ರಾಯಚೂರಿನಲ್ಲಿ ಬಡ ಕಲಾವಿದನ ಕೈಚಳಕದಲ್ಲಿ ಅರಳಿದ ದೈವ! ಸಂತೂರ್ ಸೋಪ್,ಚಾಕ್ ಪೀಸ್​ನಲ್ಲಿ ದೇವರ ವಿಗ್ರಹಗಳ ವಿನ್ಯಾಸ!

ಸಾಮಾನ್ಯವಾಗಿ ಸೋಪ್​ನಿಂದ ಸ್ನಾನ ಮಾಡಬಹುದು ಅಲ್ವಾ, ಆದ್ರೆ, ಇಲ್ಲೊಬ್ಬ ಬಡ ಕಲಾವಿದ ಆ ಸೋಪಿನ ಮೂಲಕವೇ ಈಗ ಸೆಲಬ್ರೆಟಿಯಾಗಿದ್ದು, ಆತನ ಕಲೆಗೆ ಇಡೀ ಊರಿಗೆ ಊರೇ ಕೊಂಡಾಡುತ್ತಿದೆ. ಯಾರ ಆ ಕಲಾವಿದ, ಆತ ತಯಾರಿಸುವ ಆಕೃತಿಗಳು ಯಾವುದು ಅಂತೀರಾ? ಇಲ್ಲಿದೆ ನೋಡಿ.

| Edited By: Kiran Hanumant Madar

Updated on: Nov 19, 2023 | 4:36 PM

ಹೀಗೆ ವಿವಿಧ ದೇವರುಗಳ ಚಿತ್ರಣ, ಬಣ್ಣ ಬಣ್ಣದಲ್ಲಿ ತಲೆ ಎತ್ತಿರೋ ದೇವಾನುದೇವತೆಗಳ ಶಿಲ್ಪಗಳು ಎಂಥವರನ್ನ ಬೆರಗುಗೊಳಿಸ್ತವೆ. ಅಷ್ಟೇ ಅಲ್ಲ, ಈ ಚಾಕ್​ ಪೀಸ್​ನಲ್ಲೂ ಮೂಡಿದ ಕಲೆ. ಹೀಗೆ ವಿವಿಧ ವಸ್ತುಗಳಲ್ಲಿ ವಿವಿಧ ಬಗೆಯ ಶಿಲ್ಪಗಳನ್ನ ಕೆತ್ತನೇ ಮಾಡುತ್ತಿರುವುದು ಬಿಸಿಲುನಾಡು ರಾಯಚೂರಿನ ಬಡ ಯುವಕ.

1 / 7
ಹೌದು, ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹೋಬಳಿ, ಇಲ್ಲಿ ಯಾರೇ ಬಂದು ಆ ಬಡ ಕಲಾವಿದನ ಹೆಸರು ಹೇಳಿದರೆ ಆತನ ಇತಿಹಾಸವನ್ನೇ ಜನ ಹೇಳ್ತಾರೆ. ಅಷ್ಟರಮಟ್ಟಿಗೆ ಆ ಕಲಾವಿದ ಹೆಸರು ಮಾಡಿದ್ದಾರೆ. ಶ್ರೀಕೃಷ್ಣ, ಶಿವಾಜಿ ಮಹಾರಾಜ, ಆಂಜನೇಯ,  ನಂದಿಶ್ವರ ಹೀಗೆ ಹತ್ತು ಹಲವು ಮನಮೋಹಕ ಶಿಲ್ಪಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

2 / 7
ಈ ಶಿಲ್ಪಗಳು,ಕೆತ್ತನೆಯನ್ನು ನೋಡಿದರೆ, ನೋಡುಗರ ಮನಸ್ಸಿನಲ್ಲಿ ಭಕ್ತಿ ಎಂಬುದೂ ಉಕ್ಕಿ ಬರುತ್ತದೆ. ಇದಕ್ಕೆಲ್ಲ ವಿಶೇಷ ಅಂದ್ರೆ, ಈ ಎಲ್ಲಾ ಚಿತ್ರಗಳು ಅರಳಿರುವುದು ಮಾತ್ರ ನಾವೆಲ್ಲಾ ಯೂಸ್ ಮಾಡುವ ಸಂತೂರ್ ಸೋಪ್​ನಲ್ಲಿ.

3 / 7
 ಹೀಗೆ ಕೈಯಲ್ಲಿ ಸೋಪ್ ಹಿಡಿದು, ಗುಂಡು ಪಿನ್​ಗಳ ಮೂಲಕ ಕರಗತವಾದ ಕಲೆಯನ್ನು ಅಷ್ಟೇ ನಾಜೂಕಾದ ರೀತಿಯಲ್ಲಿ ಚಿತ್ರ ಬಿಡಿಸ್ತಿರುವ ಯುವಕನ ಹೆಸರು ವಿಜಯ ಕುಮಾರ್. ಈತ ಮೂಲತಃ ಇದೇ ರಾಯಚೂರು ಜಿಲ್ಲೆಯ ಲಿಂಗಸಗೂ ರು ತಾಲೂಕಿನ ಮಾಕಾಪೂರು ಗ್ರಾಮದ ನಿವಾಸಿ ಈ ಯುವಕನ‌ ಕೈಗೆ ಏನೇ ಸಿಕ್ಕರೂ ಅದಕ್ಕೆ ಒಂದು ರೂಪ ಕೊಡುವುದು ಈತನ ಹವ್ಯಾಸ.

4 / 7
ಅದರಂತೆ ಈತ 10ರೂಪಾಯಿ ಬೆಲೆಬಾಳುವ ಸೋಪ್ನಲ್ಲಿ ವಾಸುದೇವನ ಪುತ್ರ ಶ್ರೀ ಕೃಷ್ಣ, ಮರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜ್, ಶ್ರೀರಾಮ ಚಂದ್ರನ ಭಕ್ತ ಆಂಜನೇಯ ಚಿತ್ರವನ್ನ ಅಷ್ಟೇ ಸುಂದರವಾಗಿ ಕೆತ್ತಿದಿದ್ದಾನೆ. ಹೀಗೆ ಒಂದು ಶಿಲ್ಪವನ್ನ ಕೆತ್ತನೆ ಮಾಡಲು ಈ ಕಲಾವಿದ ತೆಗೆದುಕೊಳ್ಳೋದು ಬರೀ 3 ಗಂಟೆಗಳ ಸಮಯ. 

5 / 7
ಕಲಾವಿದ ವಿಜಯ ಕುಮಾರ್​ಗೆ, ಈ‌ ಕಲೆ ಎಂಬುದು ವಂಶಪಾರಂಪರ್ಯವಾಗಿ ಬಂದಿದೆ. ಆದರೆ, ಈವರೆಗೂ ವಿಜಯ ಕುಮಾರ್ ತನ್ನ ಚಿತ್ರಕಲೆಯನ್ನು ಎಲ್ಲೂ ಪ್ರದರ್ಶನ ಮಾಡಿಲ್ಲ. ಆದ್ರೆ, ಈತನ ಕಲೆ ಬಗ್ಗೆ ಸುತ್ತ ಹಳ್ಳಿಗಳೆಲ್ಲ ಕಡೆ ಜನರಿಗೆ ಗೊತ್ತಿದೆ. ಅವರ ಖುಷಿಗಾಗಿ ಕಲಾ ಕೃಷಿ ಮುಂದುವರಿದಿದೆ‌. ಇನ್ನೂ ಈತ ಚಾಕ್ ಪೀಸ್ ಕೊಟ್ಟರೆ ಅದರಲ್ಲೂ ನಂದಿಶ್ವರ ಸೇರಿದಂತೆ ಅನೇಕ ದೇವರ ಶಿಲ್ಪಗಳನ್ನ ಕೆತ್ತನೆ ಮಾಡಿದ್ದಾನೆ.

6 / 7
ಈ ವಿಜಯಕುಮಾರ್ ಕುಟುಂಬಕ್ಕೆ ಈತನೇ ಆಧಾರ. ಸಣ್ಣ ಪುಟ್ಟ ವಿಗ್ರಹಗಳನ್ನ ಮಾಡಿ, ಅವುಗಳನ್ನ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾನೆ. ಈ ವಿಜಯಕುಮಾರ್ ಕುಟುಂಬ, ಬಡತನದ ಮಧ್ಯೆಯೂ ಮಗನ ಸಾಧನೆ ಬಗ್ಗೆ ತಂದೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

7 / 7
Follow us
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ

‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು

ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ

ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ

‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ

‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ

ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್

ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ

ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ

ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್