AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ವಿದ್ಯಾರ್ಥಿಗಳ ಕಾಲೇಜು ಬ್ಯಾಗ್​ನಲ್ಲಿ ಗಾಂಜಾ ಪತ್ತೆ, ವಿದ್ಯಾರ್ಥಿಗಳನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಬೆಂಗಳೂರಿನ ಬ್ಯಾಡರಹಳ್ಳಿಯ ಲೇಔಟ್ಯೊಂದರಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ಗಾಂಜಾ ಪತ್ತೆಯಾಕ್ತಿದ್ದಂತೆ ಹುಡುಗರನ್ನ ಲಾಕ್ ಮಾಡಿ ಸ್ಥಳೀಯರು ವಿಡಿಯೋ ಮಾಡಿದ್ದಾರೆ.

ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ವಿದ್ಯಾರ್ಥಿಗಳ ಕಾಲೇಜು ಬ್ಯಾಗ್​ನಲ್ಲಿ ಗಾಂಜಾ ಪತ್ತೆ, ವಿದ್ಯಾರ್ಥಿಗಳನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ವಿದ್ಯಾರ್ಥಿಗಳ ಕಾಲೇಜು ಬ್ಯಾಗ್ನಲ್ಲಿ ಗಾಂಜಾ ಪತ್ತೆ
TV9 Web
| Edited By: |

Updated on:Feb 13, 2022 | 9:01 AM

Share

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ(College Students) ಬಳಿ ಗಾಂಜಾ(Drugs) ಪತ್ತೆಯಾಗಿದ್ದು ಸ್ಥಳೀಯರು ವಿದ್ಯಾರ್ಥಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿಗಳಿಂದ ಬೈಕ್ ಅಡ್ಡಾದಿಡ್ಡಿ ಚಾಲನೆ ಹಿನ್ನೆಲೆ ಅನುಮಾನ ಬಂದು ವಿದ್ಯಾರ್ಥಿಗಳನ್ನು ಹಿಡಿದು ಸ್ಥಳೀಯರು ವಿಚಾರಿಸಿದಾಗ ಬ್ಯಾಗ್ನಲ್ಲಿ ಗಾಂಜಾ ಪತ್ತೆಯಾಗಿದೆ.

ಬೆಂಗಳೂರಿನ ಬ್ಯಾಡರಹಳ್ಳಿಯ ಲೇಔಟ್ಯೊಂದರಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ಗಾಂಜಾ ಪತ್ತೆಯಾಕ್ತಿದ್ದಂತೆ ಹುಡುಗರನ್ನ ಲಾಕ್ ಮಾಡಿ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡ್ತಿದ್ದಾಗಿ ಆರೋಪಿಸಿದ್ದಾರೆ. ಬೈಕ್ನಲ್ಲಿದ್ದ ಕಾಲೇಜು ಬ್ಯಾಗ್ ಒಳಗೆ ಗಾಂಜಾ ಸಾಗಿಸ್ತಿದ್ದ ವಿದ್ಯಾರ್ಥಿಗಳು ಸಿಕ್ಕಿಬಿದಿದ್ದಾರೆ. ಮೊದಲಿಗೆ ವಿದ್ಯಾರ್ಥಿಗಳು ಬೈಕ್ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ಹಿಡಿದು ವಿಚಾರಿಸಿದ್ದಾರೆ. ಕಾಲೇಜು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ 1 ಕೆಜಿ ಗಾಂಜಾ ಪತ್ತೆಯಾಗಿದೆ.

ಬಳಿಕ ಕೂಡಲೇ ಇಬ್ಬರನ್ನೂ ಹಿಡಿದು ವಿದ್ಯಾರ್ಥಿಗಳು ವಾಸವಾಗಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಾಡಿಗೆ ಮನೆಯಲ್ಲಿ ಪೌಡರ್ ರೂಪದ ಮಾದಕವಸ್ತು ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಬ್ಯಾಡರಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ.

ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ 14ಜನರ ಬಂಧನ ಬೆಂಗಳೂರು: ಕಣ್ವ ಲೇಔಟ್‌ನ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು 14 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸಂತೋಷ್, ಗಿಯಾಸುದ್ದೀನ್, ಹರೀಶ್ ಸೇರಿದಂತೆ 14 ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 2 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ತೆಲುಗು ಚಿತ್ರರಂಗದ ಡ್ರಗ್ಸ್​ ಕೇಸ್​ಗೆ ಸಿಕ್ತು ಟ್ವಿಸ್ಟ್​; ಸ್ಟಾರ್ ನಟ-ನಟಿಯರಿಗೆ ಮತ್ತೆ ಸಂಕಷ್ಟ ಶುರು

Published On - 8:54 am, Sun, 13 February 22