ಬೆಂಗಳೂರು: ನಗರದ ಕಾಲೇಜೊಂದರಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಪ್ರೇಮಿಗಳ ದಿನ ಆಚರಣೆ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿಯ BMS ಮಹಿಳಾ ಕಾಲೇಜಿನಲ್ಲಿ(BMS Womens College) ವ್ಯಾಲೆಂಟೈನ್ಸ್ ಡೇ(Valentine’s Day) ಆಚರಣೆ ಮಾಡಲಾಗಿದೆ. ಕಾಲೇಜು ರಜೆ ಇದ್ರೂ ಕಾಲೇಜು ಕ್ಯಾಂಪಸ್‌ನಲ್ಲಿ ನಿನ್ನೆ ತಡರಾತ್ರಿವರೆಗೂ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಮೋಜು-ಮಸ್ತಿ ಮಾಡಿ ಎಂಜಾಯ್ ಮಾಡಿದ್ದಾರೆ. ಅಲ್ಲದೆ ಮಹಿಳಾ ಕಾಲೇಜಿನಲ್ಲಿ ಪುರುಷ ವಿದ್ಯಾರ್ಥಿಗಳಿಗೂ ಎಂಟ್ರಿ ನೀಡಲಾಗಿದ್ದು ಪ್ರೇಮಿಗಳ ದಿನಾಚರಣೆಗೆ ಕಾಲೇಜು ಆಡಳಿತ ಮಂಡಳಿ ವೇದಿಕೆ ಕಲ್ಪಿಸಿಕೊಟ್ಟಿದೆ. ಕಾಲೇಜಿನಲ್ಲಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಬಸವನಗುಡಿ BMS ಮಹಿಳಾ ಕಾಲೇಜಿನಲ್ಲಿ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ಮಾಡಲಾಗಿದೆ. ಸರ್ಕಾರದ ಕೋವಿಡ್ ನಿಯಮಾವಳಿಗೆ ಎಳ್ಳುನೀರು ಬಿಟ್ಟು ವಿದ್ಯಾರ್ಥಿಗಳು ತಮ್ಮ ಪ್ರೇಮಿಗಳನ್ನು ಕಾಲೇಜಿಗೆ ಕರೆದುಕೊಂಡು ಬಂದು ಡಿಜೆಗೆ ಸ್ಟೆಪ್ಸ್ ಹಾಕಿದ್ದಾರೆ. ಕಾಲೇಜು ರಜೆ ಇದ್ದರೂ ತಡ ರಾತ್ರಿಯ ವರೆಗೆ ಪಾರ್ಟಿ ಮಾಡಿರುವ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ಸಂಜೆ 7 ಗಂಟೆಯಿಂದ ತಡರಾತ್ರಿವರೆಗೆ ಕಾಲೇಜಿನಲ್ಲಿ ಪಾರ್ಟಿ ನಡೆದಿದೆ. ರಾತ್ರಿ 11:45ರವರೆಗೂ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದಾರೆ. ಡಿಜೆ ಸಾಂಗ್, ವಿದ್ಯಾರ್ಥಿಗಳ ಚೀರಾಟ, ಕೂಗಾಟದಿಂದ ಬೇಸತ್ತ ಸ್ಥಳೀಯರು ಕಾಲೇಜು ಆಡಳಿತ ಮಂಡಳಿಗೆ ಕರೆ ಮಾಡಿದ್ದಾರೆ. ಆದ್ರೆ ಕರೆ ನಾಟ್ ರೀಚಬಲ್ ಬಂದಿದೆ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಕೂಡ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರ ಪಾರ್ಟಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ನಿದ್ದೆ ಮಾಡಲಾಗಿಲ್ಲ. ನೆಮ್ಮದಿಯಿಂದ ಮನೆಯಲ್ಲಿರಲು ಆಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ ದಾಳಿಯ 3 ವರ್ಷಗಳ ನಂತರವೂ ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಜೈಶ್ ಸಂಘಟನೆ
‘ಇಷ್ಟು ಒಳ್ಳೇ ಹುಡುಗನಿಗೆ ಇನ್ನೂ ಯಾಕೆ ಮದುವೆ ಆಗಿಲ್ಲ’; ಪ್ರೇಮಿಗಳ ದಿನವೇ ಪೂಜಾ ಹೆಗ್ಡೆ ನೇರ ಪ್ರಶ್ನೆ
Published On - 11:08 am, Tue, 15 February 22