ಬೆಂಗಳೂರು: ಬಡವರ ಮಕ್ಕಳ ಸರ್ಕಾರಿ ಶಾಲೆ ಅಧೋಗತಿ, ಕುಸಿಯುವ ಹಂತದಲ್ಲಿ ಕಟ್ಟಡ

ಬೆಂಗಳೂರಲ್ಲಿ ಹಲವು ಸರ್ಕಾರಿ ಶಾಲೆಗಳ ಕಟ್ಟಡವು ಶಿಥಿಲಗೊಂಡಿದ್ದು, ಮಕ್ಕಳು ನಿತ್ಯ ಹೆದರುತ್ತಲೇ ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಡವರ ಮಕ್ಕಳು ಹೋಗುವ ಈ ಸರ್ಕಾರಿ ಶಾಲೆಯ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಹೆಸರಿಗೆ ಮಾದರಿ ಸರ್ಕಾರಿ ಶಾಲೆ ಆದರೆ ಯಾವಾಗ ನೆಲ ಕಚ್ಚುತ್ತೋ ಎನ್ನುವ ಭಯದಲ್ಲಿ ಮಕ್ಕಳಿದ್ದಾರೆ.

ಬೆಂಗಳೂರು: ಬಡವರ ಮಕ್ಕಳ ಸರ್ಕಾರಿ ಶಾಲೆ ಅಧೋಗತಿ, ಕುಸಿಯುವ ಹಂತದಲ್ಲಿ ಕಟ್ಟಡ
ಬೆಳ್ಳಂದೂರು ಸರ್ಕಾರಿ ಶಾಲೆ
Follow us
Shivaraj
| Updated By: ನಯನಾ ರಾಜೀವ್

Updated on:Nov 29, 2023 | 12:07 PM

ಬೆಂಗಳೂರಲ್ಲಿ ಹಲವು ಸರ್ಕಾರಿ ಶಾಲೆಗಳ ಕಟ್ಟಡವು ಶಿಥಿಲಗೊಂಡಿದ್ದು, ಮಕ್ಕಳು ನಿತ್ಯ ಹೆದರುತ್ತಲೇ ಶಾಲೆ(School)ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಡವರ ಮಕ್ಕಳು ಹೋಗುವ ಈ ಸರ್ಕಾರಿ ಶಾಲೆಯ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಹೆಸರಿಗೆ ಮಾದರಿ ಸರ್ಕಾರಿ ಶಾಲೆ ಆದರೆ ಯಾವಾಗ ನೆಲ ಕಚ್ಚುತ್ತೋ ಎನ್ನುವ ಭಯದಲ್ಲಿ ಮಕ್ಕಳಿದ್ದಾರೆ.

ಬೆಳ್ಳಂದೂರಿನಲ್ಲಿರುವ ಈ ಸರ್ಕಾರಿ ಮಾದರಿ ಶಾಲೆ 95 ವರ್ಷಕ್ಕಿಂತಲೂ ಹಳೆಯದು. ಕಟ್ಟಡವೆಲ್ಲವೂ ಶಿಥಿಲಗೊಂಡಿದ್ದು, ಬೀಳುವ ಆತಂಕ ಎದುರಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದೆ, ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಕ್ಕಳು ಕೂರಲು ಜಾಗವಿಲ್ಲದ ಕಾರಣ ಕಾರ್​ ಶೆಡ್​ನಲ್ಲಿ ಪಾಠ ಮಾಡಲಾಗುತ್ತಿದೆ, ಶಾಲೆಯ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್​ಫಾರ್ಮರ್​ ಕೂಡ ಇದೆ. ದಯಮಾಡಿ ದೊಡ್ಡ ಮಟ್ಟದ ಅನಾಹುತವಾಗುವ ಮುನ್ನ ಶಾಲೆ ಕಟ್ಟಿಸಿಕೊಡಿ ಎನ್ನುತ್ತಿರುವ ಮಕ್ಕಳ ಪೋಷಕರು.

ಇಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ ಎನ್ನುವ ಪ್ರಶ್ನೆ ಎದ್ದಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು, ಶಿಕ್ಷಣ ಸಚಿವರು ಈ ಬಗ್ಗೆ ಗಮನಹರಿಸಿ ನೂತನ ಕಟ್ಟಡ ನಿರ್ಮಿಸಿ ಮಕ್ಕಳ ಜೀವ ಉಳಿಸಿ ಎಂಬುದು ನಮ್ಮ ಕಳಕಳಿಯ ಮನವಿ.

ಮತ್ತಷ್ಟು ಓದಿ: ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ

ಶಿವಾಜಿನಗರದಲ್ಲಿ ನರ್ಸರಿ ಶಾಲೆಯ ಕಟ್ಟಡ ಕುಸಿದಿತ್ತು ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡವೊಂದು ಕುಸಿದುಬಿದ್ದಿತ್ತು. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿತ್ತು, ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.

ಆದರೆ ಈ ಮಕ್ಕಳ ಅದೃಷ್ಟ ಚೆನ್ನಾಗಿತ್ತು ಯಾರಿಗೂ ಏನೂ ಅಪಾಯವಾಗಿಲ್ಲ. ಆದರೆ ಈ ಬೆಳ್ಳಂದೂರು ಶಾಲೆಯಲ್ಲಿ ತರಗತಿ ನಡೆಯುವಾಗಲೇ ಅನಾಹುತ ಸಂಭವಿಸಿದರೆ ಏನು ಗತಿ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:02 pm, Wed, 29 November 23

ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ಸುಧಾಕರ್ ವಿರುದ್ಧ ಈಶ್ವರ್ ಗೆದ್ದಿರುವುದನ್ನು ನಾವು ಅಂಗೀಕರಿಸಬೇಕು: ರೆಡ್ಡಿ
ಸುಧಾಕರ್ ವಿರುದ್ಧ ಈಶ್ವರ್ ಗೆದ್ದಿರುವುದನ್ನು ನಾವು ಅಂಗೀಕರಿಸಬೇಕು: ರೆಡ್ಡಿ