BESCOM: 10 ದಿನ ಮುಂಚೆಯೇ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಸಿಗುತ್ತದೆ ಭಾರೀ ರಿಯಾಯ್ತಿ- ಇದು ಬೆಸ್ಕಾಂ ಕೊಡುಗೆ!

ನಿಗದಿತ ಸಮಯದೊಳಗೆ ಬೆಸ್ಕಾಂನ ಬಿಲ್ ಮೊತ್ತ ಪಾವತಿಸಿ, ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ದರವನ್ನು ಪಡೆಯಿರಿ!

BESCOM: 10 ದಿನ ಮುಂಚೆಯೇ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಸಿಗುತ್ತದೆ ಭಾರೀ ರಿಯಾಯ್ತಿ- ಇದು ಬೆಸ್ಕಾಂ ಕೊಡುಗೆ!
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Jan 18, 2023 | 1:25 PM

ಬೆಂಗಳೂರು: ಗ್ರಾಹಕರಿಗೆ ಬೆಸ್ಕಾಂ ಸಿಹಿ ಸುದ್ದಿ ನೀಡಿದೆ. ವಿದ್ಯುತ್ ಬಿಲ್ ಮೇಲೆ ಶೇ. 0.25 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ವಿದ್ಯುತ್ ಬಿಲ​ನ್ನು ನಿಗದಿತ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪಾವತಿಸಿದರೆ ರಿಯಾಯಿತಿ ಸಿಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮಾಸಿಕ ವಿದ್ಯುತ್ ಬಿಲ್ 1 ಸಾವಿರ ರೂಪಾಯಿ ಮೀರಿದ ಮುಂಗಡ ಪಾವತಿಗೆ ಶೇ 0.25 ರಷ್ಟು ರಿಯಾಯಿತಿ ಸಿಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಕೊನೆಯ ದಿನಾಂಕದ 10 ದಿನದ ಮುಂಚೆಯೇ ಪಾವತಿಸಿದರೆ ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ಪಡೆಯಬಹುದು ಇದರಿಂದ ಗ್ರಾಹಕರ ಹಣ ಸೇವ್ ಆಗಲಿದೆ. ಮಾಸಿಕ ವಿದ್ಯುತ್ ಬಿಲ್ ದರ ಒಂದು ಸಾವಿರ ರೂಪಾಯಿ ಮೀರಿದ್ದರೆ ಅವರು ಮುಂಗಡ ಬಿಲ್ ಪಾವತಿಸುವ ಮೂಲಕ ಶೇ.0.25 ರಷ್ಟು ಆಕರ್ಷಕ ರಿಯಾಯಿತಿ ಪಡೆಯಬಹುದು. ಬಿಲ್ ಮೊತ್ತವನ್ನು ಬೆಸ್ಕಾಂ ಮಿತ್ರ ಮೊಬೈಲ್ ಆ್ಯಪ್‌ ಮೂಲಕ ಕೂಡ ಪಾವತಿಸಬಹುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:17 pm, Wed, 18 January 23

TV9 Web

TV9 Kannada

Read More
Loading...
Unable to load recommendations.
Follow Us