Crime Updates: ಖತರ್ನಾಕ್ ಬೈಕ್ ಕಳ್ಳರ ಬಂಧನ; 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ

| Updated By: ganapathi bhat

Updated on: Feb 12, 2022 | 6:04 PM

ಆರೋಪಿ‌ ಸಲೀಂ ಬೈಕ್ ಕಳ್ಳತನ ಮಾಡಿದ್ರೆ, ಆರೋಪಿ ಬಸಪ್ಪ ಮೇಕೆದಾಟು-ತಮಿಳುನಾಡು ಭಾಗದಲ್ಲಿ ವಾಹನ ಸೇಲ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳಿಂದ 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ ಪಡೆಯಲಾಗಿದೆ.

Crime Updates: ಖತರ್ನಾಕ್ ಬೈಕ್ ಕಳ್ಳರ ಬಂಧನ; 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ
ಖತರ್ನಾಕ್ ಬೈಕ್ ಕಳ್ಳರ ಬಂಧನ
Follow us on

ಬೆಂಗಳೂರು: ಲಕ್ಸುರಿ ಲೈಫ್​​ಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಕೋಣನಕುಂಟೆ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಬಸಪ್ಪ, ಶ್ರೀನಿವಾಸ್, ಸಲೀಂ, ವಿಕ್ರಂ ಬಂಧಿತ ಆರೋಪಿಗಳು. ಬೈಕ್​ನ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ‌ ಸಲೀಂ ಬೈಕ್ ಕಳ್ಳತನ ಮಾಡಿದ್ರೆ, ಆರೋಪಿ ಬಸಪ್ಪ ಮೇಕೆದಾಟು-ತಮಿಳುನಾಡು ಭಾಗದಲ್ಲಿ ವಾಹನ ಸೇಲ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳಿಂದ 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪೋಲಿಸರಿಂದ ಕಿರುಕುಳ ಆರೋಪ ಹಿನ್ನಲೆ ಮನೆಗೆಲಸದಾಕೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯಶ್ವರ ರಾವ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಉಮಾ ಸೆಲ್ಪೀ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ತನ್ನ ಸಾವಿಗೆ ಮನೆಗೆಲಸ ಮಾಡ್ತಿದ್ದ ಮಾಲೀಕರ ಮೇಲೆ ಆರೋಪಿಸಿದ್ದಾರೆ. ಮನೆ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದೇವೆ. ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಶರಣಾಗಿರುವ ಆರೋಪ ಕುರಿತಂತೆ ತನಿಖೆ ಮಾಡಲಾಗುವುದು. ಆತ್ಮಹತ್ಯೆಗೂ ಮುನ್ನ ಮಾಡಿರುವ ಸೆಲ್ಪೀ ವಿಡಿಯೋ ಸಂಪೂರ್ಣವಾಗಿ ಪರಿಶೀಲನೆ ಮಾಡ್ತೇವೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ.

ಇತರ ಅಪರಾಧ, ಅಪಘಾತ ಸುದ್ದಿಗಳು

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಅಚ್ಚನಹಳ್ಳಿ ಬಳಿ 2,000 ಕಾಫಿ ಗಿಡ ಕಡಿದು ನಾಶ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ವಿರುದ್ಧ ಸುಭಾಷ್ ಸಂತೋಷ್ ಆರೋಪ ಮಾಡಿದ್ದಾರೆ. ಯಾವುದೇ ನೋಟಿಸ್ ನೀಡದೆ ಏಕಾಏಕಿ ಗಿಡ ನಾಶ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸುಭಾಷ್ ದೂರು ನೀಡಿದ್ದಾರೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರಸಭೆಗೆ ಸೇರಿದ ವಿವಾದಿತ ಜಾಗಕ್ಕಾಗಿ ಜಟಾಪಟಿ ನಡೆದಿದೆ. ಗೌರಿಬಿದನೂರಿನ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಜಾಗಕ್ಕಾಗಿ ಜಟಾಪಟಿ ನಡೆದಿದೆ. ವಿವಾದಿತ ಜಾಗದಲ್ಲಿ ರಾತ್ರೋರಾತ್ರಿ ಪ್ರತಿಮೆಗಳ ಪ್ರತಿಷ್ಠಾಪನೆ ಮಾಡಲಾಗಿದೆ.

ಬೆಳಗಾವಿ: ಹಿಂಡಲಗಾ ಕೆರೆಯಲ್ಲಿ ಸಹ್ಯಾದ್ರಿ ನಗರದ ತಾಯಿ ಕೃಷಾ(36), ಮಕ್ಕಳಾದ ಭಾವೀರ್(4), ವಿರೇನ್(7) ಶವ ಪತ್ತೆ ವಿಚಾರ; ಗಂಡ ಮನೀಷ್, ಕುಟುಂಬಸ್ಥರೇ ಕೊಂದು ಕೆರೆಗೆ ಹಾಕಿದ್ದಾರೆಂದು ಆರೋಪ; ಮಹಿಳೆಯ ಸಂಬಂಧಿಕರಿಂದ ಆರೋಪ

ರಾಯಚೂರು: ಮಸ್ಕಿ ತಾಲೂಕಿನ ಪಾಮನಕೆಲ್ಲೂರು ಬಳಿ ಬೈಕ್ ಸ್ಕಿಡ್‌ ಆಗಿ ಕೆಳಕ್ಕೆ ಬಿದ್ದು ನರಳಾಡುತ್ತಿದ್ದ ವ್ಯಕ್ತಿಗೆ ಅದೇ ಮಾರ್ಗವಾಗಿ ಬಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಸಹಾಯ ಮಾಡಿದ ಘಟನೆ ನಡೆದಿದೆ. ಶಾಸಕ ಪ್ರತಾಪಗೌಡ ಪಾಟೀಲ್‌ ಗಾಯಾಳು ಸವಾರನಿಗೆ ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳ್ಳಾರಿ: ಕೌಲ್‌ಬಜಾರ್ ರೈಲ್ವೆ ಗೇಟ್ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಟಾಫ್ ನರ್ಸ್ ತಿಮ್ಮಣ್ಣ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಸಂಬಂಧ ಬಳ್ಳಾರಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಪೊಲೀಸರಿಂದ ಕಿರುಕುಳ ಆರೋಪ; ಸೆಲ್ಫಿ ವಿಡಿಯೋ ಮಾಡಿಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು

ಇದನ್ನೂ ಓದಿ: Crime Updates: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ, ಪ್ರೇಮಿ ಜೊತೆ ಸೇರಿ ಗಂಡನ ಕೊಲೆ