ಮೆಜೆಸ್ಟಿಕ್ ಅಂಡರ್ ಪಾಸ್​ನ ಬಳಿ ಗೋಡೆ ಕುಸಿತ ಪ್ರಕರಣ; ಬಿಬಿಎಂಪಿ ಮಾರ್ಷೆಲ್​ಗಳಿಂದ ಸ್ಥಳ ಪರಿಶೀಲನೆ

ಮೆಜೆಸ್ಟಿಕ್ ಅಂಡರ್ ಪಾಸ್​ನ ಬಳಿ ಗೋಡೆ ಕುಸಿತ ಪ್ರಕರಣ; ಬಿಬಿಎಂಪಿ ಮಾರ್ಷೆಲ್​ಗಳಿಂದ ಸ್ಥಳ ಪರಿಶೀಲನೆ
ಗೋಡೆ ಕುಸಿತ

ಇಂದು ಕೂಡ ಗೋಡೆ ಕುಸಿದಿದೆ. ಹೀಗಾಗಿ ಗೋಡೆಯ ಮೇಲೆ ಇರುವ ಮನೆಯ ನಿವಾಸಿಗಳು ಸದ್ಯ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಅಂಡರ್ ಪಾಸ್​ನ ಬಳಿ ಇರುವ ಗೋಡೆಯ ಪರಿಸ್ಥಿತಿ ಬಹುತೇಕ ಬೀಳುವ ಹಂತದಲ್ಲಿ ಇದೆ. ಹೀಗಾಗಿ ಈ ಸ್ಥಳ ಪರಿಶೀಲನೆಗೆ ಬಿಬಿಎಂಪಿ ಮಾರ್ಷೆಲ್​ಗಳು ಆಗಮಿಸಿದ್ದಾರೆ. ಮತ್ತೆ ಗೋಡೆ ನಿರ್ಮಾಣ ಮಾಡು ಸಾಧ್ಯತೆ ಇದೆ.

TV9kannada Web Team

| Edited By: preethi shettigar

Oct 25, 2021 | 3:22 PM

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಗೆ ಮೊನ್ನೆ (ಅಕ್ಟೋಬರ್ 23) ಮೆಜೆಸ್ಟಿಕ್ ಬಳಿ ಗೋಡೆ ಕುಸಿದಿದೆ. ಹೀಗಾಗಿ ಗೋಡೆಯ ಮೇಲೆ ಮಣ್ಣಿನ ಚೀಲಗಳನ್ನು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ನಿನ್ನೆ (ಅಕ್ಟೋಬರ್ 24) ಮತ್ತೆ ಮಳೆಯಾಗಿದ್ದು, ಗೋಡೆ ಕುಸಿದಿದೆ. ಪರಿಣಾಮ ಇಂದು ಕೂಡ ಗೋಡೆ ಕುಸಿದಿದೆ. ಹೀಗಾಗಿ ಗೋಡೆಯ ಮೇಲೆ ಇರುವ ಮನೆಯ ನಿವಾಸಿಗಳು ಸದ್ಯ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಅಂಡರ್ ಪಾಸ್​ನ ಬಳಿ ಇರುವ ಗೋಡೆಯ ಪರಿಸ್ಥಿತಿ ಬಹುತೇಕ ಬೀಳುವ ಹಂತದಲ್ಲಿ ಇದೆ. ಹೀಗಾಗಿ ಈ ಸ್ಥಳ ಪರಿಶೀಲನೆಗೆ ಬಿಬಿಎಂಪಿ ಮಾರ್ಷೆಲ್​ಗಳು ಆಗಮಿಸಿದ್ದಾರೆ. ಮತ್ತೆ ಗೋಡೆ ನಿರ್ಮಾಣ ಮಾಡು ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಭಾರಿ ಮಳೆಗೆ ಬೃಹತ್ ಗೋಡೆ ಕುಸಿತವಾದ ಪ್ರಕರಣ: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕಟ್ಟಡಗಳು ಕುಸಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಅದರಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆ ಮೆಜೆಸ್ಟಿಕ್ ಸಮೀಪ ಮುಖ್ಯ ರಸ್ತೆಯಲ್ಲಿ ಬೃಹತ್ ಗೋಡೆ ಕುಸಿದಿರುವ ಘಟನೆ ನಡೆದಿದೆ. ಶೇಷಾದ್ರಿಪುರಂನಿಂದ ಮೆಜೆಸ್ಟಿಕ್‌ಗೆ ತೆರಳುವ ಮುಖ್ಯ ರಸ್ತೆಯಲ್ಲಿ ಬೃಹತ್ ಗೋಡೆಯೊಂದು ಕುಸಿದಿದ್ದು ಆತಂಕ ಹೆಚ್ಚಾಗಿದೆ.

ಮಳೆಯಿಂದ ಮತ್ತಷ್ಟು ಗೋಡೆ ಕುಸಿದು ಬೀಳುವ ಆತಂಕವಿದ್ದು ಬೃಹತ್ ಗೋಡೆ ಮೇಲಿರುವ ಮನೆ ಕುಸಿದು ಬೀಳುವ ಆತಂಕವೂ ಇದೆ. ಗೋಡೆ ಕುಸಿದ ಸಮೀಪವೇ ರೈಲ್ವೆ ಮೇಲ್ಸೇತುವೆ ಸಹ ಇದೆ. ಇನ್ನು ಮನೆ ಕುಸಿಯುವ ಆತಂಕದಿಂದ ಮಹಿಳೆ ವಿಜಯಮ್ಮ ಕಣ್ಣೀರು ಹಾಕುತ್ತಿದ್ದಾರೆ. ಎರಡು ಬಾರಿ ಇದೇ ರೀತಿ ಘಟನೆ ನಡೆದಿದೆ. ಈ ಹಿಂದೆಯೂ ಮನೆಯ ಮೂಲೆ ಕುಸಿದಿತ್ತು. ಈಗಲೂ ಮತ್ತೊಮ್ಮೆ ಗೋಡೆ ಕುಸಿದಿದೆ. ಹೀಗಾಗಿ ಸದ್ಯ ಮನೆಯಿಂದ ಖಾಲಿ ಮಾಡಿಸಿ‌ ಅಧಿಕಾರಿಗಳು ತೆರಳಿದ್ದಾರೆ.

ಮನೆ‌ ಒಳಗೆ ಹೋಗದೆ‌ ಹೊರಗೆ ನಿಂತಿದ್ದೇವೆ. ನಮಗೆ ಯಾವುದೇ ಪರಿಹಾರದ ಭರವಸೆ ನೀಡಿಲ್ಲ. ಮನೆ ಹಿಂಭಾಗದ‌ ರೈಲ್ವೆ ಗೋಡೆ ಅರ್ಧ ಕುಸಿದಿದೆ. ಪೂರ್ಣವಾಗಿ ಬೀಳಿಸಿದರೆ ಅಪಾಯವಾಗುವುದಿಲ್ಲ. ಬಿಬಿಎಂಪಿ ಅಧಿಕಾರಿಗಳು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಮನೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಮತ್ತೊಂದೆಡೆ ಮನೆ ಕುಸಿಯುವ ಆತಂಕ ಹಿನ್ನೆಲೆ ಶಿಫ್ಟ್ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ನಿವಾಸಿಗಳು ಕೆಲಸಕ್ಕೆ ಹೋಗಿರುವ ಹಿನ್ನೆಲೆ ಬಿಬಿಎಂಪಿ ಸಿಬ್ಬಂದಿ ಮನೆಯವರನ್ನು ಸಂಪರ್ಕಿಸುತ್ತಿದೆ. ಸ್ಥಳಕ್ಕೆ ಬಿಬಿಎಂಪಿ ಇಂಜಿನಿಯರ್ ಮಾರ್ಕಂಡೇಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಮಿಲಿಟರಿ ಕಾಂಪೌಂಡ್ ಕುಸಿದು 10ಕ್ಕೂ ಹೆಚ್ಚು ವಾಹನ ಜಖಂ ಇನ್ನು ಮತ್ತೊಂದೆಡೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಮಿಲಿಟರಿ ಕಾಂಪೌಂಡ್ ಕುಸಿದು 10ಕ್ಕೂ ಹೆಚ್ಚು ವಾಹನ ಜಖಂಗೊಂಡಿದೆ. ಜಖಂ ಆಗಿರುವ ವಾಹನಗಳ ಮಾಲೀಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. MEG ಸೆಂಟರ್ ಗೆ ಸೇರಿರುವ ಮಿಲಿಟರಿ ಕಾಂಪೌಂಡ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಇದು ರೆಸಿಡೆನ್ಸಿಯಲ್ ಏರಿಯಾ ಆಗಿರುವುದರಿಂದ ಮಕ್ಕಳ ಓಡಾಟ ಜಾಸ್ತಿ ಇರುತ್ತೆ. ಹೀಗಾಗಿ ಸ್ಥಳೀಯರು ಮಾಧ್ಯಮಗಳ ಮೂಲಕ ನ್ಯಾಯ ಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಬಾರಿಯೂ ಮಹಿಳೆ ಮೇಲೆ ಗೋಡೆ ಬಿದ್ದಿದೆ. ಸದ್ಯ ಆ ಮಹಿಳೆ ಮನೆ ಖಾಲಿ ಮಾಡಿ ಬೇರೆ ಕಡೆಗೆ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ:

ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು

ಬೆಂಗಳೂರಿನಲ್ಲಿ ಭಾರಿ ಮಳೆಗೆ ಬೃಹತ್ ಗೋಡೆ ಕುಸಿತ; ಮನೆ ಕುಸಿಯುವ ಭೀತಿಯಿಂದ ಕಣ್ಣೀರಿಡುತ್ತಿರುವ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada