ಶುಲ್ಕ ಪಾವತಿಸಿಲ್ಲ ಎಂದು ಪರೀಕ್ಷೆ ಬರೆಯಲು ಅನುಮತಿ ಇಲ್ಲ; ಖಾಸಗಿ ಶಾಲೆಗಳ ಮಕ್ಕಳಿಗೆ ತಪ್ಪದ ಸಂಕಷ್ಟ
ಶುಲ್ಕ ಕಟ್ಟದ ಮಕ್ಕಳನ್ನು ಕೆಲವು ಶಾಲೆಗಳಲ್ಲಿ ಹೊರಗೆ ನಿಲ್ಲಿಸಲಾಗಿದೆ. ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನ ಹೊರಗೆ ಕೂರಿಸಿದ ಆರೋಪ ಖಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದೆ. ಪರೀಕ್ಷೆ ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳಿಂದ ಶುಲ್ಕ ಸುಲಿಗೆ ಎಂಬ ಬಗ್ಗೆ ಆರೋಪ ವ್ಯಕ್ತವಾಗಿದೆ.

ಬೆಂಗಳೂರು: ಪರೀಕ್ಷೆಗಳು ಶುರುವಾಗ್ತಿದ್ದಂತೆ ಖಾಸಗಿ ಶಾಲೆಗಳಿಂದ ಸುಲಿಗೆಯ ಆರ್ಭಟ ಜೋರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಎಕ್ಸಾಂ ಬೇಕು, ಹಾಲ್ ಟಿಕೆಟ್ ಬೇಕು ಅಂದ್ರೆ ಕಂಪ್ಲೀಟ್ ಫೀಸ್ ಕಟ್ಟುವಂತೆ ಮಕ್ಕಳಿಗೆ ಖಾಸಗಿ ಶಾಲೆಗಳು ಒತ್ತಡ ಹಾಕುತ್ತಿವೆ. ಶುಲ್ಕ ಕಟ್ಟದ ಮಕ್ಕಳನ್ನು ಕೆಲವು ಶಾಲೆಗಳಲ್ಲಿ ಹೊರಗೆ ನಿಲ್ಲಿಸಲಾಗಿದೆ. ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನ ಹೊರಗೆ ಕೂರಿಸಿದ ಆರೋಪ ಖಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದೆ. ಪರೀಕ್ಷೆ ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳಿಂದ ಶುಲ್ಕ ಸುಲಿಗೆ ಎಂಬ ಬಗ್ಗೆ ಆರೋಪ ವ್ಯಕ್ತವಾಗಿದೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ಕಾವೇರಿ ಶಾಲೆಯಲ್ಲಿ ಶುಲ್ಕ ಪಾವತಿ ಮಾಡಿಲ್ಲವೆಂದು ಪರೀಕ್ಷೆ ಬರೆಯಲು ಅವಕಾಶವಿಲ್ಲದ ಘಟನೆ ನಡೆದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಕೂಡಿಹಾಕಿದೆ. ಪರೀಕ್ಷೆ ಬರೆಯಲು ಅವಕಾಶ ನೀಡದೆ ಕೂಡಿಹಾಕಿದೆ. ಕಾವೇರಿ ಶಾಲಾ ಆಡಳಿತ ಮಂಡಳಿ ನಡೆಗೆ ಪೋಷಕರ ಆಕ್ರೋಶ ವ್ಯಕ್ತವಾಗಿದೆ.
ಮತ್ತೊಂದೆಡೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿರುವ ಖಾಸಗಿ ಶಾಲೆ ವಾಸವಿ ಶಿಕ್ಷಣ ಸಂಸ್ಥೆ ವಿರುದ್ಧ ಆರೋಪ ಕೇಳಿಬಂದಿದೆ. ಶಾಲಾ ಶುಲ್ಕ ಪಾವತಿಸದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಅನುಮತಿ ನೀಡದೆ ಹೊರಗೆ ಕೂರಿಸಿದ ಆರೋಪ ಕೇಳಿಬಂದಿದೆ. 1 ರಿಂದ 7ನೇ ತರಗತಿ ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅನುಮತಿ ನೀಡದೆ ಹೊರಗೆ ಕೂರಿಸಲಾಗಿದೆ. ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿರುವ ಆಡಳಿತ ಮಂಡಳಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಸ್ಕ್ರಾಪ್ KSRTC ಬಸ್ ಈಗ ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್; ಬಸ್ನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಉಡುಪಿಯಲ್ಲಿ ವಿನೂತನ ಪ್ರಯೋಗ
ಇದನ್ನೂ ಓದಿ: ಪರೀಕ್ಷೆ ಬರೆಯಲು ಹೋಗುವಾಗ ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಗತಿ ಮತ್ತೊಂದಿಲ್ಲ: ಡಾ ಸೌಜನ್ಯ ವಸಿಷ್ಠ