BMS ಕಾಲೇಜಿನಲ್ಲಿ ಕ್ಲಾಸ್ ರೂಮ್ ಡೆಸ್ಕ್ ಮೇಲಿದ್ದ ಬರಹ ಕಂಡು ನಸು ನಕ್ಕ ಶಿಕ್ಷಣ ಸಚಿವ!
ಜನವರಿ 1ರಿಂದ ಶಾಲಾ, ಕಾಲೇಜುಗಳು ಆರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಬಸವನಗುಡಿಯಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಬಹು ತಿಂಗಳ ನಂತರ ಜನವರಿ 1 ರಿಂದ ಶಾಲಾ, ಕಾಲೇಜುಗಳು ಆರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಬಸವನಗುಡಿಯಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಅಧ್ಯಾಪಕರು, ಪ್ರಾಧ್ಯಾಪಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮೊದಲಿಗೆ BMS ಮಹಿಳಾ ಕಾಲೇಜಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದ್ರು.
ಈ ವೇಳೆ ಕ್ಲಾಸ್ ರೂಮ್ ಒಳಗಿದ್ದ ಡೆಸ್ಕ್ನ ಮೇಲಿದ್ದ ಬರಹಗಳನ್ನು ಕಂಡು ಸಚಿವ ಸುರೇಶ್ ಕುಮಾರ್ ನಸು ನಕ್ರು. ಬೆಂಚ್ ಮೇಲಿದ್ದ ಕಾಮಿಡಿ ಗೊಂಬೆ ಕಂಡು ಗುಡ್ ಲಿಟ್ರೆಚರ್ ಅಂತ BMS ಪ್ರಿನ್ಸಿಪಲ್ ವಿ. ಪದ್ಮ ಅವರಿಗೆ ಹೇಳಿದ್ರು.
ಮಕ್ಕಳನ್ನು ಶಾಲೆಗೆ ಕಳಿಸ್ಲೇ ಬೇಕು ಅನ್ನೋ ಒತ್ತಾಯ ಇಲ್ಲ ನಾಳೆ ಶಾಲೆ ಕಾಲೇಜು ಆರಂಭಗೊಳ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ರೌಂಡ್ಸ್ ಹೊಡೆಯುತ್ತಿದ್ದೇನೆ. ಇವತ್ತು ಜಯನಗರ, ಬಸವನಗುಡಿ ಕಡೆ ಭೇಟಿ ಕೊಟ್ಟಿದ್ದೇನೆ. ನಿನ್ನೆ ಯಲಹಂಕ ಕಡೆ ಭೇಟಿ ಕೊಟ್ಟಿದ್ದೆ. ನಾಳೆ ಆನೇಕಲ್ ಕಡೆ ಭೇಟಿ ಕೊಡಲಿದ್ದೇನೆ. ಹೇಗಿದೆ ಸಿದ್ಧತೆ ಅನ್ನೋದನ್ನ ಗಮನಿಸಲು ಭೇಟಿ ಕೊಡುತ್ತಿದ್ದೇನೆ.
ಸಿಲಬಸ್ ಹೇಗಿದೆ ಅನ್ನೋದರ ಬಗ್ಗೆ ಚರ್ಚೆ ಮಾಡ್ತಿದ್ದೇನೆ. ನಾಳೆ ಶಾಲೆ ಕಾಲೇಜು ಆರಂಭವಾಗುವ ಬೆನ್ನಲ್ಲೇ ಮೊದಲ ಪೀರಿಯಡ್ನಲ್ಲಿ ಪಾಠ ಮಾಡಬೇಡಿ ಅಂತ ಶಿಕ್ಷಕರಿಗೆ ಹೇಳಿದ್ದೇನೆ. ಮಕ್ಕಳ ಭಾವನೆ ಬಗ್ಗೆ ಕೇಳಿ ಅವರ ಅನುಭವ ಹೇಗಿದೆ ಈ ಕೋವಿಡ್ ಸಮಯದಲ್ಲಿ ಅನ್ನೋದರ ಬಗ್ಗೆ ಕೇಳಿ ಅಂತ ಸೂಚಿಸಿದ್ದೇನೆ. ಮಕ್ಕಳನ್ನು ಶಾಲೆಗೆ ಕಳಿಸ್ಲೇ ಬೇಕು ಅನ್ನೋ ಒತ್ತಾಯ ಇಲ್ಲ ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದ್ರು.
ಇನ್ನು ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಯಾವ ಪೋಷಕರಿಗೂ, ಯಾರಿಗೂ ಭಯ ಬೇಡ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಅವರು ಹೇಳಿದ್ರು.
BMS ಕಾಲೇಜ್ ಬಳಿಕ ಜಯನಗರದ ನ್ಯಾಷನಲ್ ಕಾಲೇಜ್ಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ರು. ಸ್ವತಃ ಸ್ಯಾನಿಟೈಸ್ ಮಾಡಿಕೊಂಡು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಟ್ಟು ಕಾಲೇಜು ಒಳಗೆ ಪ್ರವೇಶ ಮಾಡಿದ್ರು. ಬಳಿಕ ಕಾಲೇಜು ಪುನಾರಂಭದ ಸಿದ್ದತೆ ಪರಿಶೀಲಿಸಿದ್ರು.
Published On - 2:52 pm, Thu, 31 December 20