AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜಿಗಳಿಗೆ ಬಿಗ್ ಶಾಕ್; ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ

ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳಿಗೆ ಬಿಗ್ ಶಾಕ್. ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಹಿನ್ನಲೆಯಲ್ಲಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಮೂಲಕ ಬಿಬಿಎಂಪಿ ಪರಿಶೀಲನೆ ನಿರ್ಧಾರಕ್ಕೆ ಮುಂದಾಗಿದೆ. ಅಷ್ಟಕ್ಕೂ ಬಿಬಿಎಂಪಿ ಹೊಸ ಗೈಡ್ ಲೈನ್ಸ್‌ ಮೂಲಕ ಪರಿಶೀಲನೆ ಮುಂದಾಗಿರೋದು ಯಾಕೆ ಅಂತೀರಾ ಆ ಕುರಿತ ವರದಿ ಇಲ್ಲಿದೆ ಓದಿ.

ಪಿಜಿಗಳಿಗೆ ಬಿಗ್ ಶಾಕ್; ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ
ಬಿಬಿಎಂಪಿ
Vinayak Hanamant Gurav
| Updated By: ಆಯೇಷಾ ಬಾನು|

Updated on: Nov 19, 2023 | 12:20 PM

Share

ಬೆಂಗಳೂರು, ನ.19: ಬೆಂಗಳೂರು ನಗರದ ಪಿಜಿಗಳಿಗೆ(PGs) ಬಿಗ್ ಶಾಕ್ ಕೊಡಲು ಬಿಬಿಎಂಪಿ (BBMP) ಮುಂದಾಗಿದೆ. ನಗರದಲ್ಲಿ ಪಿಜಿಗಳಿರುವ ಅಕ್ಕ- ಪಕ್ಕದವರಿಂದ ಪಾಲಿಕೆಗೆ ದೂರುಗಳು ಬರುತ್ತಿವೆ. ಹೀಗಾಗಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾಗಿದೆ. ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ‌ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ತಿಳಿಸಿದ್ದಾರೆ.

ಮಾನವಸಂಪನ್ಮೂಲಗಳಿಗೆ ಅನುಗುಣವಾಗುವಂತ ರೀತಿಯಲ್ಲಿ ಪಿಜಿಯನ್ನ ನಿರ್ವಾಹಿಸುತ್ತಿಲ್ಲ. ದುಡ್ಡಿನ ಆಸೆಗೆ ನಿಯಮ‌ ಮೀರಿ ಒಂದು ರೂಂನಲ್ಲಿ ಹೆಚ್ಚಿನ ಜನರನ್ನು ಹಾಕಲಾಗುತ್ತಿದೆ. ಮೂಲ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದು ಪಿಜಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಹೀಗೆ ಪಿಜಿಗಳಿರುವ ಏರಿಯಾಗಳಿಂದ ಸಾರ್ವಜನಿಕರಿಂದ ಸಾಕಷ್ಟು ಕಂಪ್ಲೇಂಟ್ ಬಂದಿವೆ. ಈ ನಿಟ್ಟಿನಲ್ಲಿ ಪಿಜಿಗಳಿಗೆ ಬಿಬಿಎಂಪಿಯಿಂದ ಹೊಸ ಗೈಡ್ ಲೈನ್ ರಿಲೀಸ್ ಮಾಡಲು ನಿರ್ಧಾರ ಕೈಗೊಂಡಿದ್ದು, ನಗರದಲ್ಲಿ ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಆ ಬಳಿಕ ಮಾರ್ಗಸೂಚಿ ಹೊರಡಿಸಲಾಗುವುದು ಅಂತ ಬಿಬಿಎಂಪಿ‌ ಆಯುಕ್ತ ತುಷಾರ್ ಗಿರಿನಾಥ್ ಹೇಳುತ್ತಿದ್ದಾರೆ.

ದನ್ನೂ ಓದಿ: ಬೀದಿ ಬದಿ ವ್ಯಾಪಾರಸ್ತರಿಗೆ ಶಾಕ್​​ ನೀಡಿದ ಬಿಬಿಎಂಪಿ ಅಧಿಕಾರಿಗಳು: ಬೆಂಗಳೂರಿನ ಹಲವೆಡೆ ಅಂಗಡಿ ತೆರವು

ಪಿಜಿಗಳು ಪರವಾನಗೆ ಪಡೆದು ಬೆಸ್ಕಾಂ ಹಾಗೂ ಜಲಮಂಡಳಿಯಿಂದ ವಾಣಿಜ್ಯವಾಗಿ ಪರಿವರ್ತನೆ ಮಾಡಿ ನಡೆಸಿಕೊಂಡು ಹೋಗುತ್ತಿದ್ದಾರೆ. ಪಿಜಿಗೆ ಬರುವಂತಹವರು ಹಣ ಕೊಟ್ಟು ಇರುತ್ತಾರೆ. ಬೇಡವಾದರೆ ಬೇರೆ ಕಡೆ ಹೋಗುತ್ತಾರೆ. ದುಡ್ಡು ಕೊಟ್ಟಂತವರು ಚೆನ್ನಾಗಿರದಿದ್ದರೆ ಬೇರೆ ಕಡೆ ಹೋಗುತ್ತಾರೆ ಹೀಗಿರುವಾಗ ಈ ಪ್ರಶ್ನೆ ಯಾಕೆ ಬಂತು ಅನ್ನೋದು ಗೊತ್ತಾಗುತ್ತಿಲ್ಲ. ಲಕ್ಷಾಂತರ ಜನರು ಪಿಜಿಯಲ್ಲಿ ಇದ್ದಾರೆ. ಪಿಜಿಯಲ್ಲಿರುವವರು ಖಾಸಗಿಯಾಗಿ ಮನೆ ಮಾಡಿಕೊಂಡು ಇರಬೇಕಾದರೆ ಕಷ್ಟ ಸಾಧ್ಯವಾಗುತ್ತಿತ್ತು ಸಾರ್ವಜನಿಕ ಸೇವೆ ಅನ್ನೋ ತರಹ ಕೆಲಸ ಮಾಡುತ್ತಿದ್ದೇವೆ. ಎಲ್ಲಿ ಕಂಪ್ಲೇಂಟ್ ಬಂದಿದೆ. ಬೆರಳೆಣಿಕೆಯಷ್ಟು ಇರಬಹುದು ಅವುಗಳಿಗೆ ಬೇಕಾದರೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿ. ಆದರೆ ಎಲ್ಲಾ ಪಿಜಿಗಳನ್ನ ಪರವಾನಗಿ ಪಡೆದು ಕಾನೂನು ಬದ್ಧವಾಗಿರುವ ಪಿಜಿಗಳ ಪರಿಶೀಲನೆ ಮಾಡುವುದು ಎಷ್ಟು ಸರಿ ಎಂದು ಪಿಜಿ ಮಾಲೀಕರ ಸಂಘ ಅಸಮಾಧಾನ ಹೊರ ಹಾಕಿದೆ.

ಒಟ್ಟಿನಲ್ಲಿ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಎಚ್ಚೆತ್ತುಕೊಂಡ ಬಿಬಿಎಂಪಿ ಪಿಜಿ ನಡೆಸಲು ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಸೇರಿದಂತೆ ಹೊಸ ಗೈಡ್ ಲೈನ್ಸ್ ಹೊರಡಿಸಲು ಮುಂದಾಗಿದ್ದು, ಇದು ತೆರಿಗೆ ಸಂಗ್ರಹದ ವೇಳೆ ಪಾಲಿಕೆಗೆ ಅನುಕೂಲವಾಗಲಿದೆ. ಆದರೆ ನಗರದ ಬಹುತೇಕ ಪಿಜಿಗಳು ವಾಣಿಜ್ಯ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿದೆ. ನಗರದ ಪಿಜಿಗಳ ಮಾಹಿತಿ ಕಲೆಹಾಕಿದ ಬಳಿಕ ಪಿಜಿಗಳಿಗೆ ಪ್ರತ್ಯೇಕ ನೀತಿ ಜಾರಿಯಾಗಲಿದ್ದು ಇದರಿಂದ ಪಾಲಿಕೆಗೆ ಅದಾಯವೂ ಹೆಚ್ಚಲಿದೆ.

ಬೆಂಗಳೂರಿಗೆ ಸೇರಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ