AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

Bengaluru news: ಅಪಾರ್ಟ್‌ಮೆಂಟ್‌ನಿಂದ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಚಾಲುಕ್ಯ ಸರ್ಕಲ್‌ ಬಳಿ ನಡೆದಿದೆ. ಅಪಾರ್ಟ್ಮೆಂಟ್ ಒಳಗಡೆ ಹೋಗಲು ಯತ್ನಿಸಿ ಸಾಧ್ಯವಾಗದ ಹಿನ್ನಲೆ ಮತ್ತೊಂದು ಅಪಾರ್ಟ್ಮೆಂಟ್​ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Rakesh Nayak Manchi
|

Updated on:Feb 26, 2023 | 9:33 PM

Share

ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರ 11ನೇ ಮಹಡಿಯಿಂದ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ (Young Women Suicide) ಮಾಡಿಕೊಂಡ ಘಟನೆ ನಗರದ ಚಾಲುಕ್ಯ ಸರ್ಕಲ್‌ ಬಳಿ ನಡೆದಿದೆ. ಸೋಫಿಯ ಕಾಲೇಜಿನ ವಿದ್ಯಾರ್ಥಿನಿ ಪ್ರಕೃತಿ (18) ಸಾವನ್ನಪ್ಪಿದವಳು ಎಂದು ತಿಳಿದುಬಂದಿದೆ. ಹೈ ಪಾಯಿಂಟ್ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಕಳೆಗೆ ಹಾರಿದ ಯುವತಿ ಕೆಂಪು ಬಣ್ಣದ ಕಾರಿನ ಮೇಲೆ ಅಪ್ಪಳಿಸಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಯುವತಿ ಮೇಲಿನಿಂದ ಬಿದ್ದಿದ್ದರಿಂದ ಕಾರಿನ ಹಿಂಭಾಗದ ಗಾಜು ಪುಡಿಪುಡಿಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊರಗಡೆಯಿಂದ ಮೊಬೈಲ್​ನಲ್ಲಿ ಮಾತನಾಡಿಕೊಂಡು ಯುವತಿ ಬಂದಿದ್ದಾಳೆ ಎಂದು ಅಪಾರ್ಟ್​ಮೆಂಟ್​ ಸೆಕ್ಯುರಿಟಿ ಗಾರ್ಡ್ ಹೇಳಿದ್ದಾರೆ. ಇದಕ್ಕೂ ಮೊದಲು, ಆಕೆ ಬಿದ್ದ ಅಪಾರ್ಟ್ಮೆಂಟ್​ನ ಮುಂಭಾಗದಲ್ಲಿರುವ ಅಪಾರ್ಟ್ಮೆಂಟ್ ಒಳಗಡೆ ಹೋಗಲು ಯತ್ನಿಸಿದ್ದಾಳೆ. ಆದರೆ ಒಳಗೆ ಎಂಟ್ರಿಯಾಗಲು ಸಾಧ್ಯವಾಗದೆ ಮತ್ತೊಂದು ಅಪಾರ್ಟ್ಮೆಂಟ್​ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯುವತಿ ಮೊಬೈಲ್ ಒಡೆದು ಹೋಗಿದ್ದು, ಆಕೆಯ ಬೇಜಲ್ಲಿ 300 ರೂಪಾಯಿ ಪತ್ತೆಯಾಗಿದೆ.

ಇದನ್ನೂ ಓದಿ: Delhi: ಆಸ್ತಿ ಮುಟ್ಟುಗೋಲಿಗೆ ಕೋರ್ಟ್​ನಿಂದ ನೋಟಿಸ್, ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

ಸಂಜಯನಗರ ನಿವಾಸಿಯಾಗಿರುವ ಪ್ರಕೃತಿ, ಕೆಲ ದಿನಗಳಿಂದ ಖಿನ್ನತೆ ಒಳಗಾಗಿದ್ದಳು ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ಪೋಷಕರು ಯುವತಿ ಮೃತದೇಹ ಗುರುತಿಸಿದ ಬಳಿ ಬೋರಿಂಗ್ ಆಸ್ಪತ್ರೆಗೆ ಪ್ರಕೃತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ

ಯುವತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಮೃತ ಯುವತಿ ಬಳಿ ಒಂದು ಮೊಬೈಲ್ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಮೃತ ಯುವತಿ ಪೋಷಕರನ್ನು ಸಂಪರ್ಕಿಸುತ್ತಿದ್ದೇವೆ. ಮೃತ ಯುವತಿ ಅಪಾರ್ಟ್‌ಮೆಂಟ್​ನ ನಿವಾಸಿ ಅಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Sun, 26 February 23