ಸರ್ಕಾರಿ ಬಂಗ್ಲೆ ಇರಲಿಲ್ಲ, ಅದಕ್ಕೇ ರೆಸ್ಟ್ ಮಾಡಲು ತಾಜ್ ಹೋಟೆಲ್​ಗೆ ಹೋಗ್ತಿದ್ದೆ, ನನ್ನದು ತೆರೆದ ಪುಸ್ತಕ -ಕುಮಾರಸ್ವಾಮಿ ತಿರುಗೇಟು

| Updated By: ಸಾಧು ಶ್ರೀನಾಥ್​

Updated on: Mar 14, 2022 | 4:09 PM

HD KUmaraswamy: ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ನಾನು ರಾಜಕೀಯಕ್ಕೆ ಬಂದಾಗ ಇವನು ಚಡ್ಡಿ ಹಾಕಿದ್ನೋ ಇಲ್ವೋ , ಆದರೆ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಅಗಿನಿಂದಲೂ ಇದೆ. ಬರಲಿ ಯಾವ ವಿಚಾರ ಚರ್ಚೆ ಮಾಡ್ತಾರೋ ನೋಡೋನಾ ಎಂದು ಹೆಚ್​ ಡಿ ಕುಮಾರಸ್ವಾಮಿ ಗರಂ ಆದರು

ಸರ್ಕಾರಿ ಬಂಗ್ಲೆ ಇರಲಿಲ್ಲ, ಅದಕ್ಕೇ ರೆಸ್ಟ್ ಮಾಡಲು ತಾಜ್ ಹೋಟೆಲ್​ಗೆ ಹೋಗ್ತಿದ್ದೆ, ನನ್ನದು ತೆರೆದ ಪುಸ್ತಕ -ಕುಮಾರಸ್ವಾಮಿ ತಿರುಗೇಟು
ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ತಾಜ್ ವೆಸ್ಟ್ ಹೋಟೆಲ್​ಗೆ ಹೋಗ್ತಿದ್ದೆ, ನನ್ನದು ತೆರೆದ ಪುಸ್ತಕ -ಯೋಗೇಶ್ವರ್​ಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
Follow us on

ಬೆಂಗಳೂರು: ಹೆಚ್​ ಡಿ ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ ಎಂದು ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ಮಾಜಿ ಸಚಿವ ಸಿ.ಪಿ‌.ಯೋಗೇಶ್ವರ್ ಗಂಭೀರ ಆರೋಪ ಮಾಡುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಯೋಗೇಶ್ವರ್​ಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಯೋಗೇಶ್ವರ್ ವಿರುದ್ಧ ಕಿಡಿಕಾರಿರುವ ಹೆಚ್.ಡಿ.ಕುಮಾರಸ್ವಾಮಿ ತಾಜ್ ವೆಸ್ಟೆಂಡ್‌ನಲ್ಲಿ ರಾಸಲೀಲೆ ಮಾಡಲು ಹೋಗ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ಹೋಗ್ತಿದ್ದೆ. ಈಗಲೂ ತಾಜ್ ವೆಸ್ಟ್ ಹೋಟೆಲಿಗೆ ಹೋಗ್ತೀನಿ. ನನ್ನದು ತೆರೆದ ಪುಸ್ತಕ. ನನ್ನ ಪಿಎ ಈಗಲೂ ಇರ್ತಾರೆ. ಸಾ.ರಾ ಮಹೇಶ್ ಇರ್ತಿದ್ರು ಎಂದು ಹೇಳಿದ್ದಾರೆ.

ಇವನತ್ರ (ಸಿ.ಪಿ‌.ಯೋಗೇಶ್ವರ್) ನೋಡಿ ಕಲಿಯಬೇಕಿತ್ತಾ? ಇವನು ಗುಡಿಸಲಲ್ಲಿ ಇದ್ದನಾ? ಇಲ್ಲೆ ಯು.ಬಿ. ಸಿಟಿ ಪಕ್ಕದಲ್ಲಿ ಇದ್ನಲ್ಲ. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ ಎಂದು ಟಾಂಗ್ ಕೊಟ್ಟಿರುವ ಹೆಚ್​​ಡಿಕೆ, ಚನ್ನಪಟ್ಟಣದಲ್ಲಿ ಕೆಲಸವೇ ಅಗಿಲ್ಲ ಅಂತಾರೆ. ಚನ್ನಪಟ್ಟಣಕ್ಕೆ ಬರಲಿ. ಬಸ್ ಸ್ಟಾಂಡ್ ನಂದಾ ಕರ್ಮಕಾಂಡ? ಖಾಸಗಿ ಬಸ್ ನಿಲ್ದಾಣಕ್ಕೆ 30 ಕೋಟಿ ರೂಪಾಯಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದ್ರು. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾನೆ. ಬಸ್ ನಿಲ್ದಾಣದಲ್ಲಿ ಮಣ್ಣು ತೆಗೆದಿದ್ದಕ್ಕೆ 4 ಕೋಟಿ ರೂ. ಬಿಲ್ ಆಗಿದೆ. ಅದಕ್ಕೆ ನಾನು ಹಣ ಕೊಡಿಸಬೇಕಾ? ಅಲ್ಲಿ ಹೋಗಿ ನೋಡಿ ತಗಡು ಹೊಡೆಸಿ ಇಟ್ಟಿದ್ದಾನೆ. ಅಂಬೇಡ್ಕರ್ ಭವನ ಗುಂಡಿ ಆಗಿದೆ, ನೀರು ನಿಂತಿದೆ. ಅದನ್ನ ನಾನು ಹೋಗಿ ಕ್ಲೀನ್ ಮಾಡಿಸಬೇಕು ಎಂದು ಕಿಡಿಕಾರಿದರು.

ನಾನು ಕಣ್ಣೀರು ಹಾಕ್ಕೊಂಡ್ ಹೋಗಿಲ್ಲ. ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಅಲ್ಲ, ಇಡೀ ರಾಜ್ಯಕ್ಕೆ ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ, ಆರಿಸರೋ ಜನರು ಕೊಡ್ತಾರೆ. ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ. ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ. ಇವನು ನನ್ನ ವಿರುದ್ಧ ಆರೋಪ ಮಾಡ್ತಾನಾ? ಎಂದು ಹೆಚ್​ ಡಿ ಕುಮಾರಸ್ವಾಮಿ ಗರಂ ಆದರು.

ಇನ್ನು ಬಹಿರಂಗ ಚರ್ಚೆಗೆ ಸಿ.ಪಿ‌.ಯೋಗೇಶ್ವರ್ ಸವಾಲು ಹಾಕಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ದಲಿತರ ಜಮೀನು ಹೊಡೆದಿದ್ದೇನಂತೆ. ಮೆಗಾಸಿಟಿ ಮಾಡಿ ಲೂಟಿ ಹೊಡೆದು ಜನ ಬೀದಿ ಪಾಲಾಗಿದ್ದಾರೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ! ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಇವನು ಚಡ್ಡಿ ಹಾಕಿದ್ನೋ ಇಲ್ವೋ , ಆದರೆ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಅಗಿನಿಂದಲೂ ಇದೆ. ಓಪನ್ ಚರ್ಚೆಗೆ ನಾನು ಸಿದ್ದ, ಬರಲಿ ಯಾವ ವಿಚಾರ ಚರ್ಚೆ ಮಾಡ್ತಾರೋ ನೋಡೋನಾ ಎಂದು ಹೇಳಿದರು.

Also Read:
ಚಾಮರಾಜನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕೆಎಸ್ಆರ್ಟಿಸಿ, ಚಾಲಕ ಸಾವು, ಐವರಿಗೆ ಗಾಯ

Also Read:
ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್

Published On - 4:02 pm, Mon, 14 March 22