ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬುಧವಾರ ತಡರಾತ್ರಿ ಮನೆಯ ಗೇಟ್ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ. ಬೆಂಕಿ ನಂದಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ. ಕಿಶೋರ್ ಎಂಬುವರಿಗೆ ಸೇರಿದ ಮನೆ ಮತ್ತು ಕಾರು ಇದಾಗಿದೆ. ಹರೀಶ್, ರಾಜಶೇಖರ್ ಮತ್ತು ಮುತ್ತಪ್ಪ ಗಾಯಗೊಂಡಿರುವ ಅಗ್ನಿಶಾಮಕ ಸಿಬ್ಬಂದಿ.
ಏನಾಯ್ತು?: ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ UPS ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ.
ಘಟನೆ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಂಕಿ ಬಿದ್ದ ಕೂಡಲೇ ಟೆರೇಸ್ ಮೂಲಕ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಟೆರೇಸ್‌ನಲ್ಲಿದ್ದ ಗೇಟ್ ಒಡೆದ ಈ ಮೂವರೂ, ಪಕ್ಕದ ಬಿಲ್ಡಿಂಗ್‌ಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮನೆ, ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.
Car Blast: ಎದ್ನೋ ಬಿದ್ನೋ ಅಂತಾ ಓಡಿದ ಜನ, ಅಗ್ನಿಶಾಮಕ ಸಿಬ್ಬಂದಿ |Tv9 kannada
(blast during extinguishing of fire in front of house in ittamadu bengaluru)
Published On - 10:06 am, Thu, 18 November 21