ಶಾಲೆಯಿಂದ ಆಟೋ ಹತ್ತುವಾಗ ಮಕ್ಕಳು ಮಿಸ್ಸಿಂಗ್, ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿದ ವಿವಿ ಪುರಂ ಪೊಲೀಸ್ರು
ಶಾಲೆಯಿಂದ ಆಟೋ ಹತ್ತುವಾಗ ಚಾಲಕನ ಕಣ್ತಪ್ಪಿಸಿ ಹೋಗಿ ದಾರಿ ತಪ್ಪಿಸಿಕೊಂಡಿದ್ದ ಮಕ್ಕಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು, (ಜುಲೈ 28): ಶಾಲೆಯಿಂದ (School) ಆಟೋ ಹತ್ತುವಾಗ ನಾಪತ್ತೆಯಾಗಿದ್ದ ಮಕ್ಕಳನ್ನು(Students) ಬೆಂಗಳೂರಿನ (Bengaluru) ವಿವಿ ಪುರಂ ಪೊಲೀಸರು (VV Puram Police)) ಸಿನಿಮೀಯ ರೀತಿಯಲ್ಲಿ ಪತ್ತೆ ಮಾಡಿದ್ದಾರೆ. 5 ವರ್ಷದ ಮಗುವಿನ ಬುದ್ಧಿವಂತಿಕೆಗೆ ಪೊಲೀಸರಿಗೆ ಸಿಕ್ಕ ಸುಳಿವಿನಿಂದ ಕೇವಲ ಮೂರೇ ಗಂಟೆಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು.. ಆಟೋದಿಂದ ಇಳಿದು ಹೋಗಿ ದಾರಿ ತಪ್ಪಿಸಿಕೊಂಡು ಸಂಕಷ್ಟ ಸಿಲುಕಿದ್ದ ಮಕ್ಕಳನ್ನು ವಿವಿಪುರಂ ಪೊಲಿಸರು ಪತ್ತೆ ಮಾಡಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಇದರಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.
ಇದನ್ನೂ ಓದಿ: Thawar Chand Gehlot: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನೇ ಬಿಟ್ಟು ಹಾರಿದ ವಿಮಾನ
ಚಾಲಕ ಅಂಗಡಿಗೆ ಹೋಗಿ ಬರುವಷ್ಟರಲ್ಲೇ ಮಕ್ಕಳು ಆಟೋ ಇಳಿದು ಸ್ವಲ್ಪ ದೂರ ನಡೆದು ಹೋಗಿದ್ದಾರೆ. ಬಳಿಕ ಅಲ್ಲಿಂದ ವಾಪಸ್ ಬರುವುದಕ್ಕೆ ದಾರಿ ಗೊತ್ತಾಗದೇ ಸಾಕಷ್ಟು ಕಡೆ ಸುತ್ತಾಡಿದ್ದಾರೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಓರ್ವ ಯುವತಿ ಬಳಿ ನಮಗೆ ಭಯ ಅಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಆ ಯುವತಿ ವಿದ್ಯಾರ್ಥಿಗಳ ಎಲ್ಲಾ ವಿಚಾರಿಸಿದ್ದಾಳೆ. ಆ ವೇಳೆ ಓರ್ವ ಬಾಲಕ ನನ್ನ ತಂದೆ ಫೋನ್ ನಂಬರ್ ಗೊತ್ತಿದೆ ಎಂದಿದ್ದು, ಬಳಿಕ ಆ ಯುವತಿ ಅಲ್ಲೇ ಇದ್ದ ಓರ್ವ ವ್ಯಕ್ತಿಗೆ ಈ ನಂಬರಿಗೆ ಒಂದು ಫೋನ್ ಮಾಡುವಂತೆ ಹೇಳಿದ್ದಾಳೆ. ಆ ಅಪರಿಚಿತ ವ್ಯಕ್ತಿ ಆ ಮಗುವಿನ ತಂದೆಗೆ ಕರೆ ಮಾಡಿ, ಮಕ್ಕಳು ಸ್ಯಾಟ್ ಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾರೆ ಎಂದು ಮಾಹಿತಿ ನೀಡಿ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು, ಕೂಡಲೇ ವಿವಿಪುರಂ ಪೊಲೀಸ್ ಠಾಣೆಗೆ ದೌಡಾಯಿಸಿ ಮಗುವಿನ ವಿಚಾರವನ್ನು ತಿಳಿಸಿದ್ದಾರೆ.
ಆ ವ್ಯಕ್ತಿ ಮಾಡಿದ್ದ ಫೋನ್ ನಂಬರ್ ಪಡೆದುಕೊಂಡ ಪೊಲೀಸರು, ಟವರ್ ಲೋಕೆಷನ್ ಮೂಲಕ ವಿಳಾಸ ಪತ್ತೆ ಹಚ್ಚಿದ್ದಾರೆ. ತಕ್ಷಣ 20 ಜನ ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಹುಡುಕಾಡಿದ್ದು, ಕೊನೆಗೆ ಫೋನ್ ಬಂದಿದ್ದ ಲೋಕೇಷನ್ನಿಂದ 1 ಕಿ.ಮೀ ದೂರದಲ್ಲಿ ನಿಂತಿದ್ದ ಇಬ್ಬರು ಮಕ್ಕಳು ಪತ್ತೆಯಾಗಿದ್ದಾರೆ. ನಂತರ ಪೊಲೀಸರು ಮಕ್ಕಳನ್ನು ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಮಕ್ಕಳ ಸುರಕ್ಷಿತವಾಗಿ ಸಿಕ್ಕಿದ್ದಾರೆ ಎಂದು ಪೋಷಕರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.
ಓರ್ವ ಮಗು ತನ್ನ ತಂದೆಯ ಮೊಬೈಲ್ ನಂಬರ್ ನೀಡಿ ಕರೆ ಮಾಡಿಸಿದ್ದರಿಂದ ಪೊಲೀಸರು ಮೂರೇ ಮೂರು ಗಂಟೆಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆ ಸಮಯದಲ್ಲಿ ಬಾಲಕನಿಗೆ ತನ್ನ ತಂದೆ ನಂಬರ್ ನೆನಪು ಮಾಡಿ ಕರೆ ಮಾಡಿಸಿದ್ದು ನಿಜ ಆ ಹುಡುಗನ ಬುದ್ಧಿವಂತಿಕೆ ಮೆಚ್ಚುವಂತದ್ದು.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ