Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಕು, ಬೇಡವೆಂದಾಗ ಬೈಕಿನ ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು: ವಿಡಿಯೋ ಇಲ್ಲಿದೆ

ನಗರದ ಇಬ್ಬರು ಯುವಕರು ತಮ್ಮ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​​ನ್ನು ವಾಹನದ ಒಳಗಡೆಯೇ ಮರೆಮಾಚುವ ರೀತಿ ವಿನ್ಯಾಸಗೊಳಿಸಿದ್ದಾರೆ.

ಬೇಕು, ಬೇಡವೆಂದಾಗ ಬೈಕಿನ ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು: ವಿಡಿಯೋ ಇಲ್ಲಿದೆ
ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 30, 2022 | 10:26 PM

ಬೆಂಗಳೂರು: ವಾಹನಗಳಿಗೆ ನಂಬರ್​ ಪ್ಲೇಟ್​ ಬಹಳ ಮುಖ್ಯ. ಒಂದು ಸಾರಿ ವಾಹನಕ್ಕೆ ನಂಬರ್ ಪ್ಲೇಟ್​​ ಅಳವಡಿಸಿದರೆ ಅದನ್ನು ತಮಗೆ ಬೇಡವಾದಾಗ ತೆಗೆಯುವುದು, ಬೇಕಾದಾಗ ಅಳವಡಿಸಲು ಸಾಧ್ಯವಿಲ್ಲ. ಆದರೆ ಇಲ್ಲಿ ಖತರ್ನಾಕ್​ ಖದೀಮರು ದ್ವಿಚಕ್ರ ವಾಹನಗಳ (Two Wheeler) ನಂಬರ್ ಪ್ಲೇಟ್​ನ್ನು (Number Plate) ತಮಗೆ ಬೇಕಾದಾಗ ಅಳವಡಿಸುವುದು, ಬೇಡವಾದಾಗ ತೆಗೆಯುತ್ತಾರೆ. ಅದು ಹೇಗೆ ಗೊತ್ತಾ ಈ ಸ್ಟೋರಿ ಓದಿ. ಬೆಂಗಳೂರಿನ (Bengaluru) ಇಬ್ಬರು ಯುವಕರು ತಮ್ಮ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​​ನ್ನು ವಾಹನದ ಒಳಗಡೆಯೇ ಮಡಚಿ ಇಡುವ ರೀತಿ ವಿನ್ಯಾಸಗೊಳಿಸಿದ್ದಾರೆ.

ಇದನ್ನೂ ಓದಿ: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ

ಈ ರೀತಾಯದ ವಿಡಿಯೋವೊಂದನ್ನು ಬೆಂಗಳೂರು ಪಶ್ಚಿಮ ಸಂಚಾರಿ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್, ಟ್ವೀಟ್​ ಮಾಡಿದ್ದಾರೆ ವಿಡಿಯೋದಲ್ಲಿ ಆರೋಪಿಗಳು ನಂಬರ್ ಪ್ಲೇಟ್​ನ್ನು ಮರೆಮಾಚುವುದನ್ನು ನೋಡಬಹುದಾಗಿದೆ. ಇದಕ್ಕೆ ಕಾರಣ ಟ್ರಾಫಿಕ್​​ ರೂಲ್ಸ್​ ಬ್ರೆಕ್​ ಮಾಡಿದಾಗ ಆನ್‌ಲೈನ್ ಮೂಲಕ ಆಟೊಮೆಟಿಕ್​ ಆಗಿ ದಂಡ ಬೀಳುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ. ಈ ರೀತಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಆರೋಪಿಗಳು ಕೊನೆಗೂ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಮಂಡ್ಯದವರನ್ನು ಮೋಸ ಮಾಡಲು ಆಗಲ್ಲ ಅಮಿತ್ ಶಾ ಜೀ, ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು? ಹೆಚ್​​ಡಿಕೆ ವಾಗ್ದಾಳಿ

ಪೊಲೀಸರು ಚಿತ್ರೀಕರಿಸಿದ ವೀಡಿಯೊದಲ್ಲಿ, ಆರೋಪಿಗಳು ಪೊಲೀಸ್ ಕ್ಯಾಮೆರಾಗಳಿಂದ ನಂಬರ್ ಪ್ಲೇಟ್‌ಗಳನ್ನು ಮರೆಮಾಡುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ವಿವರಿಸುತ್ತಿರುವುದು ನೋಡಬಹುದು. ಆರೋಪಿಗಳು ಈ ರೀತಿ ಮಾಡುವ ಬದಲು ಟ್ರಾಫಿಕ್‌ರೂಲ್ಸ್​ಗಳನ್ನು ಅನುಸರಿಸಬಹುದು ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು. ಪ್ರತಿಯೊಬ್ಬರ ಸುರಕ್ಷತೆಗಾಗಿ ದಯವಿಟ್ಟು ಸಂಚಾರಿ ನಿಯಮವನ್ನು ಅನುಸರಿಸಬೇಕೆಂದು ಬೆಂಗಳೂರು ಪಶ್ಚಿಮ ಸಂಚಾರಿ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಟ್ವೀಟ್​​ರನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:25 pm, Fri, 30 December 22

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!