ಭಾರತದ ಗೆಲುವಿಗಾಗಿ ಶಿವಾಜಿನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರಿಂದ ವಿಶೇಷ ಪೂಜೆ

ಬೆಂಗಳೂರಿನ ಶಿವಾಜಿನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ವಿಡಿದು ಭಾವೈಕ್ಯತೆಯ ಹೂವಿನ ಅರ್ಚನೆ ಮಾಡಿದ್ದಾರೆ. ವಲ್ಡ್ ಕಪ್ ಮ್ಯಾಚ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲ್ಲಿ ಎಂದು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು, ಮಹಿಳೆಯರು, ಕ್ರೀಡಾ ಅಭಿಮಾನಿಗಳು ಸೇರಿದಂತೆ ಎಲ್ಲಾ ಧರ್ಮದ ಅಭಿಮಾನಿಗಳು ವಿಘ್ನ ವಿನಾಯಕನಿಗೆ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಭಾರತದ ಗೆಲುವಿಗಾಗಿ ಶಿವಾಜಿನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರಿಂದ ವಿಶೇಷ ಪೂಜೆ
ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರಿಂದ ವಿಶೇಷ ಪೂಜೆ
Follow us
| Edited By: Ayesha Banu

Updated on: Nov 19, 2023 | 2:06 PM

ಬೆಂಗಳೂರು, ನ.19: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿ (India vs Australia, WC Final) ಇಂದು ಮಧ್ಯಾಹ್ನ ಆರಂಭವಾಗಲಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ಪಂದ್ಯ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ಭಾರತ (India) ಗೆದ್ದು ಬರಲಿ ಎಂದು ಎಲ್ಲೆಡೆ ಪೂಜೆ, ಹೋಮಗಳು ನಡೆಯುತ್ತಿವೆ. ಇನ್ನು ವಿಶೇಷವೆಂದರೆ ಜಾತಿ, ಧರ್ಮವನ್ನು ಮೀರಿ ಭಾರತ ತಂಡದ ಗೆಲುವಿಗಾಗಿ ಎಲ್ಲಾರು ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಹೌದು ಬೆಂಗಳೂರಿನ ಶಿವಾಜಿನಗರದ ಗಣಪತಿ ದೇವಾಲಯದಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ನರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ವಿಡಿದು ಭಾವೈಕ್ಯತೆಯ ಹೂವಿನ ಅರ್ಚನೆ ಮಾಡಿದ್ದಾರೆ.

ವಲ್ಡ್ ಕಪ್ ಮ್ಯಾಚ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲ್ಲಿ ಎಂದು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು, ಮಹಿಳೆಯರು, ಕ್ರೀಡಾ ಅಭಿಮಾನಿಗಳು ಸೇರಿದಂತೆ ಎಲ್ಲಾ ಧರ್ಮದ ಅಭಿಮಾನಿಗಳು ವಿಘ್ನ ವಿನಾಯಕನಿಗೆ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಸ್ಲಿಂ ಮಹಿಳೆಯರು ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿದ್ದಾರೆ. ದೇವರ ಮುಂದೆ ಕ್ರಿಕೆಟ್ ಬ್ಯಾಟ್ ಬಾಲ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ವಿನಾಯಕನಿಗೆ ಸಿಹಿ ನೈವೇದ್ಯ ವಿಟ್ಟು, ಕುಂಬಳಕಾಯಿ, ತೆಂಗಿನಕಾಯಿ ಹೊಡೆದು ಆಟಗಾರರಿಗೆ ಶಕ್ತಿ ನೀಡಲಿ ಎಂದು ಕೋರಿದ್ದಾರೆ.

ಇನ್ನು ಇದರ ಜೊತೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೂಡ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ರು. ಭಾರತ ತಂಡದ ಆಟಗಾರರ ಭಾವಚಿತ್ರಕ್ಕೆ ಕುಂಬಳಕಾಯಿ, ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಭಕ್ತರಿಗೆ ಸಿಹಿ ಹಂಚಿ ಭಾರತ ತಂಡವು ಇಂದು ಮ್ಯಾಚ್ ಗೆಲ್ಲಬೇಕೆಂದು ಶುಭ ಹಾರೈಸಿದರು.

ಇದನ್ನೂ ಓದಿ: IND vs AUS Final: ಮಂಗಳೂರು ಕಲಾವಿದನ ಕೈಯಲ್ಲಿ ಮೂಡಿದ ಚಿನ್ನದ ವಿಶ್ವಕಪ್ ​​​

ಇಂಡಿಯಾ ಗೆಲುವಿಗಾಗಿ ಶುಭಕೋರಿದ ನವ ಜೋಡಿ

ಮತ್ತೊಂದೆಡೆ ಚಿಕ್ಕಮಗಳೂರು ನಗರದ ಅರಸು ಕಲ್ಯಾಣ ಮಂಟಪದಲ್ಲಿ ನವ ಜೋಡಿ ಇಂಡೋ ಆಸೀಸ್ ಹೈ ವೋಲ್ಟೇಜ್ ವರ್ಲ್ಡ್ ಕಪ್ ಮ್ಯಾಚ್​ಗೆ ಶುಭ ಹಾರೈಸಿದ್ದಾರೆ.  ಸಂತೋಷ , ಅರ್ಪಿತಾ ಮದುವೆ ಮಂಟಪದಲ್ಲಿ ನಿಂತು ಟೀಮ್ ಇಂಡಿಯಾಗೆ ಶುಭಕೋರಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ