ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ: ಐಸಿಸ್​ಗೆ ಯುವಕರನ್ನು ಸೆಳೆಯುತ್ತಿದ್ದ ಆರೋಪ

ಯುವಕರನ್ನು ಐಸಿಸ್​ನತ್ತ ಆಕರ್ಷಿಸುವುದರೊಂದಿಗೆ ಹಣಕಾಸು ಸಂಗ್ರಹಿಸಿಕೊಡಲೂ ಈತ ಪ್ರಯತ್ನಿಸುತ್ತಿದ್ದ ಎಂದು ಎನ್​ಐಎ ಹೇಳಿದೆ.

ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ: ಐಸಿಸ್​ಗೆ ಯುವಕರನ್ನು ಸೆಳೆಯುತ್ತಿದ್ದ ಆರೋಪ
ಎನ್​ಐಎ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 17, 2021 | 10:44 PM

ಬೆಂಗಳೂರು: ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆಯ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (National Investigation Agency – NIA) ಸಂಸ್ಥೆಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಶಂಕಿತನನ್ನು ಜುಹೇಬ್ ಶಕೀಲ್ ಎಂದು ಗುರುತಿಸಲಾಗಿದೆ. ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಶಕೀಲ್, ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಐಸಿಸ್, ಐಎಸ್ಐಎಲ್ ಜೊತೆಗೆ ಸಂಪರ್ಕ ಹೊಂದಿದ್ದ. ಕಳೆದ ಒಂದು ವರ್ಷದಿಂದ ಇವನನ್ನು ಎನ್​ಐಎ ಹುಡುಕುತ್ತಿತ್ತು. ಮುಸ್ಲಿಂ ಯುವಕರನ್ನ ಸೆಳೆದು ಐಸಿಸ್ ಸಂಘಟನೆಗೆ ಸೇರಿಸುತ್ತಿದ್ದ ಎಂದು ಎನ್​ಐಎ ಅನುಮಾನಿಸಿದೆ.

ಮುಸ್ಲಿಂ ಯುವಕರನ್ನು ಐಸಿಸ್​ನತ್ತ ಆಕರ್ಷಿಸುವುದರೊಂದಿಗೆ ಹಣಕಾಸು ಸಂಗ್ರಹಿಸಿಕೊಡಲೂ ಪ್ರಯತ್ನಿಸುತ್ತಿದ್ದ. ತಿಲಕ್ ನಗರ ಮೂಲದ 32ರ ಹರೆಯದ ಶಕೀಲ್ ಕಂಪ್ಯೂಟರ್ ಅಪ್ಲಿಕೇಶನ್​ ಪರಿಣಿತನೂ ಹೌದು. ಸೆಪ್ಟೆಂಬರ್ 2020ರಲ್ಲಿ ಮೊಹಮದ್ ತೌಖಿರ್ ಮೊಹ್ಮೂದ್, ಇರ್ಫಾನ್ ನಾಸೀರ್, ಶಿಹಾಬ್ ಮತ್ತು ಝುಹಾಬ್ ಹಮೀದ್ ವಿರುದ್ಧ ಎನ್​ಐಎ ಪ್ರಕರಣ ದಾಖಲಿಸಿಕೊಂಡಿತ್ತು.

ಐಸಿಸ್ ಚಟುವಟಿಕೆಗಳಿಗೆ ಹಣ ಸಂಗ್ರಹಣೆಗಾಗಿ ಝುಹಾಬ್ ಮತ್ತು ತೌಖಿರ್​ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಪತ್ತೆಯಾಗಿತ್ತು. ಕುರಾನ್ ಅಧ್ಯಯನ ಗುಂಪುಗಳ ಮೂಲಕ ಯುವಕರಲ್ಲಿ ಮೂಲಭೂತವಾದದ ವಿಚಾರಗಳನ್ನು ಬಿತ್ತಿ ಐಸಿಸ್ ವಿಚಾರಧಾರೆ ಬಿತ್ತುತ್ತಿದ್ದರು. ಟರ್ಕಿ ಮೂಲಕ ಸಿರಿಯಾಗೆ ಕಳಿಸಿ ಐಸಿಸ್​ ಸಂಘಟನೆಯ ತೊಡಗಿಸುತ್ತಿದ್ದರು ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

2013-14ರ ಅವಧಿಯಲ್ಲಿ ಬೆಂಗಳೂರಿನಿಂದ ಹಲವು ಯುವಕರನ್ನು ಸಿರಿಯಾಗೆ ಕಳಿಸಿ ಐಸಿಸ್ ಚಟುವಟಿಕೆಗಳಲ್ಲಿ ತೊಡಗಿಸಿದ ಆರೋಪದ ಮೇಲೆ ತೌಖಿರ್​ನನ್ನು ಅಕ್ಟೋಬರ್ 23ರಂದು ಬಂಧಿಸಲಾಗಿತ್ತು. ಈತ ಸೌದಿ ಅರೇಬಿಯಾದಲ್ಲಿ ದಂತವೈದ್ಯನಾಗಿದ್ದ. ಸೌದಿಯಿಂದ ಬಂದಿದ್ದ ತೌಖಿರ್​ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ: ಐಸಿಸ್ ಉಗ್ರರೊಂದಿಗೆ ಸಂಬಂಧ ಹೊಂದಿದ್ದ ಆರೋಪ: ಶಂಕಿತನ ಬಂಧಿಸಿದ ಎನ್​ಐಎ ಇದನ್ನೂ ಓದಿ: ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ‌ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ