Kannada News Photo gallery India vs Australia, ICC ODI World Cup Final: Mangalore gold smith made in world cup in gold
IND vs AUS Final: ಮಂಗಳೂರು ಕಲಾವಿದನ ಕೈಯಲ್ಲಿ ಮೂಡಿದ ಚಿನ್ನದ ವಿಶ್ವಕಪ್
India vs Australia, ICC ODI World Cup Final: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯ ಅವರು ಭಾರತ ಗೆಲುವಿಗಾಗಿ ಚಿನ್ನದಲ್ಲಿ ಮಿನಿ ವಿಶ್ವಕಪ್ ತಯಾರಿಸಿದ್ದಾರೆ.
ರವಿವಾರ (ನ.19) ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಕಿಯಾಗಲಿವೆ. ಭಾರತ 2003ರ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಭಾರತ ವಿಜಯಶಾಲಿಯಾಗಲೆಂದು ದೇಶಾದ್ಯಂತ ವಿಶೇಷ ಪೂಜೆ ಮತ್ತು ವಿಭಿನ್ನವಾಗಿ ಕ್ರೀಡಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
1 / 7
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯ ಅವರು ಭಾರತ ಗೆಲುವಿಗಾಗಿ ಚಿನ್ನದಲ್ಲಿ ಮಿನಿ ವಿಶ್ವಕಪ್ ತಯಾರಿಸಿದ್ದಾರೆ.
2 / 7
ಮೂಡಬಿದಿರೆ ದೊಡ್ಮನೆ ರಸ್ತೆ ವಠಾರದಲ್ಲಿ ಸ್ವರ್ಣ ಶಿಲ್ಪಿಯಾಗಿರುವ ಸತೀಶ ಆಚಾರ್ಯ ಅವರು 50 ಮಿಲಿಗ್ರಾಂ ತೂಕದ 24 ಕ್ಯಾರೆಟ್ ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ್ದಾರೆ.
3 / 7
ಚಿನ್ನದ ವಿಶ್ವಕಪ್ ಪ್ರತಿಕೃತಿ 916 ಹಾಲ್ ಮಾರ್ಕ್ನ 1.1 ಇಂಚು ಎತ್ತರವಿದೆ.
4 / 7
34ರ ಹರೆಯದ ಸತೀಶ ಆಚಾರ್ಯರು 24 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿದ್ದಾರೆ. ಸತೀಶ್ ಆಚಾರ್ಯ ಇದುವರೆಗೆ 4 ವಿಶ್ವಕಪ್ಗಳ ಮಿನಿ ಪ್ರತಿಕೃತಿ ತಯಾರಿಸಿದ್ದಾರೆ.
5 / 7
2007ರ ಟಿ20 ವರ್ಲ್ಡ್ ಕಪ್ ವೇಳೆ 1 ಗ್ರಾಂ, 200 ಮಿಲಿಗ್ರಾಂ ಚಿನ್ನ ಬಳಸಿ ವಿಶ್ವಕಪ್ ನಿರ್ಮಿಸಿದ್ದರು. 2011ರಲ್ಲಿ 3 ಗ್ರಾಂ ಬೆಳ್ಳಿಯಲ್ಲಿ 2 ಇಂಚು ಎತ್ತರದ ವಿಶ್ವಕಪ್ ರಚನೆ ಮಾಡಿದ್ದರು.
6 / 7
2013ರಲ್ಲಿ 500 ಮಿಲಿಗ್ರಾಂ ಚಿನ್ನದಲ್ಲಿ 1ಇಂಚು ಎತ್ತರದ ಚಾಂಪಿಯನ್ಶಿಪ್ ಟ್ರೋಫಿ ತಯಾರಿಸಿದ್ದು, ಇದೀಗ 10 ವರ್ಷಗಳ ಬಳಿಕ ಮಗದೊಮ್ಮೆ ಚಿನ್ನದ ಟ್ರೋಫಿ ತಯಾರಿಸಿದ್ದಾರೆ.