ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಬಾಲಕನನ್ನು ತಾಯಿ ಮಡಿಲಿಗೆ ಸೇರಿಸಿದ ಯುವಕರು
ಯುವಕರು ಬಾಲಕನಿಗೆ ಬೇಕರಿಯಲ್ಲಿ ಮಲಗಲು ಜಾಗ ಕೊಟ್ಟು ಕಟಿಂಗ್ ಮಾಡಿಸಿ ಊಟ, ಬಟ್ಟೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಬಾಲಕ ಹೇಳಿದ್ದ ತನ್ನ ಅಣ್ಣನ ಹೆಸರನ್ನ ಯುವಕರು ಫೇಸ್ಬುಕ್ನಲ್ಲಿ ಸರ್ಚ್ ಮಾಡಿದ್ದಾರೆ.
ಬೆಂಗಳೂರು: ಒಂದು ವರ್ಷದ ಹಿಂದೆ ಕಣ್ಣಾಮುಚ್ಚಾಲೆ ಆಡುವಾಗ ಗೂಡ್ಸ್ ಟ್ರೈನ್ ಹತ್ತಿ ನಾಪತ್ತೆಯಾಗಿದ್ದ ಬಾಲಕನನ್ನು (Boy) ಕುಟುಂಬಸ್ಥರಿಗೆ ಒಪ್ಪಿಸಿ ಯುವಕರು ಮಾನವೀಯತೆ (Humanity) ಮೆರೆದಿದ್ದಾರೆ. ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ನಲ್ಲಿ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕ ಹಸಿವಿನಿಂದ ಓಡಾಡುತ್ತಿದ್ದ. ಈ ವೇಳೆ ಬೇಕರಿ ಮಾಲೀಕ ರಾಜಣ್ಣ ಮತ್ತು ಯುವಕರಾದ ನಿತಿನ್ ಮತ್ತು ಶ್ರೀಧರ್ ಎಂಬುವವರು ಬಾಲಕನನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಹಿಂದಿ ಭಾಷೆ ಮಾತನಾಡುತ್ತಿದ್ದ ಬಾಲಕ ಊರಿನ ಹೆಸರು ಮರೆತಿದ್ದ. ಯುವಕರು ಫೇಸ್ಬುಕ್ನಲ್ಲಿ ಕುಟುಂಬಸ್ಥರನ್ನು ಪತ್ತೆ ಹಚ್ಚಿ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಯುವಕರು ಬಾಲಕನಿಗೆ ಬೇಕರಿಯಲ್ಲಿ ಮಲಗಲು ಜಾಗ ಕೊಟ್ಟು ಕಟಿಂಗ್ ಮಾಡಿಸಿ ಊಟ, ಬಟ್ಟೆ ಕೊಟ್ಟು ಮಾನವೀಯತೆ ಮೆರೆದಿದ್ದರು. ಜೊತೆಗೆ ಬಾಲಕ ಹೇಳಿದ್ದ ತನ್ನ ಅಣ್ಣನ ಹೆಸರನ್ನ ಯುವಕರು ಫೇಸ್ಬುಕ್ನಲ್ಲಿ ಸರ್ಚ್ ಮಾಡಿದ್ದಾರೆ. ಈ ವೇಳೆ ಬಾಲಕ ಪಶ್ಚಿಮ ಬಂಗಾಳದ ಅಣ್ಣನ ಪೋಟೋವನ್ನ ಫೇಸ್ಬುಕ್ನಲ್ಲಿ ಗುರುತಿಸಿದ್ದ. ಕೂಡಲೇ ಮೆಸೇಂಜರ್ ಮೂಲಕ ಕುಟುಂಬಸ್ಥರನ್ನ ಸಂಪರ್ಕಿಸಿ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಿದ್ದಾರೆ.
ಇದನ್ನೂ ಓದಿ: Rishabh Pant: ತಾನು ಔಟಾದಾಗ ಎದುರಾಳಿ ಆಟಗಾರರ ಜೊತೆ ಸಂಭ್ರಮಿಸಿದ ರಿಷಭ್ ಪಂತ್: ವೈರಲ್ ವಿಡಿಯೋ
ನಿನ್ನೆ ಬಾಲಕನ ಪೋಷಕರು ಬೆಂಗಳೂರಿಗೆ ಆಗಮಿಸಿದ್ದರು. ತಾಯಿಯನ್ನು ನೋಡುತ್ತಿದ್ದಂತೆ ಬಾಲಕ ಸುಹಾಸ್ ಕಣ್ಣೀರು ಹಾಕಿದ್ದಾನೆ. ಈ ವೇಳೆ ಕುಟುಂಬಸ್ಥರು ಮಗ ಒಂದು ವರ್ಷದ ಹಿಂದೆಯೇ ನಾಪತ್ತೆಯಾಗಿದ್ದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಮಗನನ್ನ ಪೋಷಕರು ನಿನ್ನೆಯೇ ಹುಟ್ಟೂರಿಗೆ ಕರೆದುಕೊಂಡು ಹೋಗಿದ್ದಾರೆ. ದಿಕ್ಕು ತೋಚದೆ ಊರೂರು ಅಲೆಯುತ್ತಿದ್ದ ಬಾಲಕ ಸುಹಾಸ್ ನಗರಕ್ಕೆ ಬಂದು ಯುವಕರ ಸಹಾಯದಿಂದ ಕೊನೆಗೂ ತಾಯಿಯ ಮಡಿಲು ಸೇರಿದ್ದಾನೆ.
ಇದನ್ನೂ ಓದಿ: Rishabh Pant: ತಾನು ಔಟಾದಾಗ ಎದುರಾಳಿ ಆಟಗಾರರ ಜೊತೆ ಸಂಭ್ರಮಿಸಿದ ರಿಷಭ್ ಪಂತ್: ವೈರಲ್ ವಿಡಿಯೋ
Published On - 9:22 am, Sat, 25 June 22