ಕೊಲೆ ಯತ್ನ ಪ್ರಕರಣ: ಖಾಸಗಿ ಜೆಟ್ನಲ್ಲಿ ನೇಪಾಳಕ್ಕೆ ಪರಾರಿಯಾಗಿದ್ದ ಉದ್ಯಮಿ ಪುತ್ರ ಅರೆಸ್ಟ್
ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಉದ್ಯಮಿಯ ಪುತ್ರ ವೇದಾಂತ್ ದುಗರ್ನನ್ನು ದೇವನಹಳ್ಳಿ ಸಮೀಪ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕೊಲೆ ಯತ್ನ (Murder Attempt) ಪ್ರಕರಣದಲ್ಲಿ ಭಾಗಿಯಾಗಿ ಖಾಸಗಿ ಜೆಟ್ ಮೂಲಕ ನೇಪಾಳಕ್ಕೆ (Nepal) ಎಸ್ಕೇಪ್ ಆಗಿದ್ದ ಆರೋಪಿ ವೇದಾಂತ್ ದುಗರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಕಠ್ಮಂಡುವಿನಿಂದ ಬೆಂಗಳೂರಿಗೆ ದುಗರ್ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Airport) ಸಿಬ್ಬಂದಿ ಆರ್ಟಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು, ಉದ್ಯಮಿ ಪುತ್ರನಾಗಿರುವ ದುಗರ್ನನ್ನು ಬಂಧಿಸಿದ್ದಾರೆ.
ಮೇ 9ರಂದು ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ್ದ. ಈ ಕುರಿತು ಆರ್ಟಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ವೇದಾಂತ್ ಮೇ 11ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಬಾಂಬೆಗೆ ಹೋಗಿದ್ದ. ನಂತರ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿ ಅಲ್ಲಿಂದ ಖಾಸಗಿ ಜೆಟ್ ಮೂಲಕ ನೇಪಾಳಕ್ಕೆ ಏಸ್ಕೇಪ್ ಆಗಿದ್ದನು. ಆರೋಪಿಯನ್ನು ಹುಡುಕಿಕೊಂಡು ಮುಂಬೈಗೆ ಹೋಗಿದ್ದ ಆರ್ಟಿ ನಗರ ಪೊಲೀಸರು ವಾಪಸ್ ಆಗಿದ್ದರು.
ಇದನ್ನೂ ಓದಿ: ಕೋಟ್ಯಾಧಿಪತಿಯಾಗಲು ಡಾಬಾದಲ್ಲಿ ಪರಿಚಯನಾಗಿದ್ದ ಗೆಳೆಯನನ್ನು ಅದೇ ಡಾಬಾದ ಮುಂದೆ ಹತ್ಯೆಗೈದ
ಪ್ರಕರಣದ ಹಿನ್ನೆಲೆ
ವೈಷ್ಣವಿ ಬಿಲ್ಡರ್ಸ್ ಮಾಲಿಕ ಗೋವಿಂದರಾಜು ಪುತ್ರ ದರ್ಶನ್ ಹಾಗೂ ವಿಎಆರ್ ಬಿಲ್ಡರ್ಸ್ ಪುತ್ರ ಸಂಜಯ್ ದಗ್ಗರ್ ಪುತ್ರ ವೇದಾಂತ್ ದಗ್ಗರ್ ಇಬ್ಬರು ಸ್ನೇಹಿತರು. ಇವರಿಬ್ಬರು ಆರ್.ಟಿ.ನಗರದ ಫೋರ್ ಸೀಜನ್ ಹೋಟೆಲ್‌ನಲ್ಲಿ ಜೂನ್ 9ರಂದು ನಡೆದಿದ್ದ ಸೂರ್ಯ ಎಂಬುವವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ವೇದಾಂತ್ ದುಗಾರ್ನನ್ನ ಮಾತನಾಡಿಸದೇ ಹೊರಟಿದ್ದ.
ಈ ವಿಚಾರ ಫೋರ್ ಸೀಸನ್ ಹೋಟೆಲ್‌ನಲ್ಲಿ ಭೇಟಿಯಾದಾಗ ಇಬ್ಬರ ನಡುವೆ ಕಿರಿಕ್ ನಡೆದಿತ್ತು. ಎಲ್ಲರೂ ನನ್ನನ್ನ ಮಾತನಾಡಿಸುತ್ತಾರೆ ನೀನ್ಯಾಕೆ ಮಾತನಾಡಿಸಲ್ಲ ಎಂದು ಆಗಮ್ ದುಗಾರ್ ಪ್ರಶ್ನಿಸಿದ್ದ. ಈ ವೇಳೆ ದರ್ಶನ್ ಅದು ನನ್ನಿಷ್ಟ ಎಂದು ಎದುರುತ್ತರಿಸಿದ್ದ. ಇದರಿಂದ ಕುಪಿತಗೊಂಡ ಆಗಮ್, ಬಿಯರ್ ಬಾಟಲ್ನಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ