ರಿಯಲ್ ಟೈಮ್ ಅಪ್​ಡೇಟ್, ಜನಸಂದಣಿ, ಪ್ರಯಾಣ ಮಾಹಿತಿಗಾಗಿ BLR Pulse ಆ್ಯಪ್ ಅಭಿವೃದ್ಧಿಪಡಿಸಿದ ಬೆಂಗಳೂರು ವಿಮಾನ ನಿಲ್ದಾಣ

|

Updated on: Jun 26, 2023 | 3:13 PM

ಈ ಆ್ಯಪ್ ವಿಮಾನದ ರಿಯಲ್​ಟೈಮ್ ಮಾಹಿತಿ, ಪ್ರವೇಶ ಗೇಟ್‌ಗಳು, ಚೆಕ್-ಇನ್ ಕೌಂಟರ್‌ಗಳು ಮತ್ತು ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ಪ್ರಯಾಣಿಕರಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಪ್ರಯಾಣಿಕರ ಮೊಬೈಲ್ ಅಥವಾ ಇಮೇಲ್ ಇನ್‌ಬಾಕ್ಸ್‌ಗಳಿಗೆ ನೇರವಾಗಿ ಸಂದೇಶ ಕಳುಹಿಸುವ ಮೂಲಕ ಒದಗಿಸಲಿದೆ.

ರಿಯಲ್ ಟೈಮ್ ಅಪ್​ಡೇಟ್, ಜನಸಂದಣಿ, ಪ್ರಯಾಣ ಮಾಹಿತಿಗಾಗಿ BLR Pulse ಆ್ಯಪ್ ಅಭಿವೃದ್ಧಿಪಡಿಸಿದ ಬೆಂಗಳೂರು ವಿಮಾನ ನಿಲ್ದಾಣ
ಬಿಎಲ್‌ಆರ್ ಪಲ್ಸ್ ಆ್ಯಪ್
Follow us on

ಬೆಂಗಳೂರು: ಸುಗಮ ಪ್ರಯಾಣಕ್ಕಾಗಿ ಮತ್ತು ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ‘ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಪಲ್ಸ್’ ಅಥವಾ ‘ಬಿಎಲ್‌ಆರ್ ಪಲ್ಸ್ (BLR Pulse)’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಅನಾವರಣಗೊಳಿಸಿದೆ.

ಈ ಆ್ಯಪ್ ಭದ್ರತಾ ತಪಾಸಣೆಗೆ ದೀರ್ಘ ಸರತಿ ಸಾಲುಗಳು, ಕಾಯುವ ಸಮಯ ಇತ್ಯಾದಿ ಸಾಮಾನ್ಯ ಪ್ರಯಾಣದ ಪೂರ್ವ ಆತಂಕಗಳನ್ನು ನಿವಾರಿಸಲಿದೆ. ಪ್ರಯಾಣಿಕರಿಗೆ ನಿರ್ಗಮನ ಮತ್ತು ಆಗಮನದ ಸಮಯದಲ್ಲಿ ಟರ್ಮಿನಲ್​ಗಳೊಂದಿಗೆ ರಿಯಲ್ ಟೈಮ್ ನ್ಯಾವಿಗೇಷನ್ ಅನ್ನು ಒದಗಿಸಲಿದ್ದು, ಅವರ ಅಗತ್ಯವನ್ನು ಪೂರೈಸಲಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಆ್ಯಪ್​​ನಲ್ಲಿ ಪ್ರಯಾಣಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್‌ಬಾಟ್ ಸೌಲಭ್ಯ ಕೂಡ ಇದೆ. ಈ ಸೇವೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದ್ದು, ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಎಲ್‌ಆರ್ ಪಲ್ಸ್ ಆ್ಯಪ್ ಪ್ರಯೋಜನಗಳೇನು?

  • ವಿಮಾನಗಳ ಸಮಯ, ರಿಯಲ್​ಟೈಮ್ ನೊಟಿಫಿಕೇಶನ್​ಗಳನ್ನು ನೀಡಲಿದೆ.
  • ವಿವಿಧ ಟಚ್‌ಪಾಯಿಂಟ್‌ಗಳಲ್ಲಿ ಭದ್ರತಾ ತಪಾಸಣೆಯ ಸರತಿ ಸಾಲುಗಳ ರಿಯಲ್​​ಟೈಮ್ ಅಪ್​ಟೇಟ್ ದೊರೆಯಲಿದೆ
  • ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಕಾಯ್ದಿರಿಸಲು, ಆಹಾರವನ್ನು ಆರ್ಡರ್ ಮಾಡಲು ಹಾಗೂ ಅದನ್ನು ನಿಲ್ದಾಣದ ಗೇಟ್‌ಗೆ ತಲುಪಿಸಲು ನೆರವಾಗಲಿದೆ
  • ಕಳೆದುಹೋದ ವಸ್ತುಗಳನ್ನು ಗುರುತಿಸಲು ಮತ್ತು ಪಡೆಯಲೂ ನೆರವಾಗಲಿದೆ
  • ಪ್ರಯಾಣದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್‌ಬಾಟ್
  • ಕೊನೆಯ ನಿಮಿಷದ ಚೆಕ್-ಇನ್​ಗಳ ಮಾಹಿತಿ
  • ಸಾರಿಗೆ ಸೇವೆ ಅಥವಾ ಪಾರ್ಕಿಂಗ್ ವಿವರಗಳನ್ನು ಪರಿಶೀಲಿಸಲು ನೆರವಾಗಲಿದೆ
  • ರಿಟೇಲ್ ಅಂಗಡಿಗಳು ಮತ್ತು ಎಫ್​&ಬಿ ಔಟ್‌ಲೆಟ್‌ಗಳ ರಿಯಾಯಿತಿ ಕೊಡುಗೆಗಳ ಪ್ರಯೋಜನ ಪಡೆಯಲು ನೆರವಾಗಲಿದೆ.

ವಿಮಾನ ನಿಲಗ್ದಾಣದ ಪ್ರಕಟಣೆ ಪ್ರಕಾರ, ಈ ಆ್ಯಪ್ ವಿಮಾನದ ರಿಯಲ್​ಟೈಮ್ ಮಾಹಿತಿ, ಪ್ರವೇಶ ಗೇಟ್‌ಗಳು, ಚೆಕ್-ಇನ್ ಕೌಂಟರ್‌ಗಳು ಮತ್ತು ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ಪ್ರಯಾಣಿಕರಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಪ್ರಯಾಣಿಕರ ಮೊಬೈಲ್ ಅಥವಾ ಇಮೇಲ್ ಇನ್‌ಬಾಕ್ಸ್‌ಗಳಿಗೆ ನೇರವಾಗಿ ಸಂದೇಶ ಕಳುಹಿಸುವ ಮೂಲಕ ಒದಗಿಸಲಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ; ಸೆ.1 ರಿಂದ ಟರ್ಮಿನಲ್ 2ನಿಂದ ಕಾರ್ಯಾಚರಿಸಲಿವೆ ಅಂತಾರಾಷ್ಟ್ರೀಯ ವಿಮಾನಗಳು

ಆ್ಯಪ್​​ನಲ್ಲಿರುವ ‘ವೇಫೈಂಡರ್’ ವೈಶಿಷ್ಟ್ಯವು ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶವನ್ನು ಸುಲಭವಾಗಿಸಲಿದೆ. ಪ್ರಯಾಣಿಕರು ತಮ್ಮ ಅಲ್ಪಾವಧಿಯ ತಂಗುವಿಕೆಗಾಗಿ ಆ್ಯಪ್ ಮೂಲಕ ಹೋಟೆಲ್ ಅನ್ನು ಬುಕ್ ಮಾಡಬಹುದು ಅಥವಾ ಅವರ ಕೊನೆಯ ನಿಮಿಷದ ಫ್ಲೈಟ್ ಚೆಕ್-ಇನ್‌ಗಳನ್ನು ಪೂರ್ಣಗೊಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆ್ಯಪ್ ಅನ್ನು ಆಂಡ್ರಾಯ್ಡ್‌ಗಾಗಿ ಪ್ಲೇ ಸ್ಟೋರ್ ಮತ್ತು ಆಪಲ್‌ಗಾಗಿ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Mon, 26 June 23