Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮನ ಫೋನ್​ನಲ್ಲಿತ್ತು 13 ಸಾವಿರ ನಗ್ನ ಚಿತ್ರ, ಬೆಂಗಳೂರು ಯುವತಿ ಶಾಕ್

ಯುವತಿ ತಾನು ತನ್ನ ಪ್ರಿಯತಮನ ಜೊತೆ ತೆಗೆಸಿಕೊಂಡಿದ್ದ ಕೆಲವು ಫೋಟೋಸ್​ಗಳನ್ನು ಡಿಲಿಟ್ ಮಾಡುವ ಸಲುವಾಗಿ ಪ್ರಿಯತಮನಿಗೆ ತಿಳಿಯದಂತೆ ಅವನ ಫೋನ್ ತೆಗೆದುಕೊಂಡು ಗ್ಯಾಲರಿ ಚೆಕ್ ಮಾಡಿದ್ದು ಯುವತಿಗೆ ತಾನೂ ಸೇರಿ ಇತರೆ 13 ಸಾವಿರ ಮಹಿಳೆಯರ ನಗ್ನ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಶಾಕ್ ಆದ ಯುವತಿ ಬ್ರೇಕ್ ಅಪ್ ಮಾಡಿ ದೂರು ದಾಖಲಿಸಿದ್ದಾಳೆ. ಆರೋಪಿ ಯುವಕ ಅರೆಸ್ಟ್ ಆಗಿದ್ದಾನೆ.

ಪ್ರಿಯತಮನ ಫೋನ್​ನಲ್ಲಿತ್ತು 13 ಸಾವಿರ ನಗ್ನ ಚಿತ್ರ, ಬೆಂಗಳೂರು ಯುವತಿ ಶಾಕ್
ಬಂಧನ
Follow us
TV9 Web
| Updated By: ಆಯೇಷಾ ಬಾನು

Updated on: Nov 29, 2023 | 1:02 PM

ಬೆಂಗಳೂರು, ನ.29: ಸಾಮಾನ್ಯವಾಗಿ ಪ್ರೀತಿಯಲ್ಲಿರುವವರು ಒಬ್ಬರ ಫೋನನ್ನು ಇನ್ನೊಬ್ಬರಿಗೆ ತೋರಿಸಲು ಇಷ್ಟ ಪಡುವುದಿಲ್ಲ. ಆದರೆ ಇಲ್ಲಿ ಯುವತಿ ತಾನು ಪ್ರೀತಿಸಿದ ಯುವಕನ ಫೋನ್ ಚೆಕೆ ಮಾಡಿದ್ದು ಶಾಕ್​ಗೆ ಒಳಗಾಗಿದ್ದಾಳೆ. ಬೆಂಗಳೂರು ಮೂಲದ 22 ವರ್ಷದ ತಾನ್ವಿ (ಹೆಸರು ಬದಲಾಯಿಸಲಾಗಿದೆ) ತನ್ನ ಬಾಯ್ ಫ್ರೆಂಡ್​ನ ಫೋನ್ ಗ್ಯಾಲರಿ ಓಪನ್ ಮಾಡಿ ನೋಡಿದ್ದು ಆಕೆಗೆ ತಾನೂ ಸೇರಿ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳು ಸಿಕ್ಕಿವೆ.

ತಾನ್ವಿ ತಾನು ಕೆಲಸ ಮಾಡುತ್ತಿದ್ದ ಬಿಪಿಒ ಕಂಪನಿಗೆ ಸೇರಿದ ಐದು ತಿಂಗಳ ನಂತರ 25 ವರ್ಷದ ಆದಿತ್ಯ ಸಂತೋಷ್ ಎಂಬ ಯುವಕನ ಪರಿಚಯವಾಗುತ್ತೆ. ಇವರಿಬ್ಬರ ನಡುವೆ ಉತ್ತಮ ಸ್ನೇಹ ಬೆಳೆದು ಇಬ್ಬರೂ ಕಳೆದ ನಾಲ್ಕು ತಿಂಗಳಿನಿಂದ ರಿಲೇಷನ್ಶಿಪ್​ನಲ್ಲಿ ಇರ್ತಾರೆ. ಹೀಗೆ ಒಮ್ಮೆ ತಾನ್ವಿ, ಸಂತೋಷ್ ಜೊತೆ ಕಳೆದಿದ್ದ ಕೆಲವು ಆತ್ಮೀಯ ಕ್ಷಣಗಳ ಫೋಟೋಸ್, ವಿಡಿಯೋಗಳನ್ನು ಡಿಲಿಟ್ ಮಾಡಲು ಸಂತೋಷ್​ಗೆ ತಿಳಿಯದಂತೆ ಆವನ ಫೋನ್ ತೆಗೆದುಕೊಂಡು ಗ್ಯಾಲರಿ ಓಪನ್ ಮಾಡಿದ್ದಾರೆ. ಆಗ ತಾನ್ವಿಗೆ ಶಾಕ್ ಆಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ತನ್ನ ಪ್ರಿಯತಮ ಸಂತೋಷ್ ಫೋನ್​ನಲ್ಲಿ ನಗ್ನ ಚಿತ್ರಗಳನ್ನು ನೋಡಿದ ತಾನ್ವಿ ತಕ್ಷಣವೇ ಸಂತೋಷ್​ ಜೊತೆ ಜಗಳವಾಡಿ ಅತನಿಂದ ದೂರವಾಗಿದ್ದಾಳೆ. ಬಳಿಕ ಮುಂದೆ ತನಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ಸಂತೋಷ್​ನಿಂದ ಯಾವುದೇ ಸಮಸ್ಯೆ ಆಗಬಾರದು ಎಂದು ನವೆಂಬರ್ 20 ರಂದು ತನ್ನ ಕಚೇರಿಯ ಹಿರಿಯರಿಗೆ ವಿಷಯವನ್ನ ತಿಳಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಂತೋಷ್ ಫೋನ್‌ನಲ್ಲಿರುವ 13,000 ನಗ್ನ ಚಿತ್ರಗಳಲ್ಲಿ, ಕೆಲವು ಅವರ ಮಹಿಳಾ ಸಹೋದ್ಯೋಗಿಗಳೂ ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಬಡವರ ಮಕ್ಕಳ ಸರ್ಕಾರಿ ಶಾಲೆ ಅಧೋಗತಿ, ಕುಸಿಯುವ ಹಂತದಲ್ಲಿ ಕಟ್ಟಡ

ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎಂಬ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯು ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಿಸಿದೆ.

ಈ ಘಟನೆ ಹಲವಾರು ಇತರ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಕಚೇರಿಯಲ್ಲಿ ಇತರ ಮಹಿಳೆಯರಿಗೆ ಯಾವುದೇ ಹಾನಿ ಮಾಡದಿದ್ದರೂ, ಅವರ ಉದ್ದೇಶ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ಲೀಕ್ ಆಗಿದ್ದರೆ ಅದರಿಂದ ಭಾರೀ ಅನಾಹುತ ಆಗುತ್ತಿತ್ತು. ಸದ್ಯ ಘಟನೆ ಬೇಗೆ ಬಯಲಾಗಿದ್ದು ದೂರು ದಾಖಲಿಸಿದ್ದೇವೆ ಎಂದು ಕಂಪನಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಫೋಡೋಸ್​ಗಳನ್ನು ಮಾರ್ಫ್ ಮಾಡಲು ಸಂತೋಷ್ ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಪೊಲೀಸರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವನ ಕಚೇರಿಯಿಂದಲೇ ಬಂಧಿಸಿದ್ದಾರೆ. ಆದರೆ, ಈ ಚಿತ್ರಗಳನ್ನು ಸಂತೋಷ್ ಏಕೆ ಸಂಗ್ರಹಿಸಿಟ್ಟಿದ್ದ. ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆಯ ನಂತರವೇ ಸತ್ಯ ಬಯಲಾಗಬೇಕಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್