ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಇನ್ನೂ ಹಸಿಯಾಗಿದೆ. ಸದ್ಯ ಮೇಲ್ನೋಟಕ್ಕೆ ಕೊರೊನಾ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆಯಾದರೂ ಯಾವ ಕ್ಷಣದಲ್ಲಿ ಸೋಂಕು ಮತ್ತೆ ಮೂರನೇ ಅಲೆಯನ್ನು ಎಬ್ಬಿಸುವುದೋ ಎಂಬ ಭಯ ಜನರಲ್ಲಿದೆ. ಇನ್ನೊಂದೆಡೆ ಕೇರಳದಲ್ಲಿ ಆತಂಕ ಹುಟ್ಟಿಸಿರುವ ನಿಫಾ ವೈರಸ್ ಕೂಡಾ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲೇ ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, 10 ದಿನಗಳ ಅವಧಿಯಲ್ಲಿ 25 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿ, 7 ಜನ ಸಾವಿಗೀಡಾಗಿದ್ದಾರೆ ಎಂಬ ವರದಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗುತ್ತಿರುವ ವೈರಸ್‌ಗಳ ಕಾಟ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗುವಂತೆ ಕಾಣುತ್ತಿದೆ. ಕೊರೊನಾ, ನಿಫಾ, ಬ್ಲ್ಯಾಕ್ ಫಂಗಸ್ ಎಲ್ಲವೂ ಒಂದರ ಬೆನ್ನಿಗೆ ಒಂದು ನಿಂತಿರುವಂತೆ ಆಗಿದ್ದು, ಜನ ಮೈಮರೆತರೆ ಯಾವಾಗ ಬೇಕಾದರೂ ಅಪಾಯದ ಸನ್ನಿವೇಶ ಉದ್ಭವಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈವರೆಗೆ 3,904 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದ್ದು, 458 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಪತ್ತೆಯಾದ ಬ್ಲ್ಯಾಕ್ ಫಂಗಸ್ ಸೊಂಕಿನ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಡುಬಂದಿದ್ದು, ಬೆಂಗಳೂರು ಒಂದರಲ್ಲೇ ಒಟ್ಟು 1,236 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಆ ಪೈಕಿ ಈವರೆಗೆ 154 ಜನ ಸಾವಿಗೀಡಾಗಿದ್ದಾರೆ. ಬಹುಮುಖ್ಯವಾಗಿ ಕಳೆದ ಹತ್ತು ದಿನಗಳಲ್ಲಿ 25 ಮಂದಿಗೆ ಬ್ಲಾಕ್ ಫಂಗಸ್ ಸೋಂಕು ತಗುಲಿದ್ದು, ಏಳು ಜನರ ಸಾವು ಸಂಭವಿಸಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಾಲಾಗಿವೆ ಎನ್ನುವುದರ ಮಾಹಿತಿ ಇಲ್ಲಿದೆ
100ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾದ ಜಿಲ್ಲೆಗಳು:
ಧಾರವಾಡದಲ್ಲಿ- 345
ವಿಜಯಪುರದಲ್ಲಿ – 236
ಕಲಬುರುಗಿಯಲ್ಲಿ 216
ಬಳ್ಳಾರಿಯಲ್ಲಿ – 176
ಚಿತ್ರದುರ್ಗದಲ್ಲಿ- 167
ಬೆಳಗಾವಿಯಲ್ಲಿ – 159
ರಾಯಚೂರಿನಲ್ಲಿ – 142
ಮೈಸೂರಿನಲ್ಲಿ – 137
ಬಾಗಲಕೋಟೆಯಲ್ಲಿ -131
ದಾವಣಗೆರೆಯಲ್ಲಿ- 127
ಕೋಲಾರದಲ್ಲಿ – 114
ದಕ್ಷಿಣ ಕನ್ನಡದಲ್ಲಿ – 106
ಕಡಿಮೆ ಪ್ರಕರಣಗಳು ಕಂಡುಬಂದ ಜಿಲ್ಲೆಗಳು
ಧಾರವಾಡ – 50
ಬಳ್ಳಾರಿ – 28
ದಕ್ಷಿಣ ಕನ್ನಡದಲ್ಲಿ – 25
ಕಲಬುರ್ಗಿಯಲ್ಲಿ – 24
ದಾವಣಗೆರೆ ಹಾಗೂ ಮೈಸೂರಿನಲ್ಲಿ ತಲಾ 20
ಶಿವಮೊಗ್ಗ – 15
ಬಾಗಲಕೋಟೆಯಲ್ಲಿ – 13
ರಾಯಚೂರಿನಲ್ಲಿ – 12
ಕೋಲಾರ, ಹಾಸನ, ಚಿಕ್ಕಬಳ್ಳಾಪುರದಲ್ಲಿ ತಲಾ 11
ಗದಗದಲ್ಲಿ 10
ಇದನ್ನೂ ಓದಿ:
Nipah Virus: ಕೊವಿಡ್ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?
(Black Fungus cases increasing silently amid of Covid 19 and Nipah fear in Karnataka)