AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಫ್ರಿಡ್ಜ್ ಒಳಗಿದೆ: ಮಂಜಿನಲ್ಲಿ ಮುಳುಗಿದ ಬೆಂಗಳೂರು, ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರಿನಲ್ಲಿ ನವೆಂಬರ್ 29ರಂದು ದಾಖಲೆಯ ಕನಿಷ್ಠ ತಾಪಮಾನ ಕಂಡುಬಂದಿದೆ. ತಾಪಮಾನ 21.6°C ಗೆ ಇಳಿದಿತ್ತು. ಮೋಡ, ತೇವಾಂಶ ಮತ್ತು ಚಂಡಮಾರುತ ಇದಕ್ಕೆ ಕಾರಣ ಎಂದು ಐಎಂಡಿ ತಿಳಿಸಿದೆ. "ಬೆಂಗಳೂರು ಫ್ರಿಡ್ಜ್ ಒಳಗೆ" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ಪೋಸ್ಟ್ ಜನರ ಗಮನ ಸೆಳೆದಿದೆ. ನಗರದ ಅಸಾಮಾನ್ಯ ಚಳಿಗೆ ಸ್ಪಷ್ಟಯಾಗಿದ್ದು, ಜನ ಮನೆಯಿಂದ ಹೊರಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಫ್ರಿಡ್ಜ್ ಒಳಗಿದೆ: ಮಂಜಿನಲ್ಲಿ ಮುಳುಗಿದ ಬೆಂಗಳೂರು, ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Dec 01, 2025 | 10:55 AM

Share

ಬೆಂಗಳೂರು, ಡಿ.1: ಬೆಂಗಳೂರಿನಲ್ಲಿ ವಾತಾರವಣ ತುಂಬಾ ಬದಲಾವಣೆ ಆಗಿದೆ. ಚಳಿ ಶುರುವಾಗಿದೆ (Bangalore cold weather). ಇನ್ನು ಈ ವೀಕೆಂಡ್​​​ನಲ್ಲಿ ಜನರ ಚಳಿಗೆ ಹೊರಗೆ ಬರಲೇ ಇಲ್ಲ. ಇದೀಗ ಈ ವಾತಾವರಣದ ಬಗ್ಗೆ ಪೋಸ್ಟ್​​​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.  ಶನಿವಾರದಂದು (ನ.29) ಬೆಂಗಳೂರಿನಲ್ಲಿ ದಾಖಲೆಯ ಚಳಿಯ ವಾತಾವರಣ ಇತ್ತು. ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಚಳಿಯಿಂದ ಜನರ ಹೊರಗೆ ಬರಲು ಮನಸ್ಸೇ ಮಾಡಿಲ್ಲ. ಈ ಹವಮಾನದ ನಡುವೆ ಮಹಿಳೆಯೊಬ್ಬರು ಸೆರೆ ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಶನಿವಾರದಂದು ಬೆಳಿಗ್ಗಿನ ಹೊತ್ತು ಮೋಡದಿಂದ ಇಡೀ ವಾತಾವರಣ ಕತ್ತಲಾಗಿತ್ತು. ಇದು ಬೆಂಗಳೂರಿನ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.

ಇನ್ನು ಈ ದಶ್ಯವನ್ನು ನೋಡಿ,  “ಬೆಂಗಳೂರು ಫ್ರಿಡ್ಜ್ ಒಳಗೆ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ತೇವ, ಶೀತ ವಾತಾವರಣ ಹೇಗಿದೆ ಎಂಬುದನ್ನು ಈ ಪೋಸ್ಟ್​​ನಲ್ಲಿ ನೋಡಬಹುದು. ರಾಜಶ್ರೀ ಭುಯಾನ್ ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇಡೀ ನಗರ ಮೂರು ನಾಲ್ಕು ದಿನದಿಂದ ಚಳಿಯಿಂದ ನಡುಗುತ್ತಿದೆ. ಇದರ ಮಧ್ಯೆ ಇಂದು (ಶನಿವಾರ) ಬೆಂಗಳೂರಿನ ವಾತಾರವರಣ ಕಂಡು ಬಂದದ್ದು ಹೀಗೆ” ಎಂದು ಹೇಳಿದ್ದಾರೆ. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಶನಿವಾರ ಮಾತ್ರ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇದು ಇದೇ ಮೊದಲು ನೋಡುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಥರಗುಟ್ಟುವ ಚಳಿ ನಡುವೆ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ: ಯಾವುದರ ದರ ಎಷ್ಟಿದೆ?

ಪೋಸ್ಟ್​​ ಇಲ್ಲಿದೆ ನೋಡಿ:

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ , ಬೆಂಗಳೂರಿನ ಐಎಂಡಿಯ (India Meteorological Department) ಸಿಎಸ್ ಪಾಟೀಲ್ ಈ ತೀವ್ರ ಕುಸಿತದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. “ತಾಪಮಾನದಲ್ಲಿನ ಇಳಿಕೆ ಹೆಚ್ಚಾಗಿ ಮೋಡ ಕವಿದ ವಾತಾವರಣ ಮತ್ತು ಗಾಳಿಯಲ್ಲಿ ಹೆಚ್ಚಿದ ತೇವಾಂಶ ಉಂಟಾಗಿದೆ. ಇದರ ಜತೆಗೆ ದಿಟ್ವಾ ಚಂಡಮಾರುತ ಕೂಡ ಕಾರಣ. ಈ ಸಮಯದಲ್ಲಿ ಪಾದರಸದ ಮಟ್ಟವು 1 ಅಥವಾ 2 ಡಿಗ್ರಿಗಳಷ್ಟು ಕಡಿಮೆಯಾಗುವುದು ಸಾಮಾನ್ಯ, ಆದರೆ ಈ ಬಾರಿ ಅದು 3 ರಿಂದ 4 ಡಿಗ್ರಿಗಳಷ್ಟು ಕುಸಿದಿದ್ದು ಅದರ ಪರಿಣಾಮ ಕೂಡ ಕಂಡುಬಂದಿದೆ. ಹಾಗಾಗಿ ಜನರು ಮನೆಯೊಳಗೆ ಇರಲು ಹಾಗೂ ಚಳಿಗಾಲದ ಜಾಕೆಟ್‌ಗಳೊಂದಿಗೆ ಮಾತ್ರ ಹೊರಗೆ ಹೋಗುತ್ತಿರುವುದು ಕಂಡು ಬಂದಿದೆ” ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ