AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಟ್ರಾಕ್ಟರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಸಾವು

ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಬಳಿ ಕಾರೊಂದು ಎಕ ಕಾಲಕ್ಕೆ ಟ್ರಾಕ್ಟರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ದಾವಣಗೆರೆ: ಟ್ರಾಕ್ಟರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 09, 2023 | 11:18 AM

Share

ದಾವಣಗೆರೆ: ಕಾರೊಂದು ಎಕ ಕಾಲಕ್ಕೆ ಟ್ರಾಕ್ಟರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ತಾಲೂಕಿನ ರಾಮಗೊಂಡನಹಳ್ಳಿ ಬಳಿ ನಡೆದಿದೆ. ದಾವಣಗೆರೆಯಲ್ಲಿ ಮದ್ವೆ ಮುಗಿಸಿಕೊಂಡ ಸ್ವ ಗ್ರಾಮ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಗೆ ಹೋಗುತ್ತಿದ್ದ ಯುವಕರು. ರಾತ್ರಿ ಎದುರಿಗೆ ಬರುತ್ತಿದ್ದ ಟ್ರಾಕ್ಟರ್​ಗೆ ಹೊಡೆದು ನಂತರ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರಾದ ಮಂಜುನಾಥ(24) ಹಾಗೂ ಅಮೃತ್(23) ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆಯ ಎಸ್ ಎಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲಾರದ ಗಡಿಯಲ್ಲಿ ಹೆಗ್ಗಿಲ್ಲದೆ ಸಾಗಿದೆ ಸಿಮೆಂಟ್ ಕಳ್ಳತನ ಜಾಲ

ಕೋಲಾರ: ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಬಳಿ ಹೆಗ್ಗಿಲ್ಲದೆ ಸಾಗುತ್ತಿದೆ ಸಿಮೆಂಟ್ ಕಳ್ಳತನ, ಆಂಧ್ರದ ಸಿಮೆಂಟ್ ಕಂಪನಿಗಳಿಂದ ಬಲ್ಕರ್​ಗಳ ಮೂಲಕ ಬೆಂಗಳೂರಿಗೆ ರವಾನೆ ಮಾಡುವ ಸಿಮೆಂಟ್​ನ್ನು, ಲಾರಿಗಳೊಂದಿಗೆ ಶಾಮೀಲಾಗಿ ಕಳ್ಳತನ ಮಾಡಿ ಸ್ಥಳೀಯವಾಗಿ ಮಾರಾಟ ಮಾಡುಲಾಗುತ್ತಿದೆ. ಇನ್ನು ಇದಕ್ಕೆ ಈ ಲೋಕಲ್ ಸಿಮೆಂಟ್ ಮಾಫಿಯಾಗೆ ಪೊಲೀಸರ ಕುಮ್ಮಕ್ಕು, ಇದೆ ಎನ್ನಲಾಗುತ್ತಿದೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಂಧೆ ನಡೆಯುತ್ತಿದೆ.

ಗ್ಯಾಸ್ ಕಟರ್ ಬಳಿಸಿ ಬಂಗಾರದ ಅಂಗಡಿ ದರೋಡೆ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ಗ್ಯಾಸ್ ಕಟರ್ ಬಳಿಸಿ ಮೋಹನ್ ಬದ್ದಿ ಎಂಬುವವರ ಬಂಗಾರದ ಅಂಗಡಿಯನ್ನ ಸುಮಾರು ಬೆಳಗ್ಗೆ 3.30 ವೇಳೆ ದರೋಡೆ ಮಾಡಿರುವ ಘಟನೆ ನಡೆದಿದೆ. 5 ಕೆಜಿ ಬೆಳ್ಳಿ ಆಭರಣ, 80 ಗ್ರಾಂ ಚಿನ್ನದ ಆಭರಣ ಸಹಿತ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ, ಸಿಪಿಐ ಸತ್ಯಪ್ಪ ಮಾಳಗೋಡ, ಪಿಎಸ್ಐ ಸಂಪತ್ತು ಆನಿಕಿವಿ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ:Bengaluru: ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಅಪಘಾತಕ್ಕೆ BBMP, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಆರೋಪ

ಬೆಂಗಳೂರು: ಎಫ್ ಐ ಆರ್ ದಾಖಲಿಸದೆ ನಿರ್ಲಕ್ಷ ವಹಿಸಿದ್ರಾ ಪೊಲೀಸರು.?

ಬೆಂಗಳೂರು: ಜನವರಿ 19 ರಂದು ಬೈಕ್ ಕಳೆದುಕೊಂಡಿದ್ದ ರವಿ ಎಂಬಾತ ಅನ್ನಪೂರ್ಣೇಶ್ವರಿ ನಗರ ಪೊಲೀಸ ಠಾಣೆಗೆ ಸಿಸಿಟಿವಿ ಸಮೇತ ದೂರು ನೀಡಲು ಹೋಗಿದ್ದಾನೆ ಈ ವೇಳೆ ನಾಳೆ ಬಾ ಎಂದು ಹೇಳುವ ಮೂಲಕ ಪೊಲೀಸರು ಸ್ಪಂದಿಸಿಲ್ಲ. ಆದರೀಗ ಕದ್ದ ಬೈಕ್ ನಲ್ಲಿ ಕಳ್ಳ ಮೊಬೈಲ್ ಎಗರಿಸಿದ ಬಳಿಕ ಪೊಲೀಸರು ಕಳ್ಳನ ಬೆನ್ನಿಗೆ ಬಿದ್ದಿದ್ದಾರೆ.

ಬಳಿಕ ಆರೋಪಿ ಬಂಧನದ ಬಳಿಕ ರವಿ ಹಿಂದೆ ಬಿದ್ದ ಪೊಲೀಸರು, ಕೃತ್ಯ ಎಸಗಿದ್ದ ಬೈಕ್ ನ್ನು ಸೀಜ್ ಮಾಡಿ ಅದರ ಮೂಲ ಮಾಲೀಕನ‌ ಪತ್ತೆ ಮಾಡಿದ್ದಾರೆ. ಬಳಿಕ ಈತನು ಆರೋಪಿ ಎಂದು ಶಂಕಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿರುವ ರವಿ ಗೆಳೆಯ ಅನ್ನಪೂರ್ಣೇಶ್ವರಿ ನಗರ ಪೊಲೀಸ ಠಾಣೆ ವಿರುದ್ದ ಟ್ವಿಟರ್​ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ. ಇನ್ನು ಈ ಕುರಿತು ಚೇತನ್ ಸೂರ್ಯ ಎಂಬ ಸಂಘಟಕ ಬೆಂಗಳೂರು ಪೊಲೀಸರ ಸಾಮಾಜಿಕ‌ ಜಾಲತಾಣದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ