ಬೆಂಗಳೂರಿನಲ್ಲಿನ ಅತಿ ಉದ್ದದ ರಸ್ತೆಗೆ ನಟ ವಿಷ್ಣುವರ್ಧನ್​ ಹೆಸರು! ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ

ಡಾ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮಗೊಳಿಸಿದ ಘಟನೆಯ ನಂತರ, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಅತಿ ಉದ್ದದ ರಸ್ತೆಗೆ ಅವರ ಹೆಸರಿಡಲಾಗಿದೆ ಎಂದು ಹಂಚಿಕೊಂಡಿದ್ದಾರೆ. ಬನಶಂಕರಿಯಿಂದ ಕೆಂಗೇರಿಯವರೆಗಿನ 14.5 ಕಿ.ಮೀ ರಸ್ತೆಯ ಹೆಸರು ಡಾ. ವಿಷ್ಣುವರ್ಧನ್ ಎಂದು ಬಿಬಿಎಂಪಿ 2013ರಲ್ಲಿ ಹೆಸರು ಇಟ್ಟಿದೆ.

ಬೆಂಗಳೂರಿನಲ್ಲಿನ ಅತಿ ಉದ್ದದ ರಸ್ತೆಗೆ ನಟ ವಿಷ್ಣುವರ್ಧನ್​ ಹೆಸರು! ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ
ರಸ್ತೆಗೆ ವಿಷ್ಣುವರ್ಧನ್​ ಹೆಸರು

Updated on: Aug 16, 2025 | 3:48 PM

ಬೆಂಗಳೂರು, ಆಗಸ್ಟ್​ 16: ಕೆಂಗೆರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ನಟ ಡಾ. ವಿಷ್ಣುವರ್ಧನ್ (Vishnuvardhan) ಅವರ ಸಮಾಧಿಯನ್ನು ನೆಲಸಮಗೊಳಿಸಲಾಗಿತ್ತು. ಕನ್ನಡ ಚಿತ್ರರಂಗದ ಮೇರು ನಟನ ಸಮಾಧಿ ನೆಲಸಮವಾಗಿರುವುದು ಚಿತ್ರರಂಗಕ್ಕೆ ಆಘಾತ ತಂದಿತ್ತು. ವಿಷ್ಣುವರ್ಧನ್ ಅಭಿಮಾನಿಗಳು ಸಹ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಬೇಸರ ವ್ಯಪಡಿಸಿದ್ದರು. ಈ ವಿವಾದದ ನಡುವೆ ವಿಷ್ಣುವರ್ಧನ್​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್​ವೊಂದು ಹಾಕಿಕೊಂಡಿದ್ದು, ಭಾರಿ ಚರ್ಚೆಯಾಗುತ್ತಿದೆ. ಅದು, ಬೆಂಗಳೂರಿನಲ್ಲಿನ (Bengaluru) ಅತಿ ಉದ್ದದ ರಸ್ತೆಗೆ ಡಾ. ವಿಷ್ಣುವರ್ಧನ್​ ಅವರ ಹೆಸರು ಇಡಲಾಗಿದೆ ಎಂದು ಫೋಸ್ಟ್​ ಮಾಡಿದ್ದಾರೆ.

“ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿ ತನಕ 14.5 ಕಿಮೀ ಉದ್ದದ ರಸ್ತೆಗೆ ವಿಷ್ಣುವರ್ಧನ್ ಹೆಸರಿದೆ.
ಮಹಾತ್ಮಾ ಗಾಂಧಿ, ರಾಜ್ ಕುಮಾರ್, ವಾಟಾಳ್, ಕುವೆಂಪು, ಯಾರ ಹೆಸರಲ್ಲೂ ಬೆಂಗಳೂರಲ್ಲಿ ಇಷ್ಟುದ್ದ ರಸ್ತೆ ಇಲ್ಲ. ಪುನೀತ್ ರಾಜಕುಮಾರ್ ಅವರ ಹೆಸರಿನ ರಸ್ತೆ 12 ಕಿಮೀ ಇದೆ ಎಂದು ನವೀನ್​ ಸಾಗರ್​ ಎಂಬುವರು ಪೋಸ್ಟ್​​​ ಹಾಕಿದ್ದಾರೆ.

ಇದನ್ನೂ ನೋಡಿ: ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?

ಟ್ವಿಟರ್ ಪೋಸ್ಟ್​

ಇದು ನಿಜಾನಾ? ಇಲ್ಲಿದೆ ಅಸಲಿ ಸತ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯು 2013ರಲ್ಲೇ ಬನಶಂಕರಿ ದೇವಸ್ಥಾನದಿಂದ ಕೆಂಗೇರಿವರೆಗಿನ 14 ಕಿ.ಮೀ ರಸ್ತೆಗೆ ಚಲನಚಿತ್ರ ನಟ ಡಾ. ವಿಷ್ಣುವರ್ಧನ್ ಅವರ ಹೆಸರಿಟ್ಟಿದೆ. ವಾಟಾಳ್ ನಾಗರಾಜ್ ರಸ್ತೆ 3 ಕಿ.ಮೀ ಮತ್ತು ಪದ್ಮಭೂಷಣ ಡಾ. ರಾಜ್‌ಕುಮಾರ್ ರಸ್ತೆ 6 ಕಿ.ಮೀ. ಇದೆ.

ಡಿಸೆಂಬರ್ 2009 ರಲ್ಲಿ ವಿಷ್ಣುವರ್ಧನ್ ನಿಧನರಾದರು. ಬಳ್ಳಾರಿ ಮಹಾನಗರ ಪಾಲಿಕೆ ಮೊದಲು ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಿಸಿತು. ಬಿಬಿಎಂಪಿ ಕೂಡ ಅದೇ ಕ್ರಮವನ್ನು ಅನುಸರಿಸಿ, ರಸ್ತೆಗೆ ನಟನ ಹೆಸರು ಇಟ್ಟಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ