ದೊಡ್ಡದೊಂದು ಬ್ರೇಕ್ನ ನಿರೀಕ್ಷೆಯಲ್ಲಿರುವ ನಟಿ ಅವ್ನೀತ್ಕೌರ್
ರಿಯಾಲಿಟಿ ಶೋನಿಂದ ಮನೊರಂಜನಾ ಕ್ಷೇತ್ರಕ್ಕೆ ಬಂದ ಅವನೀತ್ ಕೌರ್, ಸಿನಿಮಾ ನಟಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡದೊಂದು ಬ್ರೇಕ್ಗಾಗಿ ಕಾಯುತ್ತಿದ್ದಾರೆ.
Updated on: Nov 18, 2023 | 11:52 PM

ರಿಯಾಲಿಟಿ ಶೋನಿಂದ ಮನೊರಂಜನಾ ಕ್ಷೇತ್ರಕ್ಕೆ ಬಂದ ಅವನೀತ್ ಕೌರ್, ಸಿನಿಮಾ ನಟಿಯಾಗಿ ಮಿಂಚುತ್ತಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಬಳಿಕ ಅಲ್ಲಿಂದ ಟಿವಿ ಧಾರಾವಾಹಿಗಳಲ್ಲಿ ನಟಿಸಿದ ಅವ್ನೀತ್ ಕೌರ್ ಅನ್ನು ಸಿನಿಮಾ ಕ್ಷೇತ್ರ ತುಸು ತಡವಾಗಿ ಗುರುತಿಸಿತು.

2012 ರಲ್ಲಿ ರಿಯಾಲಿಟಿ ಶೋ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಅವ್ನೀತ್ ಕೌರ್, ಆ ಬಳಿಕ ಹಲವು ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

ಸಿನಿಮಾಗಳಲ್ಲಿ ಬಹಳ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ ಅವ್ನೀತ್, ಇತ್ತೀಚೆಗೆ ತುಸು ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಳ್ಳೆಯ ಡ್ಯಾನ್ಸರ್ ಆಗಿರುವ ಅವ್ನೀತ್ ಕೌರ್, ಐಟಂ ಹಾಡುಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಆಗಾಗ್ಗೆ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುವ ಅವ್ನೀತ್, ಸಿನಿಮಾ ಕ್ಷೇತ್ರದಲ್ಲಿ ದೊಡ್ಡದೊಂದು ಯಶಸ್ಸಿಗಾಗಿ ಕಾಯುತ್ತಿದ್ದಾರೆ.

ಅವ್ನೀತ್ ಕೌರ್ ಪ್ರಸ್ತುತ ‘ಲವ್ ಕಿ ಅರೇಂಜ್ ಮ್ಯಾರೇಜ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.



















