ಬೆಂಗಳೂರು: ಸಿಬ್ಬಂದಿಯಿಂದಲೇ (Employees) ಬೆಂಗಳೂರು ಜಲಮಂಡಳಿ (Bangalore Water Supply and Sewerage Board- BWSSB) ವಾಟರ್ ಬಿಲ್ಗೆ ಕನ್ನ ಹಾಕಿರುವ ಪ್ರಸಂಗ ನಡೆದಿದೆ. ಗ್ರಾಹಕರು ಪಾವತಿಸಿದ್ದ ಹಣವನ್ನು ಜಲಮಂಡಳಿಗೆ ನೀಡದೆ ವಂಚನೆ ಎಸಗಿರುವ ಪ್ರಕರಣ ಇದಾಗಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ (Arrest). ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ.
ಜಸ್ಟ್ ಒಂದೂವರೆ ಕೋಟಿ ರೂ ವಂಚನೆ:
ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ:
ಒಂದೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ಆರೋಪಿಗಳು ವಂಚನೆ ನಡೆಸಿದ್ದಾರೆ. 850ಕ್ಕೂ ಅಧಿಕ ಗ್ರಾಹಕರಿಂದ ಬಿಲ್ ಪಡೆದು ಸರ್ಕಾರಕ್ಕೆ ಕಟ್ಟದೇ ವಂಚನೆ ಎಸಗಲಾಗಿದೆ. ಈ ಬಗ್ಗೆ ಕೋಡಿಚಿಕ್ಕನಹಳ್ಳಿ ಉಪವಿಭಾಗದ ಎಇಇ ದೂರು ನೀಡಿದ್ದು, ಬೊಮ್ಮನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಕಂಪ್ಯೂಟರ್ ಸಿಸ್ಟಂನಲ್ಲಿ ಡೇಟಾ ಬದಲಾಯಿಸಿ ವಂಚಸಿರುವುದು ಪತ್ತೆಯಾಗಿದೆ. ಗ್ರಾಹಕರ ಬಳಿ ಬೇರೆ ಬೇರೆ ಮಾದರಿಯಲ್ಲಿ ನೀರಿನ ಬಿಲ್ ಸಂಗ್ರಹವಾಗಿದೆ. ಗ್ರಾಹಕರಿಂದ ಕ್ಯಾಷ್ ಹಾಗೂ ಯುಪಿಐ ಐಡಿ ಮೂಲಕ ಹಣ ಪಡೆದಿದ್ದ ಕಾಂಟ್ರ್ಯಾಕ್ಟ್ ಬೇಸ್ ನ ಮೀಟರ್ ರೀಡರ್ಸ್, ಬಳಿಕ ಜಲಮಂಡಳಿ ಆಪ್ ದುರ್ಬಳಕೆ ಮಾಡಿಕೊಂಡು ಗ್ರಾಹಕರು ಪಾವತಿಸಿದ ಹಣಕ್ಕೆ ಕನ್ನಹಾಕಿದ್ದಾರೆ.
ಇದನ್ನೂ ಓದಿ:
ನಕಲಿ ದಾಖಲೆ ಸೃಷ್ಟಿಸಿ ಜಲಮಂಡಳಿ ಬ್ಯಾಂಕ್ ಖಾತೆಗೆ ಹಣ ಪಾವತಿಸಿದ ಬಗ್ಗೆ ರಶೀದಿಗಳನ್ನು ಸೃಷ್ಟಿಸಿದ್ದಾರೆ. ವಂಚಕ ಅಧಿಕಾರಿ ಹಾಗೂ ಸಿಬ್ಬಂದಿ ನಕಲಿ ಬಿಲ್, ಪೇಮೆಂಟ್ ಸ್ಲಿಪ್ ಗಳನ್ನ ಸೃಷ್ಟಿಸಿ ಹಣ ಜೇಬಿಗೆ ಹಾಕಿಕೊಳ್ತಿದ್ದರು. ಹಗರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ.
Published On - 10:15 am, Wed, 28 December 22