AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಊಟಿ ಅಲ್ಲ, ಬೆಂಗಳೂರು: ನಗರದಲ್ಲಿ ಮೋಡಿ ಮಾಡಿದ ಈ ವಾತಾವರಣ

ಬೆಂಗಳೂರಿನಲ್ಲಿ ಇತ್ತೀಚೆಗೆ ಹವಾಮಾನದಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಚಳಿ, ಮಂಜು ಮತ್ತು ತಂಪಾದ ಗಾಳಿಯಿಂದಾಗಿ ನಗರವು ಊಟಿ ಅಥವಾ ಕೂರ್ಗ್‌‌ನಂತೆ ಭಾಸವಾಗುತ್ತಿದೆ. ಈ ಬಗ್ಗೆ ವೈರಲ್ ಆಗಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸೃಷ್ಟಿಸಿದೆ. ಶನಿವಾರದಂದು (ನ.29) ತಾಪಮಾನ 21.6 ಡಿಗ್ರಿಗೆ ಇಳಿದಿದ್ದು, ನಗರದಾದ್ಯಂತ ಮಂಜಿನ ವಾತಾವರಣ ಜನರನ್ನು ಆಕರ್ಷಿಸಿದೆ.

ಇದು ಊಟಿ ಅಲ್ಲ, ಬೆಂಗಳೂರು: ನಗರದಲ್ಲಿ ಮೋಡಿ ಮಾಡಿದ ಈ ವಾತಾವರಣ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Dec 01, 2025 | 12:05 PM

Share

ಬೆಂಗಳೂರು,ಡಿ.1: ಬೆಂಗಳೂರಿನ ವಾತಾವರಣದಲ್ಲಿ (Bengaluru Weather) ಭಾರೀ ಬದಲಾವಣೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶನಿವಾರ ಬೆಂಗಳೂರಿನ ವಾತಾವರಣದಲ್ಲಿ ದೊಡ್ಡ ಬದಲಾವಣೆ ಆಗಿತ್ತು. ಬೆಂಗಳೂರು ಫ್ರಿಡ್ಜ್ ಒಳಗಿದೆ ಎಂಬ ಶೀರ್ಷಿಕೆಯ ಪೋಸ್ಟ್​​​ವೊಂದು ವೈರಲ್​​ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಬೆಂಗಳೂರಿನ ಈ ಮಂಜಿನ ವಾತಾವರಣ ಎಲ್ಲರನ್ನು ಗಮನ ಸೆಳೆದಿದೆ.  ತಂಪಾದ ಗಾಳಿ, ಶಾಂತವಾದ ಪ್ರಕೃತಿ ಎಲ್ಲರನ್ನು ಆಕರ್ಷಿಸಿತ್ತು. ಇನ್ನು ಈ ವಿಡಿಯೋದಲ್ಲಿ ಪ್ರಶಾಂತವಾದ ಪ್ರಕೃತಿ, ಆಕಾಶದಲ್ಲಿ ಮಂಜುಗಳು ನಿಧಾನವಾಗಿ ಚಲಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದಾಗ ಮಂಜುಗಳು ಭೂಮಿಯ ಮೇಲೆ ಬೀಳುವಂತೆ ಭಾಸವಾಗುತ್ತದೆ.

ಹುಳಿಮಾವು, ಜಯ ನಗರ, ನೈಸ್ ರಸ್ತೆ, ಸಿಲ್ಕ್ ಬೋರ್ಡ್, ಬನಶಂಕರಿ, ಮಡಿವಾಳ ಮತ್ತು ಜೆಪಿ ನಗರದಂತಹ ಸ್ಥಳಗಳಲ್ಲಿ ಈ ದೃಶ್ಯ ಕಂಡ ಬಂದಿದೆ. ಈ ದೃಶ್ಯವನ್ನು ನೋಡಿದಾಗ ಬೆಂಗಳೂರಿನಲ್ಲಿ ನೈಸರ್ಗಿಕ ಹವಾನಿಯಂತ್ರಣ ಅಳವಡಿಸಿದಂತೆ ಕಂಡುಬಂದಿದೆ. ಈ ಮಂಜು ಇಡಿ ನಗರವನ್ನು ಆವರಿಸಿ, ಜನರ ಕಣ್ಣಿಗೆ ಆನಂದವನ್ನು ನೀಡಿತ್ತು. ಈ ಪೋಸ್ಟ್ ನೋಡಿ ಹಲವು ನೆಟ್ಟಿಗರು ಬೆಂಗಳೂರು ಕೂಲ್​​.. ಕೂಲ್​​​ ಎಂದು ಕಮೆಂಟ್​​ ಮಾಡಿದ್ದಾರೆ. ಈ ವಿಡಿಯೋವನ್ನು ಕಾರ್ತಿಕ್ ಸೂರ್ಯ ಎಂಬುವವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ (ನ.29)ದಂದು ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಇದರಿಂದ ಮೋಡ ಕವಿದ ವಾತಾವರಣ ಇತ್ತು. ಜನರು ಕೂಡ ಈ ವಾತಾವರಣವನ್ನು ತುಂಬಾ ಆನಂದಿಸಿದ್ದಾರೆ ಎಂದು ಈ ಪೋಸ್ಟ್​​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರು ಫ್ರಿಡ್ಜ್ ಒಳಗಿದೆ: ಮಂಜಿನಲ್ಲಿ ಮುಳುಗಿದ ಬೆಂಗಳೂರು, ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

View this post on Instagram

A post shared by Kartik Surya (@batinum)

ಪೋಸ್ಟ್​​ಗೆ ನೆಟ್ಟಿಗರು ಕಮೆಂಟ್​​ ಮಾಡಿದ್ದು ಹೀಗೆ:

ಒಬ್ಬರು ಈ ಮಂಜುಗಳನ್ನು ನೋಡಿದ ನಂತರ ಒಂದು ಬಾರಿ ಸ್ಪರ್ಶಿಸಬೇಕು ಎಂದು ಅನ್ನಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ತಂಪಾದ ಗಾಳಿ, ಸೂರ್ಯನ ಬೆಳಕು ಮತ್ತು ಬೆಳಗಿನ ಮಂಜು ನಗರವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ ಎಂದು ಹೇಳಿದ್ದಾರೆ. ಬೆಂಗಳೂರು ನಿಧಾನವಾಗಿ ಊಟಿ, ಕೂರ್ಗ್‌ನಂತೆ ಬದಲಾಗುತ್ತಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ಪೋಸ್ಟ್​​ ಇದು 4.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3.9 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ