AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಾತ್ರ ಅಲ್ಲ, ದೇಶದ ಬೇರೆ ನಗರಗಳಲ್ಲೂ curfew ಇದೆ ನೋಡಿ.. ಎಲ್ಲಿ? ಹೇಗೆ?

ಕೊರೊನಾದ ಕುಲಾಂತರಿ ತಳಿ ಬಂದು ಮತ್ತೆ ಗಾಬರಿ ಹುಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳು ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿವೆ. ದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರನ್ನೂ ಸೇರಿ ಹಲವು ನಗರಗಳು ರಾತ್ರಿ ಓಡಾಟಕ್ಕೆ ಮತ್ತು ಸಂಭ್ರಮಾಚರಣೆಗೆ ತಣ್ಣೀರು ಚೆಲ್ಲಿವೆ.

ಬೆಂಗಳೂರು ಮಾತ್ರ ಅಲ್ಲ, ದೇಶದ ಬೇರೆ ನಗರಗಳಲ್ಲೂ curfew ಇದೆ ನೋಡಿ.. ಎಲ್ಲಿ? ಹೇಗೆ?
ಸಾಂದರ್ಭಿಕ ಚಿತ್ರ
ಡಾ. ಭಾಸ್ಕರ ಹೆಗಡೆ
| Updated By: ಆಯೇಷಾ ಬಾನು|

Updated on: Dec 31, 2020 | 1:46 PM

Share

ಕೊರೊನಾದ ಕುಲಾಂತರಿ ತಳಿ ಬಂದು ಮತ್ತೆ ಗಾಬರಿ ಹುಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳು ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿವೆ. ದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರನ್ನೂ ಸೇರಿ ಹಲವು ನಗರಗಳು ರಾತ್ರಿ ಓಡಾಟಕ್ಕೆ ಮತ್ತು ಸಂಭ್ರಮಾಚರಣೆಗೆ ತಣ್ಣೀರು ಚೆಲ್ಲಿವೆ. ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೂ ಪ್ರತಿಬಂಧ ವಿಧಿಸಲು ನಿರ್ದೇಶನ ನೀಡಿದೆ.

ಇಂಗ್ಲೆಂಡಿನಿಂದ ಬಂದಿರುವ ಸಾವಿರಕ್ಕೂ ಹೆಚ್ಚಿನ ಜನರಲ್ಲಿ 20 ಜನರಿಗೆ ಕುಲಾಂತರಿ ಕೊರೊನಾ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ನಾಗರಿಕ ವಿಮಾನಯಾನವನ್ನು ನಿಲ್ಲಿಸಿದೆ. ಪಂಜಾಬಿನ ನಗರಗಳಿಂದ ಹಿಡಿದು ಕೇರಳದಲ್ಲಿರುವ ಪ್ರಮುಖ ನಗರಗಳಲ್ಲಿ ಈ ರೀತಿಯ ನಿರ್ಬಂಧ ಹಾಕಲಾಗಿದೆ.

ಕಳೆದ 24 ಗಂಟೆಯಲ್ಲಿ 21822 ಹೊಸ ಕೇಸುಗಳು ಬಂದಿವೆ. ಇದು ನಿನ್ನೆ ಬುಧವಾರ ಬಂದ ಕೇಸುಗಳ ಲೆಕ್ಕ ತೆಗೆದುಕೊಂಡರೆ, ಇದು 6 ಪ್ರತಿಶತ ಜಾಸ್ತಿ. ದೇಶದ ವಿವಿಧ ನಗರಗಳಲ್ಲಿ ಹಾಕಿರುವ ನಿರ್ಬಂಧ ಹೇಗಿದೆ ನೋಡೋಣ ಬನ್ನಿ

ಬೆಂಗಳೂರು: ಕಲಂ 144 ಮಧ್ಯಾಹ್ನ 12 ರಿಂದಲೇ ಜಾರಿ. ಇದು ಶುಕ್ರವಾರ ಬೆಳಿಗ್ಗೆ 6 ರ ತನಕ ಇರುತ್ತದೆ

ದೆಹಲಿ: ಇಂದು ರಾತ್ರಿ 11 ರಿಂದ ನಾಳೆ ಬೆಳಿಗ್ಗೆ 6 ಗಂಟೆವರೆಗೆ ಮತ್ತು ಜನವರಿ 1 ರ ಸಂಜೆ 11 ರಿಂದ ಜನವರಿ ಬೆಳಿಗ್ಗೆ 6 ರ ತನಕ curfew.

ಮುಂಬೈ: ವಾಹನ ಚಲನವಲನಕ್ಕೆ ಅರೆ ನಿರ್ಬಂಧ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ರಾತ್ರಿ curfew.

ಚೆನ್ನೈ: ಮರೀನಾ, ಈಲಿಯೆಟ್ ಮತ್ತು ಸುತ್ತ ಮುತ್ತಲಿನ ಬೀಚ್​ಗಳನ್ನು ಮುಚ್ಚಲಾಗಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಜನಜಂಗುಳಿಗೆ ನಿರ್ಬಂಧ. ಬರುವ ಅತಿಥಿಗಳ ಪೂರ್ವಾಪರ ವಿವರಗಳನ್ನು ಹೋಟೆಲ್​ಗಳು ಇಟ್ಟುಕೊಳ್ಳಬೇಕು. 10000 ಕ್ಕೂ ಹೆಚ್ಚಿನ ಪೊಲೀಸರಿಂದ ಕಣ್ಗಾವಲು.

ಪಶ್ಚಿಮ ಬಂಗಾಳ ಮತ್ತು ಚಂಡಿಗಢ: ವಿಶೇಷ ನಿರ್ಬಂಧ ಇಲ್ಲ. ಹೋಟೆಲ್​ಗಳಿಗೆ ಬರುವ ಅತಿಥಿಗಳ ಮೇಲೆ ಕಣ್ಗಾವಲು ಮತ್ತು ರಾತ್ರಿ 11ಕ್ಕೆ ಹೋಟೆಲ್​ಗಳು ಮುಚ್ಚಬೇಕು.

ಪಂಜಾಬ್​: ಇಲ್ಲಿ ರಾತ್ರಿ curfew 10 ರಿಂದ ಬೆಳಿಗ್ಗೆ 5ರ ವರೆಗೆ ಇರುತ್ತದೆ. ಹೊಟೇಲ್​ಗಳಲ್ಲಿ 100 ಕ್ಕೂ ಹೆಚ್ಚು ಅತಿಥಿಗಳು ಇರಬಾರದೆಂಬ ಸುತ್ತೋಲೆ ಹೊರಡಿಸಲಾಗಿದೆ.