BMRCL SOP: ನಿರ್ಮಾಣ ಕಾಮಗಾರಿ ವೇಳೆ ಅನುಸರಿಸಬೇಕಾದ ಮಾರ್ಗಸೂಚಿ ಪರಿಷ್ಕರಿಸಿದ ಮೆಟ್ರೋ ನಿಗಮ, ಅವಘಡ ತಡೆಗೆ ಕ್ರಮ

BMRCL New SOP: ಇನ್ನು ಮುಂದೆ ಮೂರು ಹಂತಗಳಲ್ಲಿ ಕಂಬಿ ಕಟ್ಟಿ ಕಾಂಕ್ರೀಟ್ ಹಾಕಿದರೂ ಕಡ್ಡಾಯವಾಗಿ ಕ್ರೇನ್ ಬಳಕೆಯಾಗಬೇಕು ಎಂದು ಬಿಎಂಆರ್​ಸಿಎಲ್​ ಹೊಸ ಎಸ್​ಒಪಿ ದಾಖಲೆಯಲ್ಲಿ ಸೂಚಿಸಿದೆ.

BMRCL SOP: ನಿರ್ಮಾಣ ಕಾಮಗಾರಿ ವೇಳೆ ಅನುಸರಿಸಬೇಕಾದ ಮಾರ್ಗಸೂಚಿ ಪರಿಷ್ಕರಿಸಿದ ಮೆಟ್ರೋ ನಿಗಮ, ಅವಘಡ ತಡೆಗೆ ಕ್ರಮ
ಮೆಟ್ರೋ ಪಿಲ್ಲರ್​ ಕುಸಿದಿರುವುದು (ಎಡಚಿತ್ರ). ಮೃತ ತಾಯಿ ಮತ್ತು ಮಗು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 09, 2023 | 8:17 AM

ಬೆಂಗಳೂರು: ನಾಗವಾರ ಸಮೀಪ ಮೆಟ್ರೋ ನಿರ್ಮಾಣಕ್ಕಾಗಿ ಬಳಕೆಯಾಗುತ್ತಿದ್ದ ಕಂಬ ಕುಸಿದು ತಾಯಿ-ಮಗು ಸಾವನ್ನಪ್ಪಿದ ನಂತರ ಮೆಟ್ರೋ ನಿಗಮವು (Bangalore Metro Rail Corporation Limited – BMRCL) ನಿರ್ಮಾಣ ಕಾಮಗಾರಿ ನಿರ್ವಹಿಸುವ ವೇಳೆ ಅನುಸರಿಸಬೇಕಿರುವ ಮಾರ್ಗದರ್ಶಿ ನಿಯಮಗಳನ್ನು ಪರಿಷ್ಕರಿಸಲು (Standard Operating Procedure – SOP) ಮುಂದಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (Indian Institute of Science – IISc) ತಜ್ಞರು ಸಲ್ಲಿರುವ ಅಧ್ಯಯನ ವರದಿಯಲ್ಲಿರುವ ಶಿಫಾರಸು ಆಧರಿಸಿ ಹೊಸ ಎಸ್​ಒಪಿಗಳನ್ನು ಬಿಎಂಆರ್​ಸಿಎಲ್ ರೂಪಿಸಿದೆ. ಈ ಎಸ್​ಒಪಿಯ ಬಗ್ಗೆಯೂ ಬಿಎಂಆರ್​ಸಿಎಲ್ ಐಐಎಸ್​ಸಿ ಪ್ರತಿಕ್ರಿಯೆ ಕೋರಿದೆ.

ನಗರದಲ್ಲಿ ಎಲ್ಲಿಯೇ ಆದರೂ ‘ನಮ್ಮ ಮೆಟ್ರೋ’ ಕಾಮಗಾರಿ ನಿರ್ವಹಿಸುವಾಗ ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು’ ಎಂದು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ. ಪಿಲ್ಲರ್ ನಿರ್ಮಿಸುವಾಗ ಅದಕ್ಕೆ ಬಳಕೆಯಾದ ಕಂಬಿಗಳನ್ನು ಹಿಡಿದಿಡಲು ಕ್ರೇನ್ ಬಳಸಬೇಕಿತ್ತು. ಕ್ರೇನ್ ಬಳಕೆ ಆಗದಿರುವುದು ಸಹ ಅವಘಡಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯಬಾರದು. ಹೀಗಾಗಿ ಐಐಎಸ್​ಸಿ ತಜ್ಞರಿಗೆ ನಾವು ರೂಪಿಸಿರುವ ಮಾರ್ಗದರ್ಶಿ ನಿಯಮಗಳನ್ನು ಕಳಿಸಿಕೊಟ್ಟಿದ್ದೇವೆ. ಅವರ ಪ್ರತಿಕ್ರಿಯೆಯ ನಂತರ ಆದೇಶ ಹೊರಡಿಸುತ್ತೇವೆ ಎಂದು ಮೆಟ್ರೋ ನಿಗಮವು ಹೇಳಿದೆ.

ಐಐಎಸ್​ಸಿಗೆ ಕಳಿಸಿರುವ ಎಸ್​ಒಪಿ ಪ್ರಸ್ತಾವದ ಮುಖ್ಯ ಅಂಶಗಳು

  1. 12 ಮೀಟರ್​ವರೆಗೆ ಮೊದಲು ಕಾಂಕ್ರೀಟ್ ಹಾಕಬೇಕು. ನಂತರ ಮೇಲಿನ ಭಾಗಕ್ಕೆ ಕಂಬಿ ಕಟ್ಟಿ, ಕಾಂಕ್ರೀಟ್ ಹಾಕಬೇಕು.
  2. 12 ಮೀಟರ್​ನಿಂದ 18 ಮೀಟರ್​ವರೆಗೆ ಕಂಬಿ ಕಟ್ಟಿ ಕಾಂಕ್ರಿಟ್ ಹಾಕಬೇಕು. ನಂತರದ 24 ಮೀಟರ್​ಗೆ ಕಾಂಕ್ರೀಟ್ ಹಾಕಬೇಕು. ಅಂದರೆ ಎತ್ತರವನ್ನು ಒಟ್ಟು 3 ಹಂತಗಳಲ್ಲಿ ಬೇರ್ಪಡಿಸಿಕೊಂಡು ಕಾಂಕ್ರೀಟ್ ಹಾಕಬೇಕು
  3. ಮೂರು ಹಂತಗಳಲ್ಲಿ ಕಂಬಿ ಕಟ್ಟಿ ಕಾಂಕ್ರೀಟ್ ಹಾಕಿದರೂ ಕಡ್ಡಾಯವಾಗಿ ಕ್ರೇನ್ ಬಳಕೆಯಾಗಬೇಕು.
  4. ಡಿಸೈನ್​ನಲ್ಲಿ ಏನು ಹೇಳಿದ್ದರೂ ಕನಿಷ್ಠ 12 ಎಂಎಂ ಸಾಮರ್ಥ್ಯದ ಗಾಯ್ ವೈಯರ್ ಹಾಕುವುದು ಕಡ್ಡಾಯ
  5. ಪಿಲ್ಲರ್​ನ ನಾಲ್ಕು ಭಾಗದಲ್ಲೂ ಕಾಂಕ್ರೀಟ್ ಹೆವಿ ವೇಟ್ ಬಾಕ್ಸ್ ಆಳವಡಿಸಬೇಕು

ಕಬ್ಬಿಣದ ರಾಡ್ ಉರುಳಿ ತಾಯಿ-ಮಗು ಸಾವು

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ (Bengaluru Metro pillar fall) ಪರಿಣಾಮ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ಜನವರಿ 10ರಂದು ನಡೆದಿತ್ತು. ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ ದುರ್ದೈವಿಗಳು. ಗಂಭೀರ ಸ್ಥಿತಿಯಲ್ಲಿರುವ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿತು. ಬೈಕ್ ಓಡಿಸುತ್ತಿದ್ದ ಮೃತ ಮಹಿಳೆಯ ಪತಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಲ್ಯಾಣನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್​ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿದೆ.

ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಮತ್ತು ಮಾನ್ಯತಾ ಟೆಕ್ ಪಾರ್ಕ್​ನಲ್ಲಿರುವ ಮೋಟೋರೋಲಾ ಕಂಪನಿಯಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ ನಾಗವಾರದಲ್ಲಿ ನೆಲೆಸಿದ್ದರು. ಅದರಂತೆ ಲೋಹಿತ್ ಅವರು ನಾಗವಾರದಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಪತ್ನಿಯನ್ನ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್​ಗೆ ಬಿಡಲು ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಏಕಾ ಏಕಿಯಾಗಿ ಬಿದ್ದಿದ್ದು ಎಲ್ಲರಿಗೂ ಗಾಯಗಳಾಗಿದ್ದವು. ಗಾಯಾಳುಗಳ ಪೈಕಿ ತೇಜಸ್ವಿನಿ ಮತ್ತು ಓರ್ವ ಪುತ್ರ ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ: ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಸಾವು ಪ್ರಕರಣ: ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Thu, 9 February 23

ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್