ಬೆಂಗಳೂರು: ಬೆಂಗಳೂರಿನ (Bangalore Weather) ಕೆಲವು ಪ್ರದೇಶಗಳಲ್ಲಿ ಸಣ್ಣ ಮಳೆ ಮತ್ತು ತುಂತುರು ಮಳೆಯಾಗುತ್ತಿದ್ದು, ಇಂದು ಮುಂಜಾನೆಯಿಂದ ಚಳಿಯೂ ಹೆಚ್ಚಾಗಿದೆ. ಚುಮು ಚುಮು ಚಳಿಗೆ ಹೊದ್ದು ಮಲಗಿದ್ದ ಬೆಂಗಳೂರಿಗರಿಗೆ ಇಂದಿನ ವಾತಾವರಣ ವೀಕೆಂಡ್ನಲ್ಲಿ ಬೆಂಗಳೂರಿನಲ್ಲೇ ಗಿರಿಧಾಮಗಳನ್ನು (ಹಿಲ್ ಸ್ಟೇಷನ್) ನೆನಪಿಸಿತು. ತುಂತುರು ಮಳೆ, ವಿಪರೀತ ಚಳಿಯಿಂದ ಬೆಂಗಳೂರಿನಲ್ಲಿ ಮಧ್ಯಾಹ್ನವಾದರೂ ಇನ್ನೂ ಸೂರ್ಯನ ದರ್ಶನವಾಗಿಲ್ಲ. ಇಂದು ಬೆಂಗಳೂರಿನಲ್ಲಿ ತಾಪಮಾನವು ಸುಮಾರು 20 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಬೇರೆಲ್ಲ ಮೆಟ್ರೋ ನಗರಗಳಲ್ಲಿ ಅತ್ಯಂತ ಕಡಿಮೆ ತಾಪಮಾನವಾಗಿದೆ.
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ಸರಾಸರಿ ಕನಿಷ್ಠ ತಾಪಮಾನ 13.9 ಡಿಗ್ರಿ ಸೆಲ್ಸಿಯಸ್ ಇತ್ತು. ರಾಜ್ಯದ ಶೇ. 83ರಷ್ಟು ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ತಾಪಮಾನ 14ರಿಂದ 18 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾಸನ, ತುಮಕೂರು, ಕಲಬುರಗಿ, ಉತ್ತರ ಕನ್ನಡ, ಧಾರವಾಡ, ಕೊಪ್ಪಳ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 12 ರಿಂದ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 34.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇದನ್ನೂ ಓದಿ: Rain Updates: ಈ ರಾಜ್ಯಗಳಲ್ಲಿ ಇನ್ನೂ ಕೆಲವು ದಿನ ಭಾರೀ ಮಳೆ ಸಾಧ್ಯತೆ; ಕೇರಳ, ತಮಿಳುನಾಡಿಗೆ ಹಳದಿ ಅಲರ್ಟ್
ಬೆಂಗಳೂರಿನ ಬಹುತೇಕ ವಾರ್ಡ್‌ಗಳು 19.24 ರಿಂದ 19.88 ಡಿಗ್ರಿಗಳ ನಡುವೆ ತಾಪಮಾನವನ್ನು ಹೊಂದಿದ್ದು, ಕೆಲವು 18.6 ರಿಂದ 19.24 ಡಿಗ್ರಿಗಳ ನಡುವೆ ತಾಪಮಾನವನ್ನು ಹೊಂದಿವೆ. ನಾಳೆ ಪಶ್ಚಿಮ ವಲಯದಲ್ಲಿ 20.3 ಡಿಗ್ರಿ ತಾಪಮಾನದೊಂದಿಗೆ ಲಘು ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
Good morning Bengaluru ? ☂️#Bengaluru #bengalururains #weather #bengaluruweather pic.twitter.com/fNjDWZTjCb
— Madhuri Adnal (@madhuriadnal) November 12, 2022
ಬೆಂಗಳೂರಿನ ಚಳಿ ಇದೀಗ ಟ್ವಿಟ್ಟರ್ನಲ್ಲೂ ಟ್ರೆಂಡ್ ಆಗಿದೆ. ಕಂಬಳಿ/ ಬೆಡ್ಶೀಟ್ ಬಿಟ್ಟು ಹೊರಬರಲು ಮನಸೇ ಆಗುತ್ತಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
This is “refuse to get out from under the blanket” weather. ” #Bengaluru
— meenabhatia (@meenabhatia) November 12, 2022
ಇಂದು ಬೆಂಗಳೂರು ದೇಶದ ಅತ್ಯಂತ ಶೀತಲವಾಗಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದಾಗಿದೆ. ಗಿರಿಧಾಮ ಮಹಾಬಲೇಶ್ವರದಲ್ಲಿ 26 ಡಿಗ್ರಿ ಸೆಲ್ಸಿಯಸ್ ಮತ್ತು ಲೋನಾವಾಲಾದಲ್ಲಿ 20 ಡಿಗ್ರಿ ತಾಪಮಾನವಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ಹಿಲ್ ಸ್ಟೇಷನ್ಗಳಲ್ಲಿರುವಷ್ಟೇ ತಾಪಮಾನವಿದೆ. ಹೀಗಾಗಿ, ಈ ವೀಕೆಂಡ್ಗೆ ಬೆಂಗಳೂರೇ ಗಿರಿಧಾಮವಾಗಿ ಪರಿವರ್ತನೆಯಾಗಿದೆ!