ಬೆಂಗಳೂರು, ಆಗಸ್ಟ್ 06: ದಿಢೀರನೆ ಅಡ್ಡ ಬಂದ ಪರಿಣಾಮ ನಾಯಿಯ (Dog) ಮೇಲೆ ದ್ವೀಚಕ್ರ ವಾಹನ ಹರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಾಯಿ ಮೇಲೆ ದ್ವೀಚಕ್ರ ವಾಹನ (Bike) ಹರಿದ ವಿಡಿಯೋ ಹಿಂದಿನ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ. ಆಗಸ್ಟ್ 4 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೆಲ್ಮೇಟ್ ಧರಿಸದೆ, ಬೈಕ್ನಲ್ಲಿ ಮೂವರು ಸಾಗುತ್ತಿದ್ದರು. ಈ ವೇಳೆ ನಾಯಿ ಓಡುತ್ತ ರಸ್ತೆ ಮೇಲೆ ದಿಢೀರನೆ ಬಂದಿದೆ. ಆಗ ಸವಾರ ವಾಹನವನ್ನು ಸ್ಲೋ ಮಾಡಿ ಮುಂದಿನ ಚಕ್ರ ನಾಯಿ ಮೇಲೆ ಹರಿಯದಂತೆ ತಪ್ಪಿಸಿದ್ದಾನೆ. ಆದರೆ, ಹಿಂದಿನ ಚಕ್ರ ನಾಯಿ ಮೇಲೆ ಹರಿದಿದೆ. ಇದರಿಂದ ನಾಯಿ ಕಾಲಿಗೆ ಪೆಟ್ಟಾಗಿದೆ. ಬಳಿಕ ವಾಹನ ಸವಾರ ಬೈಕ್ ನಿಲ್ಲಿಸಿ ನಾಯಿ ಬಳಿ ಬಂದು ಏನಾಗಿದೆ ಎಂದು ಗಮನಿಸಿದ್ದಾನೆ. ಸ್ಥಳೀಯರು ನಾಯಿ ಬಳಿ ಬಂದು ಅದನ್ನು ಸುರಕ್ಷಿತವಾಗಿ ರಸ್ತೆಬದಿಗೆ ಕರೆದೊಯ್ದರು.
Brutal #Accident on #Bengaluru roads,#Dog #Puppy came under wheels@blrcitytraffic @BlrCityPolice pic.twitter.com/PugXKeY7Tm
— NaNu Watching (@Namma_watching) August 4, 2024
ಈ ವಿಡಿಯೋವನ್ನು ನಾನು ವಾಚಿಂಗ್ ಎಂಬ ಎಕ್ಸ್ ಖಾತೆದಾರ ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಎಂದು ಬೆಂಗಳೂರು ನಗರ ಪೊಲೀಸ್ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್!
ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸರು ಸಂಬಂಧಪಟ್ಟ ಪ್ರದೇಶದ ಪೊಲೀಸರಿಗೆ ವಿಚಾರ ತಿಳಿಸಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿಲಾಗುವುದು ಎಂದು ತಿಳಿಸಿದರು.
ದ್ವೀಚಕ್ರ ವಾಹನದಲ್ಲಿ ಹೋಗುವಾಗ ನಿಧಾನ ಮತ್ತು ಹೆಲ್ಮೇಟ್ ಧರಿಸಿ ಸಂಚರಿಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸರು ಸೂಚನೆ ನೀಡುತ್ತಿದ್ದರೂ, ಸವಾರರು ಮಾತ್ರ ಪಾಲನೆ ಮಾಡುತ್ತಿಲ್ಲ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Tue, 6 August 24