರು ವಿವಿ ಕ್ಯಾಂಪಸ್​ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ ಪ್ರಕರಣ: ಅಡುಗೆ ಪಾಲಕ ಸಸ್ಪೆಂಡ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜನವರಿ 31: ಬೆಂಗಳೂರು ವಿವಿ ಕ್ಯಾಂಪಸ್​ (Bengaluru VV campus) ನ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ನಿಲಯದ​ ಮಂಜುನಾಥ್​ನನ್ನು ಅಮಾನತು ಮಾಡಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ. ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆಯಾದ ಬಗ್ಗೆ ನಿನ್ನೆ ಟಿವಿ9 ಸುದ್ದಿ ಬಿತ್ತರಿಸಿತ್ತು. ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಇಂದು ಹಾಸ್ಟೆಲ್​ಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ತನಿಖೆಯಲ್ಲಿ ಮಂಜುನಾಥ್ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆ ತಕ್ಷಣ ಸೇವೆಯಿಂದ ಅಮಾನತು ಮಾಡಲಾಗಿದೆ.

ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕರ ಹಾಸ್ಟೆಲ್​​ನಲ್ಲಿ ಮೂರನೇ ಬಾರಿಗೆ, ಊಟದಲ್ಲಿ ಹುಳುಗಳು ಪತ್ತೆಯಾಗಿವೆ. ಯೂನಿರ್ವಸಿಟಿ ಕ್ಯಾಂಪಸ್​ ಮಾತ್ರವಲ್ಲ, ಬನಶಂಕರಿಯ ಬಿಸಿಎಂ ಹಾಸ್ಟಲ್​​ ಊಟದಲ್ಲಿಯೂ ಜಿರಳೆ ಪತ್ತೆಯಾಗಿದೆ. ಇದ್ರಿಂದಾಗಿ ಅಡುಗೆ ಮನೆ ಬಂದ್ ಮಾಡಿ ಸ್ಟುಡೆಂಟ್ಸ್ ಆಕ್ರೋಶ ಹೊರ ಹಾಕಿದ್ದರು.

ಇದನ್ನೂ ಓದಿ: ಬೆಂಗಳೂರು ವಿವಿ ಹಾಸ್ಟೆಲ್ ಊಟದಲ್ಲಿ ಮತ್ತೆ ಹುಳಗಳು ಪತ್ತೆ; ಕವನ ಬರೆದ ವಿದ್ಯಾರ್ಥಿಗಳು

ಅವ್ಯವಸ್ಥೆ ವಿರುದ್ಧ ಸಿಡಿದೆದ್ದಿರುವ ಸ್ಟೂಡೆಂಟ್ಸ್ ಕಟ್ಟುಪಾಡು ಬದಲಾಗದು ಎಂಬ ಶೀರ್ಷಿಕೆಯಡಿ ಕವನ ಬರೆದಿದ್ದರು. ಬದಲಿಸಲು ಮುಂದೆ ಬಂದರೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ಹಾಸ್ಟೆಲ್​ನಲ್ಲಿ 2023ರ ನವೆಂಬರ್ ತಿಂಗಳಲ್ಲಿ ಊಟದಲ್ಲಿ ಹುಳಗಳು ಪತ್ತೆಯಾಗಿದ್ದವು. ಕಳಪೆ ಆಹಾರ ನೀಡುತ್ತಿರುವುದರಿಂದ ಕೆರಳಿದ ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಊಟ, ನೀರು ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಏನೇ ಹೇಳಿ, ಕಾಲೇಜ್ ಹಾಸ್ಟೆಲ್​ನಲ್ಲಿ ಒಂದಿಲ್ಲೊಂದು ಅದ್ವಾನ ಬಯಲಾಗುತ್ತಾನೆ ಇದೆ. ಅಧಿಕಾರಿಗಳು ಇನ್ನಾದರೂ ಗುಣಮಟ್ಟದ ಆಹಾರ ನೀಡುವತ್ತ ಗಮನ ಹರಿಸಬೇಕಿದೆ ಎಂದು ವಿನಯಕುಮಾರ್ ಕಾಶಪ್ಪನವರ್​ ಹೇಳಿದ್ದಾರೆ.

ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ಊಟ ಸರಿಯಾಗಿಲ್ಲ ವಸತಿ ನಿಲಯದಲ್ಲಿ ಕ್ಲೀನ್ ಎಂದು ಆರೋಪ

ಯಾದಗಿರಿ: ನಗರದ ಗಂಜ್ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್‌ ನಂತರದ ವಸತಿ‌ ನಿಲಯದಲ್ಲಿ ಒಂದಲ್ಲ ಒಂದು ವಿಚಾರದಿಂದ ತಿಂಗಳಿಗೆ ಒಮ್ಮೆಯಾದರೂ ಈ ಹಾಸ್ಟೆಲ್​ನ ವಿದ್ಯಾರ್ಥಿಗಳು ಪ್ರತಿಭಟನೆ‌ ನಡೆಸುವುದು ಸಾಮಾನ್ಯವಾಗಿದೆ. ಯಾಕೆಂದರೆ ಈ ವಸತಿ ನಿಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾಡುವ ನಿರ್ಲಕ್ಷ್ಯದಿಂದ.

ಇದನ್ನೂ ಓದಿ: ಬೆಳಗಾವಿಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಊಟದಲ್ಲಿ ಹುಳು: ವಿದ್ಯಾರ್ಥಿಗಳಿಂದ ದೂರು

ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲತ್ತುಗಳನ್ನ ಅಧಿಕಾರಿಗಳು ಸರಿಯಾಗಿ ತಲುಪಿಸಿದರೆ ವಿದ್ಯಾರ್ಥಿಗಳು ರಸ್ತೆ ಮೇಲೆ‌ ಕುಳಿತುಕೊಂಡು ಪ್ರತಿಭಟನೆ ಮಾಡುವ ಅವಶ್ಯಕತೆ ಇರ್ತಾಯಿರಲಿಲ್ಲ. ಇದೆ ಕಾರಣಕ್ಕೆ ಇಲ್ಲಿ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಊಟ ಹಾಕ್ತಾಯಿಲ್ವಂತೆ ಹಾಸ್ಟೆಲ್​ನಲ್ಲಿ ಸ್ವಚ್ಛತೆ ಇಟ್ಟಿಲ್ಲ ಎಲ್ಲಂದರಲ್ಲಿ‌ ಊಟ‌ ಮಾಡಿದ ಮೂಸರಿ ಬಿದ್ದಿದ್ದೆ. ಆದರೆ ಇದನ್ನ ಸ್ವಚ್ಚತೆ‌ ಮಾಡಬೇಕಾದ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಹಾಸ್ಟೆಲ್ ಡಸ್ಟ್ ಬಿನ್ ವ್ಯವಸ್ಥೆ ಮಾಡಬೇಕು ಆದರೆ ಯಾವುದು ಮಾಡಿಲ್ಲ ಹೀಗಾಗಿ ವಾರಗಟ್ಟಲೇ ಗಲೀಜು ಹಾಸ್ಟೆಲ್​ನಲ್ಲಿ ಬಿದ್ದಿರುತ್ತೆ ಇಂತಹ ನಿರ್ತಾದಲ್ಲೇ ಜೀವನ ಕಳೆದಯಬೇಕಾಗಿದೆ. ಇಂತಹ ಹಲವಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರು ಅಧಿಕಾರಿಗಳು ಬಗೆ ಹರಿಸುವ ಕೆಲಸ ಮಾಡಿಲ್ಲ. ಇದೆ ಕಾರಣಕ್ಕೆ ಇವತ್ತು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.