ಸಂವಾದದಲ್ಲಿ ಸಿಎಂಗೆ ನಿಮ್ಮ ಸಿದ್ಧಾಂತ ಯಾವುದು ಎಂದು ಕೇಳಿದ ವಿದ್ಯಾರ್ಥಿ: ಬೊಮ್ಮಾಯಿ ಕೊಟ್ಟ ರೋಚಕ ಉತ್ತರ ಹೀಗಿದೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಇಂದು (ಜ.18) ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೆಪಿ ನಗರದ ಆರ್ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಎಂಎಲ್ಸಿ ಗೋಪಿನಾಥ್ ರೆಡ್ಡಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕ್ರೀಡಾಪಟು ಪಂಕಜ್ ಅಡ್ವಾಣಿ, ನಟಿ ಪ್ರಣೀತಾ, ಗಾಯಕ ಚಂದನ್ ಶೆಟ್ಟಿ, ಬಿಜೆಪಿ ಯುವ ಮೂರ್ಚಾದ ಅನಿಲ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂವಾದದಲ್ಲಿ ರಾಜ್ಯದ ವಿವಿಧ ಜಿಲ್ಲಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಚುವಲ್ ಮೂಲಕ ಮತ್ತು ಪ್ರತ್ಯಕ್ಷವಾಗಿ ಭಾಗಿಯಾಗಿದ್ದರು.
ಸಂವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಪ್ರಶ್ನೆ, ಸಿಎಂ ಉತ್ತರ
ಪ್ರಶ್ನೆ 1: ರಾಜಕೀಯದಲ್ಲಿ ಸಿದ್ದಾಂತ ಎಷ್ಟು ಮುಖ್ಯ ಆಗುತ್ತದೆ? ನಿಮ್ಮ ಸಿದ್ದಾಂತ ಏನು?
ಉತ್ತರ: ವಿದ್ಯಾರ್ಥಿ ಜೀವನದಲ್ಲಿ ಇದ್ದಾಗ ವಿದ್ಯಾರ್ಥಿಯಾಗಿ ಕಲಿಯೋಕೆ ಇರುತ್ತಾರೆ. ರಾಜಕೀಯ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಅಂದುಕೊಳ್ಳುತ್ತಾರೆ. ಅದೇ ರಾಜಕೀಯ ಸ್ಥಾನಕ್ಕೆ ಬಂದಾಗ ರಾಜಕೀಯ ಹೇಗೆ ಮಾಡಬೇಕು ಎಂದು ಬದಲಾಗುತ್ತಾರೆ ಅದೇ ಸಿದ್ದಾಂತ.
ಪ್ರಶ್ನೆ2: ಬೋರ್ಡ್ ಪರೀಕ್ಷೆಗಳನ್ನು ಮತ್ತಷ್ಟು ಡಿಜಿಟಲೈಸೇಷನ್ ಮಾಡಬೇಕು
ಉತ್ತರ: ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೈಸೇಷನ್ ತಲುಪಿಲ್ಲ. ಇನ್ನೂ ಡಿಜಿಟಲ್ ಅವರಿಗೆ ತಲುಪಲು ಸಮಯ ಬೇಕಿದೆ. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳು ಅನೇಕ ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಡಿಜಿಟಲೈಸ್ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ. ಬೈಜೂಸ್ ರೀತಿ ಸರ್ಕಾರದ ತಂತ್ರಾಂಶ ಸಿದ್ದಪಡಿಸಲಾಗುವುದು. ಡಿಜಿಟಲೈಸೇಷನ್ ವ್ಯವಸ್ಥೆಗೆ ಸರ್ಕಾರ ಕೂಡ ಕ್ರಮ ತೆಗೆದುಕೊಳ್ಳುತ್ತದೆ ಎಂದು ಉತ್ತರ ನೀಡಿದರು.
ಪ್ರಶ್ನೆ 3: ಕಾಲೇಜಲ್ಲಿ ಚುನಾವಣೆ ನಡೆಸುವ ವಿಚಾರವಾಗಿ ಪ್ರಶ್ನೆ
ಉತ್ತರ: ಇದು ಓದುವ ಸಮಯ, ಚೆನ್ನಾಗಿ ಓದಿ, ಕಾಲೇಜು ಸಮಯವನ್ನು ಎಂಜಾಯ್ ಮಾಡಿ. ಕಾಲೇಜಿನಲ್ಲಿ ಚುನಾವಣೆ ಬೇಡ. ಅದು ದೊಡ್ಡ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಶ್ನೆ 4: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಯ ಪ್ರಶ್ನೆ
ಉತ್ತರ: ಮೋದಿಯವರ ಜೊತೆ ಯಾರಾದರು ಕೆಲ ಸಮಯ ಕಳೆದರೆ ಅವರ ಫಾಲೋವರ್ ಆಗುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಹೊಸತನ್ನು ಕಲಿಯುವ ಹಂಬಲವಿದೆ. ಪ್ರಧಾನಿ ಮೋದಿ ಎಲ್ಲವನ್ನೂ ಪಾಸಿಟಿವ್ ಆಗಿ ನೋಡುವಂತಹ ವ್ಯಕ್ತಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಈ ಹಿಂದೆ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ಇಂದು ಜ್ಞಾನ ಇದ್ದವರು ಜಗತ್ತನ್ನು ಆಳುತ್ತಿದ್ದಾರೆ. ನಾವು ಜ್ಞಾನದ ಕಾಲದಲ್ಲಿದ್ದೇವೆ. ಕರ್ನಾಟಕ ಮತ್ತು ಭಾರತಕ್ಕೆ ದೊಡ್ಡ ಭವಿಷ್ಯವಿದೆ. ಭಾರತದ Growth engine ಯಾವುದಾದರೂ ಇದ್ದರೆ ಅದು ಕರ್ನಾಟಕ.
ಪ್ರಶ್ನೆ 5: ಡೆಂಟಲ್ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು?
ಉತ್ತರ: ಉತ್ತರ ಕರ್ನಾಟಕದ ಭಾಗದಲ್ಲಿ ತಂಬಾಕು ತಿನ್ನುವವರು ಹೆಚ್ಚಾಗಿದ್ದಾರೆ. ಆರೋಗ್ಯ ಇಲಾಖೆ ಸರಣಿ ಕ್ಯಾಂಪ್‌ಗಳನ್ನು ಮತ್ತು ಆರೋಗ್ಯ ಶಿಬಿರ ಮಾಡುತ್ತದೆ. ಯುವ ಡೆಂಟಲ್ ವಿದ್ಯಾರ್ಥಿಗಳನ್ನು ಸರ್ಕಾರದ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗುವುದು. ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
ಪ್ರಶ್ನೆ 6: ವರ್ಚುವಲ್ ಮೂಲಕ ಬೆಳಗಾವಿಯಿಂದ – ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು?
ಉತ್ತರ: ಈಗಾಗಲೇ ಸರ್ಕಾರ ವಿವೇಕ ಯೋಜನೆ ಜಾರಿಮಾಡಿದೆ. ಅಮೃತ ಯೋಜನೆಯಡಿ 500 ಶಾಲೆಗಳ ದುರಸ್ತಿ,ಅಭಿವೃದ್ದಿ ಮಾಡಲಾಗುತ್ತಿದೆ.
ಪ್ರಶ್ನೆ 7: ಮಾನಸಿಕವಾಗಿ ಹಾಗೂ ದೈಹಿಕವಾಗಿ ಯುವ ಜನತೆ ಬಳಲುತ್ತಿದ್ದಾರೆ. ಅದರಿಂದ ಹೊರಬರಲು ಏನು ಸಲಹೆ ಕೊಡುತ್ತೀರಿ?
ಉತ್ತರ: ನೀವೂ ಎಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂಬುವುದನ್ನು ತಿಳಿದುಕೊಳ್ಳಿ. ಸಮಯಕ್ಕೆ ಪ್ರಾಮುಖ್ಯತೆ ಕೊಡಿ. ಓದುವ ಸಮಯದಲ್ಲಿ ಟಿವಿ, ಮೊಬೈಲ್ಗೆ ಹೆಚ್ಚು ಸಮಯ ಕೊಡಬೇಡಿ. ನಿಮ್ಮ ಶಿಕ್ಷಣದ ಜೊತೆಗೆ ನೀವು ದೈಹಿಕವಾಗಿಯೂ ಸಬಲರಾಗಿರಬೇಕು. ಬೆಳಗ್ಗೆ ಎದ್ದು ವ್ಯಾಯಾಮ ಮಾಡಿ. ಸಮಯ ಪಾಲನೆ ತುಂಬಾನೇ ಮುಖ್ಯ. ಆಗ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡವಾಗುತ್ತೀರಿ. ದಿನವೂ ಮಂಕಾಗಿ ಇರಬೇಡಿ. ನೀವೂ ನಗುತ್ತ ದಿನವನ್ನು ಕಳೆಯಿರಿ. ಸಾಮಾಜಿಕ ಜಾಲತಾಣಗಳನ್ನ ಎಷ್ಟು ಬಳಕೆ ಮಾಡಬೇಕು ಅಷ್ಟೇ ಬಳಕೆ ಮಾಡಿ. ಮಾಹಿತಿ ಸಂಗ್ರಹಿಸಲು ನಿಮ್ಮದೇ ಆಫ ಸೋರಸ್ ಇರಬೇಕು ಜೊತೆಗೆ ನೀವೂ ಅನಾಲಿಸಿಸ್ ಮಾಡುವ ಸಾಮರ್ಥ್ಯ ಹೊಂದರಿಬೇಕು. ನಿಮ್ಮ ಮೇಲೆ ನೀವು ನಂಬಿಕೆ ಇಡಿ ಎಂದು ಹೇಳಿದರು.
ಪ್ರಶ್ನೆ 8: ಹಳ್ಳಿಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುವ ವಿಚಾರವಾಗಿ
ಉತ್ತರ: ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳಿಗಾಗಿ ಹಳ್ಳಿಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ಇದೆ.
ಪ್ರಶ್ನೆ 9: ತವರು ಜಿಲ್ಲೆ ಹಾವೇರಿಯಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಡುವುದರ ವಿಚಾರವಾಗಿ
ಉತ್ತರ: ಹಾವೇರಿ ಜಿಲ್ಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ್ನು ವಿಸ್ತೀರ್ಣ ಮಾಡುತ್ತಿದ್ದೇವೆ. ಇಂಡೋರ್ ಗೇಮ್ ಸೌಲಭ್ಯ ಕಲ್ಪಿಸುತ್ತಿದ್ದೇವೆ. ತಾಲ್ಲೂಕು ಲೆವಲ್ನಲ್ಲೂ ಕ್ರೀಡೆಗೆ ಒತ್ತು ಕೊಡುತ್ತಿದ್ದೇವೆ. ಟ್ರ್ಯಾಕ್ಗಳನ್ನು ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ತರಬೇತಿ ನೀಡಲು ತರಬೇತುದರರನ್ನು ನೇಮಿಸುತ್ತಿದ್ದೇವೆ. ಹೆಣ್ಣುಮಕ್ಕಳಿಗೆ ಕ್ರೀಡೆ ಹಾಗೂ ಸೆಲ್ಫ್ ಡಿಫೆನ್ಸ್ ಕಲಿಸುತ್ತಿದ್ದೇವೆ. ಹಾವೇರಿಯ ಎಲ್ಲಾ ಕ್ರೀಡಾಂಗಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದರು.
ಪ್ರಶ್ನೆ 10: ನಿಮ್ಮ ಪ್ರಕಾರ ಯಶಸ್ಸು ಅಂದ್ರೆ ಏನು? ನಿಮ್ಮ ಸ್ಪೂರ್ತಿ ಯಾರು?
ಉತ್ತರ: ಯಶಸ್ಸು ಅನ್ನೋದು ಪ್ರತಿಯೊಬ್ಬರ ವೈಯಕ್ತಿಕ. ಒಬ್ಬರು ಇಂಜಿನಿಯರ್ ಆಗಬೇಕು ಅಂದುಕೊಂಡು ಇಂಜಿನಿಯರ್ ಆದರೆ ಅದು ಯಶಸ್ಸು. ಆದರೆ ಸಾಧನೆ ಅದಕ್ಕಿಂತ ದೊಡ್ಡದು. ಯಶಸ್ಸು ವೈಯಕ್ತಿಕ ಆದರೆ ಸಾಧನೆ ಸಮಾಜಕ್ಕೆ ಪೂರಕ. ನನ್ನ ಸ್ಪೂರ್ತಿ ಸ್ವಾಮಿ ವಿವೇಕಾನಂದರು. ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ವಿವೇಕಾನಂದರು ಹೇಳಿದ್ದಾರೆ. ಸಾವಿನ ನಂತರವೂ ಸಾಧನೆ ಬದುಕುತ್ತದೆ. ನೀವೂ ಕೂಡ ಸಾಧಕರಾಗಬೇಕು ಎಂದು ಸ್ಪೂರ್ತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Wed, 18 January 23