ಸ್ಕ್ರಾಪ್ KSRTC ಬಸ್ ಈಗ ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್; ಬಸ್ನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಉಡುಪಿಯಲ್ಲಿ ವಿನೂತನ ಪ್ರಯೋಗ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಗ್ವಾಡಿಯಲ್ಲಿ ಕೆಎಸ್ಆರ್ಟಿಸಿಯ ಸ್ಕ್ರಾಪ್ ಬಸ್ ಈಗ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಗೊಂಡಿದೆ. ರಾಜ್ಯದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದ್ದು, ಈ ಸ್ಮಾರ್ಟ್ ಐಡಿಯಾದ ಹಿಂದೆ ಗ್ರಾಮೀಣ ಕಲಾವಿದ ಸಹೋದರರ ಸಾಹಸಗಾಥೆಯಿದೆ.
ಉಡುಪಿ: ಸಹೋದರರಿಬ್ಬರು ರಾಜ್ಯದಲ್ಲಿ ವಿನೂತನ ಪ್ರಯೋಗವೊಂದನ್ನು ಮಾಡಿದ್ದು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಸ್ಕ್ರಾಪ್ ಬಸನ್ನು ಸ್ಮಾರ್ಟ್ ಕ್ಲಾಸನ್ನಾಗಿ ಪರಿವರ್ತನೆ ಮಾಡಿದ್ದಾರೆ. ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು KSRTCಬಸ್ ಅಲ್ಲೇ ಬಂದು ಪಾಠ ಕಲಿತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಗ್ವಾಡಿಯಲ್ಲಿ ಕೆಎಸ್ಆರ್ಟಿಸಿಯ ಸ್ಕ್ರಾಪ್ ಬಸ್ ಈಗ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಗೊಂಡಿದೆ. ರಾಜ್ಯದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದ್ದು, ಈ ಸ್ಮಾರ್ಟ್ ಐಡಿಯಾದ ಹಿಂದೆ ಗ್ರಾಮೀಣ ಕಲಾವಿದ ಸಹೋದರರ ಸಾಹಸಗಾಥೆಯಿದೆ. ಪ್ರಶಾಂತ್ ಆಚಾರ್ ಹಾಗೂ ಪ್ರಕಾಶ್ ಆಚಾರ್ ಸಹೋದರರು ಬಿಡುವಿನ ವೇಳೆಯಲ್ಲಿ ಬಸ್ಸನ್ನು ಸ್ಮಾರ್ಟ್ ಕ್ಲಾಸ್ ಆಗಿ ನವೀಕರಿಸಿದ್ದಾರೆ. ಶತಮಾನದ ಹೊಸ್ತಿಲಲ್ಲಿರುವ ಬಗ್ವಾಡಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಈ ಸಹೋದರರು ಶಾಲೆಯ ಉಳಿವಿಗಾಗಿ ನಾನಾ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಉಚಿತವಾಗಿ ಸಿಕ್ಕ ಸ್ಕ್ರಾಪ್ ಬಸ್‌ಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಹೊಸ ರೂಪ ನೀಡಿದ್ದಾರೆ.
ಅಂದಹಾಗೆ ಈ ಬಸ್ ತರಗತಿಯಲ್ಲಿ 25 ವಿದ್ಯಾರ್ಥಿಗಳು ಕೂರಬಹುದಾಗಿದ್ದು, ಪ್ರೋಜೆಕ್ಟರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಬಸ್ ಒಳಗಿನ ಮೇಲ್ಭಾಗದ ಗಾಜಿಗೆ ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು, ಸಾಹಿತಿಗಳ ಚಿತ್ರ ಅಂಟಿಸಲಾಗಿದೆ. ಕೇವಲ ನಲವತ್ತು ಮಕ್ಕಳಿದ್ದ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ 87 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳಿಗೂ ಬಸ್ ಒಳಗಿನ ಪಾಠ ಖುಷಿ ನೀಡಿದೆ. ಇನ್ನು ಸ್ಕ್ರಾಫ್ಟ್ ಬಸ್ ಈ ಶಾಲೆಗೆ ಬಂದು ಸೇರಿರುವುದರ ಹಿಂದೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಇದೆಯಂತೆ.
ಒಟ್ಟಾರೆ ನಾನು ನನ್ನದು ಅನ್ನೋ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ಮನಸ್ಸಿನಿಂದ ಊರಿಗಾಗಿ, ತಾನು ಕಲಿತ ಶಾಲೆಯ ಅಭಿವೃದ್ಧಿಗಾಗಿ ನಿತ್ಯ ಕನಸು ಕಾಣುವ ಇಂತಹ ಕಲಾವಿದರಿಗೆ ನಿಜಕ್ಕೂ ಹ್ಯಾಟ್ಸಪ್.
ವರದಿ: ಹರೀಶ್, ಟಿವಿ9 ಉಡುಪಿ
ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಸಿಕ್ಸ್ಗೆ ಆಸ್ಪತ್ರೆ ಸೇರಿದ ಅಭಿಮಾನಿ