
ಬೆಂಗಳೂರು,ಡಿ.1: ಬೆಂಗಳೂರಿನ ವಾತಾವರಣದಲ್ಲಿ (Bengaluru Weather) ಭಾರೀ ಬದಲಾವಣೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶನಿವಾರ ಬೆಂಗಳೂರಿನ ವಾತಾವರಣದಲ್ಲಿ ದೊಡ್ಡ ಬದಲಾವಣೆ ಆಗಿತ್ತು. ಬೆಂಗಳೂರು ಫ್ರಿಡ್ಜ್ ಒಳಗಿದೆ ಎಂಬ ಶೀರ್ಷಿಕೆಯ ಪೋಸ್ಟ್ವೊಂದು ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಈ ಮಂಜಿನ ವಾತಾವರಣ ಎಲ್ಲರನ್ನು ಗಮನ ಸೆಳೆದಿದೆ. ತಂಪಾದ ಗಾಳಿ, ಶಾಂತವಾದ ಪ್ರಕೃತಿ ಎಲ್ಲರನ್ನು ಆಕರ್ಷಿಸಿತ್ತು. ಇನ್ನು ಈ ವಿಡಿಯೋದಲ್ಲಿ ಪ್ರಶಾಂತವಾದ ಪ್ರಕೃತಿ, ಆಕಾಶದಲ್ಲಿ ಮಂಜುಗಳು ನಿಧಾನವಾಗಿ ಚಲಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದಾಗ ಮಂಜುಗಳು ಭೂಮಿಯ ಮೇಲೆ ಬೀಳುವಂತೆ ಭಾಸವಾಗುತ್ತದೆ.
ಹುಳಿಮಾವು, ಜಯ ನಗರ, ನೈಸ್ ರಸ್ತೆ, ಸಿಲ್ಕ್ ಬೋರ್ಡ್, ಬನಶಂಕರಿ, ಮಡಿವಾಳ ಮತ್ತು ಜೆಪಿ ನಗರದಂತಹ ಸ್ಥಳಗಳಲ್ಲಿ ಈ ದೃಶ್ಯ ಕಂಡ ಬಂದಿದೆ. ಈ ದೃಶ್ಯವನ್ನು ನೋಡಿದಾಗ ಬೆಂಗಳೂರಿನಲ್ಲಿ ನೈಸರ್ಗಿಕ ಹವಾನಿಯಂತ್ರಣ ಅಳವಡಿಸಿದಂತೆ ಕಂಡುಬಂದಿದೆ. ಈ ಮಂಜು ಇಡಿ ನಗರವನ್ನು ಆವರಿಸಿ, ಜನರ ಕಣ್ಣಿಗೆ ಆನಂದವನ್ನು ನೀಡಿತ್ತು. ಈ ಪೋಸ್ಟ್ ನೋಡಿ ಹಲವು ನೆಟ್ಟಿಗರು ಬೆಂಗಳೂರು ಕೂಲ್.. ಕೂಲ್ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಕಾರ್ತಿಕ್ ಸೂರ್ಯ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ (ನ.29)ದಂದು ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಇದರಿಂದ ಮೋಡ ಕವಿದ ವಾತಾವರಣ ಇತ್ತು. ಜನರು ಕೂಡ ಈ ವಾತಾವರಣವನ್ನು ತುಂಬಾ ಆನಂದಿಸಿದ್ದಾರೆ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು ಫ್ರಿಡ್ಜ್ ಒಳಗಿದೆ: ಮಂಜಿನಲ್ಲಿ ಮುಳುಗಿದ ಬೆಂಗಳೂರು, ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಒಬ್ಬರು ಈ ಮಂಜುಗಳನ್ನು ನೋಡಿದ ನಂತರ ಒಂದು ಬಾರಿ ಸ್ಪರ್ಶಿಸಬೇಕು ಎಂದು ಅನ್ನಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ತಂಪಾದ ಗಾಳಿ, ಸೂರ್ಯನ ಬೆಳಕು ಮತ್ತು ಬೆಳಗಿನ ಮಂಜು ನಗರವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ ಎಂದು ಹೇಳಿದ್ದಾರೆ. ಬೆಂಗಳೂರು ನಿಧಾನವಾಗಿ ಊಟಿ, ಕೂರ್ಗ್‌ನಂತೆ ಬದಲಾಗುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಇದು 4.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3.9 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ