ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ: ಬೆಂಗಳೂರಿನಲ್ಲಿ 11 ರೈಲುಗಳ ಸಂಚಾರದಲ್ಲಿ ವ್ಯತ್ಯಯ

ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ ಹಿನ್ನೆಲೆ ಬೆಂಗಳೂರಿನಲ್ಲಿ 11 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿವೆ.

ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ: ಬೆಂಗಳೂರಿನಲ್ಲಿ 11 ರೈಲುಗಳ ಸಂಚಾರದಲ್ಲಿ ವ್ಯತ್ಯಯ
ರೈಲು (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 11, 2022 | 6:54 AM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಬೆಂಗಳೂರು ನಗರ ರೈಲು ನಿಲ್ದಾಣ) ಇಂದು (ನ 11) ವಂದೇ ಭಾರತ್ ಎಕ್ಸ್​ಪ್ರೆಸ್​ (Vande Bharath Express) ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇಂದು 11 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಯಾವೆಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ:

ಕಣ್ಣೂರು-ಕೆಎಸ್​ಆರ್​ ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಅರಸೀಕೆರೆ-ಕೆಎಸ್​ಆರ್​ ಸ್ಪೆಷಲ್ ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಕೋಲಾರ-ಯಶವಂತಪುರ​​ ಡೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಮೈಸೂರು-ನಾಯಂಡಹಳ್ಳಿ​​ ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಹಿಂದೂಪುರ-ಯಶವಂತಪುರ ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಮಾರಿಕುಪ್ಪಂ-ಕಂಟೋನ್ಮೆಂಟ್​ ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಕೆಎಸ್​ಆರ್-ತುಮಕೂರು ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಹಾಸನ-ಕೆಎಸ್​ಆರ್​ ಡೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಕೆಎಸ್​ಆರ್​-ವೈಟ್​ಫೀಲ್ಡ್​ ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಮೈಸೂರು-ಕೆಎಸ್​ಆರ್​ ಮೈಸೂರು ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

ಕುಪ್ಪಂ-ಬೆಂಗಳೂರು ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದು

2 ಲಕ್ಷಕ್ಕೂ ಅಧಿಕ‌ ಜನರಿಗೆ ಭರ್ಜರಿ ತಿಂಡಿ, ಊಟದ ತಯಾರಿ

ಇನ್ನು ಸಮಾವೇಶ ಹಿನ್ನೆಲೆ 2 ಲಕ್ಷಕ್ಕೂ ಅಧಿಕ‌ ಜನರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ. 700 ಕ್ಕೂ ಅಧಿಕ ಬಾಣಸಿಗರಿಂದ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ತಿಂಡಿಗೆ ಟಮೋಟ ಬಾತ್, ಮೈಸೂರು ಪಾಕ್ ಇರಲಿದೆ. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಮೊಸರನ್ನ ಮತ್ತು ಅಕ್ಕಿ ಪಾಯಸ ತಯಾರಿಸಲಾಗುತ್ತಿದೆ. ಎಸ್ಜಿಎಸ್ ಕ್ಯಾಟರಿಂಗ್ಸ್ ಮತ್ತು ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ಸ್ ವತಿಯಿಂದ ಅಡುಗೆ ತಯಾರಿ ಮಾಡಲಾಗುತ್ತಿದೆ. ಊಟ ತಿಂಡಿ ಬಡಿಸಲು 150 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 08 ಗಂಟೆಯಿಂದ ತಿಂಡಿ ವ್ಯವಸ್ಥೆಯಿರಲಿದೆ. ಈಗಾಗಲೆ ಏರ್ಪೋಟ್ ಸಮಾವೇಶದ ಬಳಿ ಅಡುಗೆ ತಯಾರಿಯಲ್ಲಿ ಬಾಣಸಿಗರು ನಿರತರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವಿವರ ಹೀಗಿದೆ:

ಬೆಳಿಗ್ಗೆ 9 ಗಂಟೆಗೆ ಎಚ್​ಎಎಲ್ ಏರ್​ಪೋರ್ಟ್​ಗೆ ಪ್ರಧಾನಿ ಮೋದಿ ಆಗಮನ.

9.45ಕ್ಕೆ ಹೆಚ್​ಎಎಲ್ ಏರ್ ಪೋರ್ಟ್​ನಿಂದ ಹೆಲಿಕಾಪ್ಟರ್ ಮೂಲಕ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

9.45 ರಿಂದ 9.55 ರವರೆಗೆ ಶಾಸಕರ ಭವನದಲ್ಲಿ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ.

10 ಗಂಟೆಗೆ ವಿಧಾನಸೌಧದಿಂದ ರಸ್ತೆ ಮಾರ್ಗವಾಗಿ ಕೆಎಸ್​ಆರ್ ರೈಲು ನಿಲ್ದಾಣಕ್ಕೆ ಪ್ರಯಾಣ.

10.20ಕ್ಕೆ ರೈಲು ನಿಲ್ದಾಣ ತಲುಪಲಿರುವ ಮೋದಿ,

10.20 ರಿಂದ 10.40 ವಂದೇ ಭಾರತ್, ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಹಸಿರು ನಿಶಾನೆ.

10.45ಕ್ಕೆ ರೈಲು ನಿಲ್ದಾಣದಿಂದ ಹೆಬ್ಬಾಳ ಎಎಫ್ ಟಿಟಿಸಿ ಹೆಲಿಪ್ಯಾಡ್​ಗೆ ರಸ್ತೆ ಮಾರ್ಗವಾಗಿ ಪ್ರಯಾಣ.

10.55ಕ್ಕೆ ಎಎಫ್ ಟಿಟಿಸಿ ಹೆಲಿಪ್ಯಾಡ್​ಗೆ ಆಗಮನ.

11 ಗಂಟೆಗೆ ಎಎಫ್ ಟಿಟಿಸಿ ಹೆಲಿಪ್ಯಾಡ್​​ನಿಂದ ಕೆಂಪೇಗೌಡ ಏರ್ ಪೋರ್ಟ್​ಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ.

11.20ಕ್ಕೆ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮನ.

11.30 ರಿಂದ 11.50 ಏರ್​ಪೋರ್ಟ್ ಟರ್ಮಿನಲ್-2 ಉದ್ಘಾಟನೆ.

12 ಗಂಟೆಗೆ ಕೆಂಪೇಗೌಡ ಪ್ರತಿಮೆ ಸ್ಥಳಕ್ಕೆ ಆಗಮನ.

12.00 ರಿಂದ 12.20 ಪ್ರತಿಮೆ ಲೋಕಾರ್ಪಣೆ.

12.20ಕ್ಕೆ ರಸ್ತೆ ಮಾರ್ಗವಾಗಿ ಪ್ರತಿ‌ಮೆ ಸ್ಥಳದಿಂದ ಸಮಾವೇಶ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣ.

12.30ಕ್ಕೆ ಸಾರ್ವಜನಿಕ ಸಮಾವೇಶ ಸ್ಥಳಕ್ಕೆ ಆಗಮನ.

12.30 ರಿಂದ 01.30 ಸಾರ್ವಜನಿಕ ಸಮಾವೇಶ.

01.30ಕ್ಕೆ ರಸ್ತೆ ಮಾರ್ಗವಾಗಿ ಕೆಂಪೇಗೌಡ ಏರ್ ಪೋರ್ಟ್​ಗೆ ಪ್ರಯಾಣ.

01.40ಕ್ಕೆ ಏರ್​ಪೋರ್ಟ್​ಗೆ ತಲುಪಲಿರುವ ಪ್ರಧಾನಿ ಮೋದಿ,

01.45ಕ್ಕೆ ಕೆಂಪೇಗೌಡ ಏರ್​ಪೋರ್ಟ್​ನಿಂದ ತಮಿಳುನಾಡಿನ ಮಧುರೈಗೆ ನಿರ್ಗಮನ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:24 pm, Thu, 10 November 22