HSRP ನಂಬರ್ ಪ್ಲೇಟ್ ಅಪ್ಲೈ ಮಾಡುವ ಮುನ್ನ ಎಚ್ಚರ! ಆನ್​ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್​ಗಳ ಹಾವಳಿ

| Updated By: ಆಯೇಷಾ ಬಾನು

Updated on: Feb 17, 2024 | 9:15 AM

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ವಂಚನೆ ನಡೆಯುತ್ತಿದೆ. ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್​ಗಳನ್ನು ನಕಲಿ ಮಾಡಲಾಗುತ್ತಿದ್ದು ಜನರು ಆ ನಕಲಿ ಕ್ಯೂ ಆರ್ ಕೋಡ್​ಗಳನ್ನು ಟಚ್ ಮಾಡಿದರೆ ಸಾಕು ಖದೀಮರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆಯಾಗುತ್ತೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

HSRP ನಂಬರ್ ಪ್ಲೇಟ್ ಅಪ್ಲೈ ಮಾಡುವ ಮುನ್ನ ಎಚ್ಚರ! ಆನ್​ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್​ಗಳ ಹಾವಳಿ
HSRP ನಂಬರ್ ಪ್ಲೇಟ್ ಅಪ್ಲೈ ಮಾಡುವ ಮುನ್ನ ಎಚ್ಚರ
Follow us on

ಬೆಂಗಳೂರು, ಫೆ.17: ಮೇ 31ರವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳನ್ನು ಆನ್‌ಲೈನ್​ನಲ್ಲಿ ಹಾಕಿ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ. ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​ಗೆ ಅಪ್ಲೈ ಮಾಡುವ ಮುನ್ನ ಇರಲಿ ಎಚ್ಚರ. ಆನ್‌ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ. ಅಪ್ಪಿ ತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಅಷ್ಟೋ ಹಣ ಮಾಯವಾಗುತ್ತೆ.

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ನಕಲಿ ಲಿಂಕ್ ಹರಿಬಿಟ್ಟು ಕೆಲ ಖದೀಮರು ದುಡ್ಡು ಮಾಡಲು ಹೊರಟಿದ್ದಾರೆ. ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್​ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಟಚ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು ಸ್ವಲ್ಪ ಎಮಾರಿದ್ರು ನಿಮ್ಮ ಖಾತೆಯಲ್ಲಿದ್ದ ಹಣ ಖದೀಮರ ಪಾಲಾಗುತ್ತೆ. ಈ ಬಗ್ಗೆ ಓರ್ವ ವ್ಯಕ್ತಿ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದು ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಸೈಬರ್ ವಂಚನೆ ಬಗ್ಗೆ ಟ್ವೀಟ್ ಮಾಡಿದ ವ್ಯಕ್ತಿ

HSRP ನಂಬರ್ ಪ್ಲೇಟ್ ಅಳಡಿಕೆಗೆ ಮುಗಿಬಿದ್ದ ಜನರು ಟೆಕ್ನಿಕಲ್ ಸಮಸ್ಯೆಯಿಂದಾಗಿ, ಶುಲ್ಕ ಪಾವತಿ ನಂತರ ಕೈಕೊಡುತ್ತಿರುವ ಪೋರ್ಟಲ್‌ಗಳು ಜನರ ಪರದಾಟ ಸರ್ವರ್‌ ಮೇಲೆ ಒತ್ತಡ ಹೆಚ್ಚಿ ಪೋರ್ಟಲ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ .ಮಾಲೀಕರು ಈ ಪೋರ್ಟಲ್‌ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ. ಮತ್ತೆ ಕೆಲವರು ವಾಹನದ ನೋಂದಣಿ ಸಂಖ್ಯೆ, ಎಂಜಿನ್‌ ಸಂಖ್ಯೆ, ಚಾರ್ಸಿ ಸಂಖ್ಯೆಯ ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್‌ಗಳು ತೋರಿಸುತ್ತಿವೆ.ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಬದಲಾಗ್ತಿದೆಯಂತೆ. ಹೀಗಾಗಿ ಕೆಲವರು ನೊಂದಣಿಗೆ ಪರದಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:07 am, Sat, 17 February 24