ಬಿಟ್ ಕಾಯಿನ್ ಹಗರಣ: ಸಾರ್ವಜನಿಕರಿಂದ ಮಾಹಿತಿ ಕೋರಿದ ಸಿಐಡಿ, ಎಸ್ಐಟಿ, ಇಲ್ಲಿದೆ ವಾಟ್ಸಪ್-ಇಮೇಲ್ ಐಡಿ
ಕ್ರಿಪ್ಟೋಕರೆನ್ಸಿ ಹಗರಣವು ಈ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಎಸ್ಐಟಿ, ಈಗಾಗಲೇ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಆದರೆ, ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕಿರುವುದರಿಂದ ಸಾರ್ವಜನಿಕರಿಂದ ಮಾಹಿತಿ ಪಡೆಯಲು ನಿರ್ಧರಿಸಿದೆ. ಈ ಹಿನ್ನಲೆ ಇಲ್ಲಿ ನೀಡಿದ ವಾಟ್ಸಪ್-ಇಮೇಲ್ ಐಡಿ ಮುಖಾಂತರ ಮಾಹಿತಿ ನೀಡಬಹುದಾಗಿದೆ.
ಬೆಂಗಳೂರು, ಡಿ.20: ಬಿಟ್ ಕಾಯಿನ್(Bit Coin) ಹಗರಣಕ್ಕೆ ಸಂಬಂಧಪಟ್ಟಂತೆ ಸಿಐಡಿ(CID)ಹಾಗೂ ಎಸ್ಐಟಿ(SIT) ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಕೋರಿದ್ದಾರೆ. 2020-2021ರಲ್ಲಿ ಬಹು ವಿನಿಮಯ ಮತ್ತು ಗೇಮಿಂಗ್ ಪೋರ್ಟಲ್‌ಗಳ ಹ್ಯಾಕ್ ಹಾಗೂ ಕ್ರಿಪ್ಟೋಕರೆನ್ಸಿಗಳ ಹಗರಣದ ತಾಂತ್ರಿಕ ಮತ್ತು ಸಾಕ್ಷ್ಯಚಿತ್ರಗಳೆರಡರಲ್ಲೂ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿರುವ ಸಿಐಡಿ, ಎಸ್ಐಟಿ. ಹೆಚ್ಚಿನ ತನಿಖೆಯ ಅಗತ್ಯ ಹಿನ್ನಲೆ ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಎಸ್ಐಟಿ ಮನವಿ ಮಾಡಿದೆ.
ಮಾಹಿತಿ ಹೇಗೆ ನೀಡುವುದು?
ಕ್ರಿಪ್ಟೋಕರೆನ್ಸಿ ಹಗರಣವು ಈ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಎಸ್ಐಟಿ, ಈಗಾಗಲೇ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಆದರೆ, ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕಿರುವುದರಿಂದ ಸಾರ್ವಜನಿಕರಿಂದ ಮಾಹಿತಿ ಪಡೆಯಲು ನಿರ್ಧರಿಸಿದೆ. ಇನ್ನು ಮಾಹಿತಿ ನೀಡಲು ಸಂರ್ಪಕಿಸಬಹುದು ವಿಳಾಸ, ಕಾರ್ಲ್ಟನ್ ಹೌಸ್, ಅರಮನೆ ರಸ್ತೆಯಲ್ಲಿರುವ CID HQ ಅನ್ನು ಸಂಪರ್ಕಿಸಬಹುದು ಅಥವಾ sitcid2023@ksp.gov.in ಗೆ ಇಮೇಲ್ ಮಾಡಬಹುದು ಅಥವಾ 9480800151 ಗೆ WhatsApp ನಲ್ಲಿ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕು: ಪ್ರಮುಖ ಮೂರು ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದರು. ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ SIT ತಂಡ ರಚಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕಿರುವುದರಿಂದ ಸಾರ್ವಜನಿಕರಿಂದ ಮಾಹಿತಿ ಪಡೆಯಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Wed, 20 December 23