BBMP ಯಲ್ಲಿ ನೂರಾರು ಕೋಟಿ ‘ಬೃಹತ್‘ ಭ್ರಷ್ಟಾಚಾರ, ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ FIR

ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಮತ್ತು ಆರ್‌ಓ ಘಟಕಗಳ (reverse osmosis-RO) ಸ್ಥಾಪನೆ ಹೆಸರಲ್ಲಿ 702 ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ಬಿಜೆಪಿ ವಕ್ತಾರ ಎನ್‌ಆರ್‌ ರಮೇಶ್‌ ಎಸಿಬಿಗೆ ದೂರು ನೀಡಿದ್ದಾರೆ. BBMP ಐದು ವಲಯಗಳಲ್ಲಿ ಜಂಟಿ ಆಯುಕ್ತರಾಗಿ, ಮುಖ್ಯ ಅಭಿಯಂತರರಾಗಿ ಮತ್ತು ಕಾರ್ಯಪಾಲಕ ಅಭಿಯಂತರರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ವಿರುದ್ಧ ರಮೇಶ್‌ ತಮ್ಮ ದೂರಿನಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೊಳವೆ ಬಾವಿಗೆ ಕೊರೆಯಲು ನೀಡಿದ ಅನುದಾನ ಆರ್ ಆರ್ ನಗರ, ಬೊಮ್ಮನಹಳ್ಳಿ, […]

BBMP ಯಲ್ಲಿ ನೂರಾರು ಕೋಟಿ ‘ಬೃಹತ್‘ ಭ್ರಷ್ಟಾಚಾರ, ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ FIR
Edited By:

Updated on: Jun 18, 2020 | 11:52 AM

ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಮತ್ತು ಆರ್‌ಓ ಘಟಕಗಳ (reverse osmosis-RO) ಸ್ಥಾಪನೆ ಹೆಸರಲ್ಲಿ 702 ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ಬಿಜೆಪಿ ವಕ್ತಾರ ಎನ್‌ಆರ್‌ ರಮೇಶ್‌ ಎಸಿಬಿಗೆ ದೂರು ನೀಡಿದ್ದಾರೆ.

BBMP ಐದು ವಲಯಗಳಲ್ಲಿ ಜಂಟಿ ಆಯುಕ್ತರಾಗಿ, ಮುಖ್ಯ ಅಭಿಯಂತರರಾಗಿ ಮತ್ತು ಕಾರ್ಯಪಾಲಕ ಅಭಿಯಂತರರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ವಿರುದ್ಧ ರಮೇಶ್‌ ತಮ್ಮ ದೂರಿನಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಕೊಳವೆ ಬಾವಿಗೆ ಕೊರೆಯಲು ನೀಡಿದ ಅನುದಾನ
ಆರ್ ಆರ್ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 9,588 ಕೊಳವೆ ಬಾವಿಗಳು ಮತ್ತು 976 ಆರ್‌ಓ ಘಟಕಗಳಿಗೆ ಅನುಮೋದನೆ ನೀಡಲಾಗಿತ್ತು. 2016-17, 2017-18 ಮತ್ತು 2018-19ರ ಅವಧಿಯಲ್ಲಿ ಒಟ್ಟು 701 ಕೋಟಿ ರೂಗಳಿಗೆ ಅನುಮೋದನೆ ನೀಡಲಾಗಿತ್ತು.

ಆದ್ರೆ, ಅಧಿಕಾರಿಗಳು ಯೋಜನೆಗಳನ್ನ ಸಮರ್ಪಕವಾಗಿ ಜಾರಿ ಮಾಡದೆ, ಅವ್ಯವಹಾರ ಮಾಡಿದ್ದಾರೆಂದು ರಮೇಶ್‌ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ಆರೋಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.