BESCOM: 10 ದಿನ ಮುಂಚೆಯೇ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಸಿಗುತ್ತದೆ ಭಾರೀ ರಿಯಾಯ್ತಿ- ಇದು ಬೆಸ್ಕಾಂ ಕೊಡುಗೆ!
ನಿಗದಿತ ಸಮಯದೊಳಗೆ ಬೆಸ್ಕಾಂನ ಬಿಲ್ ಮೊತ್ತ ಪಾವತಿಸಿ, ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ದರವನ್ನು ಪಡೆಯಿರಿ!
ಬೆಂಗಳೂರು: ಗ್ರಾಹಕರಿಗೆ ಬೆಸ್ಕಾಂ ಸಿಹಿ ಸುದ್ದಿ ನೀಡಿದೆ. ವಿದ್ಯುತ್ ಬಿಲ್ ಮೇಲೆ ಶೇ. 0.25 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ವಿದ್ಯುತ್ ಬಿಲನ್ನು ನಿಗದಿತ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪಾವತಿಸಿದರೆ ರಿಯಾಯಿತಿ ಸಿಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮಾಸಿಕ ವಿದ್ಯುತ್ ಬಿಲ್ 1 ಸಾವಿರ ರೂಪಾಯಿ ಮೀರಿದ ಮುಂಗಡ ಪಾವತಿಗೆ ಶೇ 0.25 ರಷ್ಟು ರಿಯಾಯಿತಿ ಸಿಗಲಿದೆ.
ನಿಗದಿತ ಸಮಯದೊಳಗೆ ಬೆಸ್ಕಾಂನ ಬಿಲ್ ಮೊತ್ತ ಪಾವತಿಸಿ, ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ದರವನ್ನು ಪಡೆಯಿರಿ!
ಇಂದೇ ನಿಮ್ಮ ಬಾಕಿ ಇರುವ ಬಿಲ್ ಮೊತ್ತವನ್ನು ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್ ಮೂಲಕ ಪಾವತಿಸಿ.@mdbescom @BescomHelpline @MinOfPower @mnreindia @karkalasunil @BLRSmartCity @BBMPCOMM @BescomTa pic.twitter.com/WDIGVlKdr4
— Namma BESCOM (ನಮ್ಮ ಬೆಸ್ಕಾಂ) (@NammaBESCOM) January 16, 2023
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಕೊನೆಯ ದಿನಾಂಕದ 10 ದಿನದ ಮುಂಚೆಯೇ ಪಾವತಿಸಿದರೆ ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ಪಡೆಯಬಹುದು ಇದರಿಂದ ಗ್ರಾಹಕರ ಹಣ ಸೇವ್ ಆಗಲಿದೆ. ಮಾಸಿಕ ವಿದ್ಯುತ್ ಬಿಲ್ ದರ ಒಂದು ಸಾವಿರ ರೂಪಾಯಿ ಮೀರಿದ್ದರೆ ಅವರು ಮುಂಗಡ ಬಿಲ್ ಪಾವತಿಸುವ ಮೂಲಕ ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ಪಡೆಯಬಹುದು. ಬಿಲ್ ಮೊತ್ತವನ್ನು ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್ ಮೂಲಕ ಕೂಡ ಪಾವತಿಸಬಹುದು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:17 pm, Wed, 18 January 23